ಮುಂಬೈನ ದಾದರ್ ಪ್ರದೇಶದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಮನೆ ‘ರಾಜ್‌ಗೃಹ’ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದಾಳಿಗೊಳಗಾದ ಎರಡು ಅಂತಸ್ತಿನ ಪಾರಂಪರಿಕ ಬಂಗಲೆಗೆ 24 ಗಂಟೆಗಳ ರಕ್ಷಣೆ ನೀಡುಲು ಮಹಾರಾಷ್ಟ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದರಲ್ಲಿ ಅಂಬೇಡ್ಕರ್ ಮ್ಯೂಸಿಯಂ ಇದ್ದು, ಅಲ್ಲಿ ಬಾಬಾಸಾಹೇಬರ ಪುಸ್ತಕಗಳು, ಭಾವಚಿತ್ರ, ಚಿತಾಭಸ್ಮ ಮತ್ತು ಹಡಗುಗಳು ಕಲಾಕೃತಿಗಳು ಇವೆ.
ಮುಖ್ಯ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಬಂಧಿಸಲಾಗಿದ್ದು, ಆತನ ಹಿನ್ನೆಲೆ ಮತ್ತು ದಾಳಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಾನು ಸೋಮವಾರ ಹೊರಹೋಗುವಾಗ ಕೆಲವರು ಬಂಗಲೆ ಸುತ್ತ ಅಲೆದಾಡುತ್ತಿದ್ದರು ಎಂದು ಅಂಬೇಡ್ಕರ್‌ರವರ ಮೊಮ್ಮಗ ಭೀಮ್‌ರಾವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟೆನೆಗೆ ಸಂಬಂಧಿಸಿದಂತೆ ಪೊಲೀಸರು ಅನಾಮಿಕರ ಮೇಲೆ ಸೆಕ್ಷನ್ 427, ಮತ್ತು 447ರ (50ರೂಗು ಮೇಲ್ಪಟ್ಟ ವಸ್ತುಗಳಿಗೆ ಹಾನಿ ಮತ್ತು ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ನಾವು ಇಬ್ಬರು ಶಂಕಿತರನ್ನು ಬಂಧಿಸಿದ್ದೇವೆ. ಅದರಲ್ಲಿ ಒಬ್ಬ ಬಹುತೇಕ ಕೃತ್ಯವನ್ನ ಒಪ್ಪಿಕೊಂಡಿದ್ದಾನೆ. ಹೇಳಿಕೆ ಪಡೆಯುತ್ತಿದ್ದೇವೆ ಎಂದು ಝೋನ್ 4ರ ಡಿಸಿಪಿ ಸೌರಭ್ ತ್ರಿಪಾಠಿ ತಿಳಿಸಿದ್ದಾರೆ.
ಮನೆ ಮೇಲಿನ ದಾಳಿಯನ್ನು ಹಲವಾರು ರಾಜಕೀಯ ನಾಯಕರು ಖಂಡಿಸಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಘಟೆನಯನ್ನು ಶಾಂಕಿಂಗ್ ಎಂದು ಕರೆದಿದ್ದು, ಶೀಘ್ರ ತನಿಖೆ ಮತ್ತು ಆರೋಪಿಗಳ ಪತ್ತೆಗೆ ಪೊಲೀಸರನ್ನುಒತ್ತಾಯಿಸಿದ್ದಾರೆ. ಅಂಬೇಡ್ಕರ್‌ರವರು ಬರೆದ ಎಲ್ಲಾ ಪುಸ್ತಕಗಳು ಅಲ್ಲಿವೆ. ಇದು ಮಹಾರಾಷ್ಟ್ರದ ಜನರಿಗೆ ತೀರ್ಥಯಾತ್ರೆಯ ಕೇಂದ್ರವಿದ್ದಂತೆ ಎಂದು ಉದ್ಧವ್ ಹೇಳಿದ್ದಾರೆ.
ಅಪರಿಚಿತ ಕಿಡಿಗೇಡಿಗಳು ಮಂಗಳವಾರ ಸಂಜೆ ರಾಜ್‌ಗೃಹದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಮನೆಯ ಕಿಟಕಿ ಗಾಜುಗಳು ಮತ್ತು ಸಿಸಿಟಿವಿ ಕ್ಯಾಮೆರ ಮೇಲೆ ಮನಬಂದಂತೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಮನೆ ಮುಂದಿನ ಗಿಡಗಳನ್ನು ಕಿತ್ತೆಸೆದು ಚೆಲ್ಲಾಪಿಲ್ಲಿ ಮಾಡಲಾಗಿದೆ.
ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್‌ರವರ ಮುಂಬೈ ಮನೆ ‘ರಾಜ್‌ಗೃಹ’ ಮೇಲೆ ದಾಳಿ, ಧ್ವಂಸ


