‘ಮಂಗಳನಲ್ಲಿ ಮನುಷ್ಯ ಕಾಲಿಟ್ಟ ಕ್ಷಣ’ ತಲೆಬರಹದೊಂದಿಗೆ ವಿಡಿಯೋವೊಂದು ಎರಡು ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹಳಷ್ಟು ಜನ ಅದನ್ನು ವೀಕ್ಷಿಸಿ ನಕ್ಕು ತಕ್ಷಣವೇ ಷೇರ್ ಮಾಡಿದ್ದಾರೆ. ನೀವೊಮ್ಮೆ ಆ ವಿಡಿಯೋ ನೋಡಿ
ಆದರೆ ನಿಜ ಏನಪ್ಪ ಅಂದರೆ ಬೆಂಗಳೂರಿನ ರಸ್ತೆಗುಂಡಿಗಳ ವಿರುದ್ಧ ಸಿಡಿದೆದ್ದ ಕಲಾವಿದನೊಬ್ಬ ಮಾಡಿರುವ ವಿಡಿಯೋ ಇದಾಗಿದ್ದು ಸಾಕಷ್ಟು ಮೆಚ್ಚುಗೆ ಗಳಿಸಿದೆ. ಬೆಂಗಳೂರಿನ ಹೇರೊಹಳ್ಳಿಯಲ್ಲಿರುವ ರಸ್ತೆಗಳು ಎಷ್ಟ ಅಪಾಯದಲ್ಲಿವೆ ಎಂಬುದನ್ನು ಸೃಜನಾತ್ಮಕವಾಗಿ ಈ ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ.
ಚಂದ್ರ ಅಥವಾ ಮಂಗಳ ಗ್ರಹದ ಮೇಲಿರುವ ಕುಳಗಳಂತೆ ರಸ್ತೆಯನ್ನು ತೋರಿಸಿ, ಗಗನಯಾತ್ರಿಯ ವೇಷದಲ್ಲಿರುವ ಆತ ನಿಧಾನವಾಗಿ ಆ ರಸ್ತೆ ಕುಳಿಗಳ ಮೇಲೆ ಒಂದೊಂದೆ ಹೆಜ್ಜೆಯಿಡುತ್ತಾ ಬರುತ್ತಿರುವ ಮೊದಲ ದೃಶ್ಯ ನೋಡಿ ಬಹುತೇಕರು ಇದು ಮಂಗಳ ಗ್ರಹವೇ ಇರಬೇಕು ಎಂದುಕೊಳ್ಳುತ್ತಾರೆ. ಆದರೆ 10 ಸೆಕೆಂಡ್ ಗಳಲ್ಲಿ ಅದು ಬೆಂಗಳೂರು ಎಂದು ಗೊತ್ತಾಗುತ್ತದೆ ಹೇಗೆಂದರೆ ಅದೇ ರಸ್ತೆಯಲ್ಲಿ ಆಟೋ ಮತ್ತು ಕಾರು ಹಾದುಹೋಗುತ್ತವೆ.
ವಿಡಬಂನಾತ್ಮಕವಾಗಿ ಮಾಡಿರುವ ಈ ವಿಡಿಯೋ ಪ್ರಶಂಸೆಗಳ ಜೊತೆಗೆ ಇನ್ನು ಬೆಂಗಳೂರು ರಸ್ತೆಯನ್ನು ಏಕೆ ಸರಿಪಡಿಸಿಲ್ಲ ಎಂದು ಸ್ಥಳೀಯ ಆಡಳಿತ ಬಿಬಿಎಂಪಿಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಮೈಸೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿಯವರು ಈ ಕಲಾತ್ಮಕ ಪ್ರತಿಭಟನೆಯ ಹಿಂದಿರುವ ವ್ಯಕ್ತಿಯಾಗಿದ್ದಾರೆ. ಈ ಹಿಂದೆಯೂ ಇವರು ಇಂತಹ ರಸ್ತೆ ಸಮಸ್ಯೆಗಳ ವಿರುದ್ಧ ಚಿತ್ರಬಿಡಿಸಿ ಪ್ರತಿಭಟಿಸಿದ್ದರು. ವಿಶೇಷವೆಂದರೆ ಇವರ ಹಲವು ಪ್ರತಿಭಟನೆಗಳ ಕೂಡಲೇ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ರಸ್ತೆಗಳನ್ನು ಸರಿಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ಚಿತ್ರಸಾಧನೆಯ ಕೆಲವು ಪಟಗಳು ಇಲ್ಲಿವೆ ನೋಡಿ



