Homeಮುಖಪುಟಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

ಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

- Advertisement -
- Advertisement -

ಚಳಿಗಾಲದ ಮಂಜಿನ ತೆಳು ಹೊದಿಕೆಯನ್ನು ಬೇಧಿಸಿ ಬರುತ್ತಿರುವ ಮುಂಜಾವಿನ ಹೊಂಗಿರಣಗಳು, ಸುತ್ತಲೂ ಹಬ್ಬಿದ ವನರಾಶಿ, ಅದಕ್ಕೆ ಹೊಂದಿಕೊಂಡೇ ಇರುವಂತಹ ಹೊಲಗದ್ದೆಗಳಲ್ಲಿ ಕಟಾವಿಗೆ ಸಿದ್ಧವಾಗಿ ತೊನೆಯುತ್ತಿರುವ ಪೈರು. ಈ ದೃಶ್ಯವು ಪ್ರಕೃತಿ ಆರಾಧಕರಿಗೆ ಸ್ವರ್ಗ ಸದೃಶವಾಗಿ ಕಾಣಿಸಿದರೆ, ಕಾಡಂಚಿನ ಹಳ್ಳಿಗರಿಗೆ ಬೆಳೆದ ಪೈರು ಕಾಡುಪ್ರಾಣಿಗಳಿಗೆ ಸಿಕ್ಕು ಹಾಳಾಗುವುದೋ ಅಥವಾ ಅವರ ಕೈಗೆ ಹತ್ತುವುದೋ ಎಂಬ ಚಿಂತೆ ಮೂಡಿಸುತ್ತದೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಇದು ಆವಾಸದ ಛಿದ್ರೀಕರಣದಂತೆ ತೋರಬಹುದು ಮತ್ತು ಗಣಿಗಾರಿಕೆ ಹಾಗು ಅರಣ್ಯದ ಮೇಲೆ ಅವಲಂಬಿತವಾದ ಮತ್ತಿತರ ಕೈಗಾರಿಕೆಗಳ ವಾರಸುದಾರರಿಗೆ ಇದು ಮುಂದಿನ ಯೋಜನಾ ಪ್ರದೇಶದ ವಿಸ್ತರಣೆಯ ಅವಕಾಶದಂತೆ ಕಾಣಬಹುದು. ಭಾರತದ ಅರಣ್ಯ ಮತ್ತು ವನ್ಯಜೀವಿಗಳು ಇಷ್ಟೆಲ್ಲ ವಿರೋಧಾಭಾಸಗಳ ನಡುವೆ ಸಿಲುಕಿಕೊಂಡು ತಮ್ಮ ಮುಂದಿನ ದಿನಗಳನ್ನು ಎದುರು ನೋಡುತ್ತಿವೆ ಎಂದು ನಾವು ಕಲ್ಪಿಸಿಕೊಂಡರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ. ಇಷ್ಟೆಲ್ಲಾ ವಿಷಯಗಳನ್ನು ಹೇಳಲು ಕಾರಣ ಇತ್ತೀಚಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಶೇರ್‌ನಿ ಎಂಬ ಚಿತ್ರವೇ ಕಾರಣ. ಒಟ್ಟಾರೆಯಾಗಿ ವನ್ಯಜೀವಿ ಸಂರಕ್ಷಣೆಯ ಸವಾಲುಗಳ ಕುರಿತು ಕೊಂಚವಾದರೂ ಬೆಳಕು ಚೆಲ್ಲಲು ಈ ಚಿತ್ರ ಯಶಸ್ವಿಯಾಗಿದೆ ಎಂದರೆ ತಪ್ಪಲ್ಲ.

