ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅಮಿತ್ ಚೌಧರಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಡಿಯೋಲಿ ಉನಿಯಾರಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಬಂಧಿಸಲು ಪೊಲೀಸರು ಯತ್ನಿಸಿದ ನಂತರ ಬುಧವಾರ ತಡರಾತ್ರಿ ರಾಜಸ್ಥಾನದ ಟೋಂಕ್‌ನ ಸಮ್ರಾವತ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ. ಚುನಾವಣಾ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿದ್ದ ಅಮಿತ್ ಚೌಧರಿ ಅವರಿಗೆ ಮತಗಟ್ಟೆಯ ಹೊರಗೆ ಮೀನಾ ಅವರು ಹಲ್ಲೆ ನಡೆಸಿದ್ದರು. ಈ ವಿಡಿಯೊ ವೈರಲ್ ಆಗಿದೆ. ಚುನಾವಣಾಧಿಕಾರಿಯ ಮೇಲೆ ಹಲ್ಲೆ
ಪೊಲೀಸರು ಮೀನಾ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಂತೆ, ಹಿಂಸಾಚಾರ ಭುಗಿಲೆದ್ದಿದ್ದು, ಗಲಭೆಕೋರರು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ 60 ಜನರನ್ನು ಬಂಧಿಸಲಾಗಿದೆ ಎಂದು ಅಜ್ಮೀರ್ ರೇಂಜ್ ಐಜಿ ಓಂ ಪ್ರಕಾಶ್ ಖಚಿತಪಡಿಸಿದ್ದಾರೆ. ಚುನಾವಣಾಧಿಕಾರಿಯ ಮೇಲೆ ಹಲ್ಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹಿಂಸಾಚಾರದ ವೇಳೆ ಉದ್ರಿಕ್ತ ಜನರು ಸುಮಾರು 24 ದೊಡ್ಡ ವಾಹನಗಳು ಮತ್ತು 48 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ, ಶೋಧ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತುಕಡಿಗಳನ್ನು ಗುರುವಾರ ಮುಂಜಾನೆ ನಿಯೋಜಿಸಲಾಯಿತು ಎಂದು ವರದಿ ಹೇಳಿದೆ.
ಘಟನೆಗಳ ಬಗ್ಗೆ ವಿವರಿಸಿದ ಟೋಂಕ್ ಎಸ್ಪಿ ವಿಕಾಸ್ ಸಾಂಗ್ವಾನ್, “ಸಮ್ರಾವತ ಗ್ರಾಮದಲ್ಲಿ ಕೆಲವರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಸಮಸ್ಯೆ ಬಗೆಹರಿಸಲು ಎಸ್‌ಡಿಎಂ, ತಹಸೀಲ್ದಾರ್, ಹೆಚ್ಚುವರಿ ಎಸ್‌ಪಿ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಮತಗಟ್ಟೆಗೆ ನುಗ್ಗಿ ಎಸ್‌ಡಿಎಂ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ತಕ್ಷಣ ಹೆಚ್ಚುವರಿ ಎಸ್ಪಿ ಅವರನ್ನು ತಡೆದಿದ್ದಾರೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನಮ್ಮ ಮಧ್ಯಸ್ಥಿಕೆಯ ನಂತರ ಮತದಾನ ಶಾಂತಿಯುತವಾಗಿ ಪುನರಾರಂಭವಾಯಿತು” ಎಂದು ಹೇಳಿದ್ದಾ ರೆ.
ಘಟನೆ ಬಗ್ಗೆ ಮಾತನಾಡಿರುವ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ, ಈ ಹಿಂದೆ ಎಸ್‌ಡಿಎಂ ಅಮಿತ್ ಚೌಧರಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. “ಈ ಹಿಂದೆ ಹಿಂದೋಳಿಯಲ್ಲಿ ಎಸ್‌ಡಿಎಂ ಅಮಿತ್ ಅವರು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಮಹಿಳೆಯ ಪತಿ ಮತ್ತು ಶಿಕ್ಷಕರನ್ನೂ ಥಳಿಸಿದ್ದರು. ಈ ವೇಳೆ ಮತ ಹಾಕುವಂತೆ ಒತ್ತಾಯಿಸಿದ್ದ ಅವರು, ಇಲ್ಲವೆಂದರೆ ಕೆಲಸ ಕಳೆದುಕೊಳ್ಳುತ್ತೀರಿ ಎಂದು ಬೆದರಿಸಿದ್ದರು” ಎಂದು ಹೇಳಿದ್ದಾರೆ.
“ಅಷ್ಟೆ ಅಲ್ಲದೆ, ಅಕ್ಟೋಬರ್ 25 ರಿಂದ ನನ್ನ ಬೆಂಬಲಿಗರಿಗೆ ಕಿರುಕುಳ ನೀಡಲಾಗುತ್ತಿದೆ. ನನ್ನ ಪ್ರಚಾರ ಪೋಸ್ಟರ್‌ಗಳನ್ನು ಹರಿದು ಹಾಕಲಾಗಿದ್ದು, ಜನರು ನನಗೆ ಮತ ಹಾಕುವುದನ್ನು ತಡೆಯಲು ಈ ಪ್ರಯತ್ನಗಳನ್ನು ಮಾಡಲಾಗಿದೆ” ಎಂದು ಮೀನಾ ಹೇಳಿದ್ದಾರೆ. ಚುನಾವಣಾಧಿಕಾರಿಯ ಮೇಲೆ ಹಲ್ಲೆ
ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ, ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಕಳೆದ ರಾತ್ರಿಯ ಅವ್ಯವಸ್ಥೆಗೆ ಕಾರಣರಾದವರನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಮೀನಾ ಅವರನ್ನು ಬಂಧಿಸುವಂತೆ ರಾಜಸ್ಥಾನದ ಆಡಳಿತ ಸೇವಾ ಅಧಿಕಾರಿಗಳ ಸಂಘ ಒತ್ತಾಯಿಸಿದೆ.
ಇದನ್ನೂ ಓದಿ: ಬಿಜೆಪಿ ಆಡಳಿತದ ಅವಧಿಯಲ್ಲಿ ನಿರಾವರಿ ನಿಗಮದಿಂದ ₹300 ಕೋಟಿ ಮಠ – ಮಂದಿರಗಳಿಗೆ ದುರುಪಯೋಗ!
ಬಿಜೆಪಿ ಆಡಳಿತದ ಅವಧಿಯಲ್ಲಿ ನಿರಾವರಿ ನಿಗಮದಿಂದ ₹300 ಕೋಟಿ ಮಠ – ಮಂದಿರಗಳಿಗೆ ದುರುಪಯೋಗ!