ಮೊದಲು ಜಾಹೀರಾತಿನಲ್ಲಿ ಈ ಚಿತ್ರದ ಹೆಸರು ಕೇಳಿದಾಗ ಇದು ದುರುಳರನ್ನು ಮಟ್ಟಹಾಕುವ ಚಿತ್ರದ ನಾಯಕಿಗೆ ಅನ್ವರ್ಥಕವಾಗಿ ’ಶೇರ್‌ನಿ’ ಎಂದು ಹೆಸರಿಸಲಾಗಿದೆಯೇ ಎಂಬ ಸಂದೇಹ ಮೂಡಿತ್ತು. ಆದರೆ ಕೆಲ ಸ್ನೇಹಿತರ ಕಿರು ವಿಮರ್ಶೆ ಮತ್ತು ಶಿಫಾರಸ್ಸಿನ ಅನ್ವಯ ಈ ಚಿತ್ರವನ್ನು ನೋಡಿದ ಮೇಲೆ ಇದು ಒಬ್ಬ ಅರಣ್ಯ ಅಧಿಕಾರಿಯ ದೃಷ್ಟಿಕೋನದಲ್ಲಿ ಮಧ್ಯ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾನವ ಮತ್ತು ಹುಲಿ ಸಂಘರ್ಷದ ಕತೆ ಎಂದು ತಿಳಿಯಿತು. ಚಿತ್ರಕಥೆ ಸುಮಾರು ಎರಡು ಮೂರು ವರ್ಷದ ಹಿಂದೆ ಬದುಕಿದ್ದ ಅವನಿ ಎಂಬ ಹೆಣ್ಣು ಹುಲಿಯ ಕಥೆಯ ಮೇಲೆ ಆಧಾರಿತವಾಗಿದೆ. ಅವನಿ ಹುಲಿಯ ಪ್ರಸಂಗವು ಮಾನವ ವನ್ಯಜೀವಿ ಸಂಘರ್ಷವನ್ನು ಆಯಾ ಹಿನ್ನೆಲೆಯ ಜನರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಹೇಗೆ ನೋಡುತ್ತಾರೆ ಎಂಬುದನ್ನು ವಿಶದವಾಗಿ ಬಿಡಿಸಿಟ್ಟಿತ್ತು.

ನಗರದ ಹಿನ್ನೆಲೆಯ ಜನ ಹುಲಿಯ ಹತ್ಯೆಯನ್ನು ತುಂಬಾ ಭಾವನಾತ್ಮಕವಾಗಿ ಪರಿಗಣಿಸಿ ಸರಣಿ ಪ್ರತಿಭಟನೆ, ಪ್ರದರ್ಶನ ಮಾಡಿ ತಮ್ಮ ಸಿಟ್ಟನ್ನು ತೋರ್ಪಡಿಸಿದರು. ಆದರೆ ಹುಲಿಯಿಂದ ತೊಂದರೆಗೆ ಈಡಾಗಿ ಜನ-ಜಾನುವಾರುಗಳನ್ನು ಕಳೆದುಕೊಂಡ ಹಳ್ಳಿಗರು ಸಮಾಧಾನದ ನಿಟ್ಟುಸಿರುಬಿಟ್ಟರು. ಆದರೆ ಒಂದಂತೂ ಸತ್ಯ, ಯಾವುದೇ ಹುಲಿಯು ನರಭಕ್ಷಕನಾಗಿ ಪರಿವರ್ತನೆಯಾದರೆ ಅದರ ಭವಿಷ್ಯ ಅಲ್ಲಿಯೇ ಮುಗಿದಂತೆ. ಒಂದೋ ಅದು ಗುಂಡಿಗೆ ಬಲಿಯಾಗಬೇಕು ಇಲ್ಲವೇ ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿ ಬಂಧಿಯಾಗಬೇಕು. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ವಿಮರ್ಶೆ ಮಾಡುವ ಮೊದಲು, ಕಾಡಂಚಿನ ಜನರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ನಾವು ಪರಿಗಣಿಸಲೇಬೇಕು. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಎಂಬ ತಂತಿಯ ಮೇಲಿನ ನಡಿಗೆಗೆ ಜನರ ಬೆಂಬಲ ಬೇಕೇಬೇಕು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಿಸಿಯನ್ನು ಅನುಭವಿಸುವ ಜನರ ಹಿತಾಸಕ್ತಿಯನ್ನು ಪರಿಗಣಿಸುವುಧು ಅತೀಮುಖ್ಯ.

ಇನ್ನು ಚಿತ್ರದ ವಿಷಯಕ್ಕೆ ಬರುವುದಾದರೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಬಂದಂತಹ ಚಿತ್ರಗಳಲ್ಲಿ ಈ ಚಿತ್ರ ಸತ್ಯಕ್ಕೆ ಅತ್ಯಂತ ಹತ್ತಿರವಾದದ್ದು. ಚಿತ್ರದ ನಿರ್ದೇಶಕರು ಮೂಲಭೂತ ವಿಷಯಗಳ ಕುರಿತು ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ ಎಂದೆನಿಸುತ್ತದೆ. ಅವರು ಕಥೆ ಹೇಳಲು ಆರಿಸಿಕೊಂಡ ಪ್ರದೇಶ ಅದಕ್ಕೆ ಸಾಕ್ಷಿ. ಮಧ್ಯಭಾರತದ ಹಳ್ಳಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷ ನೈಜವಾಗಿಯೇ ಮೂಡಿಬಂದಿವೆ. ವನ್ಯಜೀವಿ ಸಂಘರ್ಷದ ಕಷ್ಟ ಅನುಭವಿಸುವ ಹಳ್ಳಿಗರು, ಅವರ ತಕ್ಷಣದ ಆಕ್ರೋಶಕ್ಕೆ ತುತ್ತಾಗುವ ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಮತ್ತು ಈ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸ್ಥಳೀಯ ನಾಯಕರು ಇವೆಲ್ಲವುಗಳೂ ವಸ್ತುಸ್ಥಿತಿಗಳೆ ಆಗಿವೆ. ಅಷ್ಟೇ ಅಲ್ಲದೆ ಪ್ರಸ್ತುತ ಅರಣ್ಯಗಳಿಗೆ ಒದಗಿದೆ ತೊಂದರೆಗಳಾದ ಆವಾಸದ ಛಿದ್ರೀಕರಣ, ಅರಣ್ಯದ ನಡುವೆ ಗಣಿಗಾರಿಕೆ ಮತ್ತು ಹೆದ್ದಾರಿಗಳ ಕುರಿತು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಬಹುಶಃ ನಿಜವಾದ ಅರಣ್ಯ ಇಲಾಖೆಯ ನೌಕರರೇ ಇದರಲ್ಲಿ ನಟಿಸಿದ್ದಾರೋ ಏನೋ! ಹೊಸ ಪೀಳಿಗೆಯ ಸುಶಿಕ್ಷಿತ ಸಿಬ್ಬಂದಿಯನ್ನು ನಾವಿಲ್ಲಿ ನೋಡಬಹುದು ಮತ್ತು ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸಿನಿಮಾ ಶಕ್ತವಾಗಿ ಹಿಡಿದಿಟ್ಟಿದೆ. ಅಷ್ಟೇ ಅಲ್ಲದೆ ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಆಸಕ್ತ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಇಲಾಖೆಯ ಮನಸೋ ಇಚ್ಛೆ ಗಿಡ ನೆಡುವ ಯೋಜನೆಗಳು, ಇವೆಲ್ಲ ನಿರ್ದೇಶಕರಿಗೆ ವಿಷಯದ ಕುರಿತು ಇರುವ ಜ್ಞಾನವನ್ನು ತೋರಿಸುತ್ತದೆ.

ಆದರೆ ಇಲ್ಲಿ ಅವನಿ ಹುಲಿಯ ಪ್ರಕರಣದಲ್ಲಿ ಆದಂತೆಯೇ ಚಿತ್ರಕಥೆಯನ್ನೂ ಭಾವನಾತ್ಮಕ ಹಿನ್ನೆಲೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬಹುಶಃ ಅದು ಅವರ ಉದ್ದೇಶವೂ ಆಗಿರಬಹುದು ಇಲ್ಲವೇ ಒಂದು ಚಿತ್ರವನ್ನು ನಿರ್ಮಿಸಲು ಇರಬಹುದಾದ ಸೃಜನಶೀಲತೆಯ ಕಟ್ಟಳೆಗಳೂ ಇರಬಹುದು. ಅಷ್ಟೇ ಡಾಕ್ಯುಮೆಂಟರಿ ರೀತಿಯ ವಿಷಯದ ಒಂದು ಕತೆಯನ್ನು ಹೆಚ್ಚು ಜನರಿಗೆ ತಲುಪಿಸುವ ಬಗೆಯೂ ಅದು ಇರಬಹುದು!

ಒಟ್ಟಾರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಕೋನದಿಂದ ನೋಡಬೇಕಾದರೆ ಒಂದು ಹುಲಿಯ ಉಳಿವಿಗಿಂತ ಒಂದು ಪ್ರದೇಶದಲ್ಲಿ ಹುಲಿಯ ಆವಾಸವನ್ನು ಬಹುಕಾಲದವರೆಗೆ ಹೇಗೆ ಉಳಿಸಬೇಕು ಮತ್ತು ಹುಲಿ ಮತ್ತಿತರ ವನ್ಯಜೀವಿಗಳು ತಮ್ಮ ನೈಸರ್ಗಿಕ ಆವಾಸದಲ್ಲಿ ತಮ್ಮ ಸಂತತಿಯನ್ನು ಮುಂದುವರೆಸಿಕೊಂಡು ಹೋಗಲು ಹೇಗೆ ಅನುವು ಮಾಡಿಕೊಡುತ್ತೇವೆ ಎಂಬ ಚರ್ಚೆ ಹೆಚ್ಚು ಮುಖ್ಯವಾಗುತ್ತದೆ. ಚಿತ್ರದ ಕೊನೆಯಲ್ಲಿ ಹುಲಿ ಮರಿಗಳ ಉಳಿವು ಹೊಸ ಭರವಸೆಯನ್ನು ತಂದುಕೊಟ್ಟಂತೆ ಕಂಡರೂ ಅವು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂದು ಕೇಳಿಕೊಂಡರೆ ಉತ್ತರ ಬಹುತೇಕ ನಿರಾಶಾದಾಯಕವಾಗಿಯೇ ಇರುತ್ತದೆ. ಚಿತ್ರದ ನಾಯಕಿ ಅನುಭವಿಸುವ ಹತಾಶೆ, ಮೇಲಧಿಕಾರಿಗಳ ಅಸಹಕಾರ ಕೆಲಮಟ್ಟಿಗೆ ನಿಜವೇ ಆದರೂ ಮಾನವ ವನ್ಯಜೀವಿ ಸಂಘರ್ಷ, ಅದರ ಸುತ್ತ ಹುಟ್ಟಿಕೊಳ್ಳುವ ರಾಜಕೀಯ ಮತ್ತು ನಿಜವಾದ ಸಂತ್ರಸ್ತರ ಮತ್ತು ಕೆಳ ಹಂತದ ಸಿಬ್ಬಂದಿಯ ಕಷ್ಟ ಕಾರ್ಪಣ್ಯ, ನೋವು ಇವೆಲ್ಲವೂ ಒಂದೇ ದಿನದಲ್ಲಿ ಮುಗಿಯುವ ಸಮಸ್ಯೆಗಳಂತೂ ಅಲ್ಲವೇ ಅಲ್ಲ. ನಾಯಕನಟಿಯ ದೃಷ್ಟಿಯಿಂದ ಒಂದು ಹುಲಿಯ ಉಳಿವನ್ನು ಅತಿಮುಖ್ಯ ವಿಚಾರವೆಂಬಂತೆ ತೋರಿಸಿದ್ದರೂ ಅದರ ಸುತ್ತ ಹರಡಿಕೊಂಡಿರುವ ವಿಚಾರಗಳು ಇನ್ನೂ ಗಹನ ಮತ್ತು ಸಂಕೀರ್ಣ.

ಕೆಲವು ಕುಂದುಕೊರತೆಗಳ ಹೊರತಾಗಿಯೂ ’ಶೇರ್‌ನಿ’ ಉತ್ತಮ ಪ್ರಯತ್ನವೇ ಆಗಿದೆ. ವನ್ಯಜೀವಿಗಳ ಮತ್ತು ಅವುಗಳ ಸಂರಕ್ಷಣೆಯ ಕುರಿತು ಜನಸಾಮಾನ್ಯರಿಗೆ ಇರುವ ತಿಳಿವು ತುಂಬಾ ಸೀಮಿತವಾದದ್ದು. ಕಾಡಂಚಿನ ಜನರ, ಅರಣ್ಯ ಇಲಾಖೆಯ ತಳಮಟ್ಟದ ನೌಕರರ ಸವಾಲುಗಳು ಮತ್ತು ಬವಣೆಗಳು ಸಾಮಾನ್ಯರಿಗೆ ಅಪರಿಚಿತವೇ. ಅದನ್ನು ಸ್ವಲ್ಪವಾದರೂ ಮನದಟ್ಟು ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಜನಸಾಮಾನ್ಯರನ್ನು ಅರಣ್ಯದ ಸಮಸ್ಯೆಗಳ ಬಗ್ಗೆ ಚಿಂತನೆಗೆ ಹಚ್ಚುವಂತಾದರೇ ಈ ಸಿನಿಮಾ ಸಾರ್ಥಕವೇ!

ಹಾಗೇಯೇ ಕುತೂಹಲಕ್ಕಾಗಿ ಈ ಚಿತ್ರದ ಕುರಿತು ಜನರ ಅಭಿಪ್ರಾಯ ಏನು ಎಂದು ತಿಳಿಯಲು ಒಮ್ಮೆ ಜಾಲತಾಣವನ್ನು ಇಣುಕಿದಾಗ ’ಇದೊಂದು ತುಂಬಾ ನಿಧಾನವಾಗಿ ಸಾಗುವ ಚಿತ್ರ, ನೀರಸವಾದದ್ದು, ಡಾಕ್ಯುಮೆಂಟರಿ ಶೈಲಿಯಲ್ಲಿದೆ’ ಎಂಬಿತ್ಯಾದಿ ಕಮೆಂಟುಗಳೇ ಇದ್ದವು. ಆದರೆ ಖ್ಯಾತ ನಿರ್ದೇಶಕ ಗೊದಾರ್ದ್ ಒಂದು ಸಿನಿಮಾ ಅತ್ಯುತ್ತಮವಾಗುವುದು ಅದು ಡಾಕ್ಯುಮೆಂಟರಿಗೆ ಹತ್ತಿರವಾದಾಗ ಎನ್ನುತ್ತಾನೆ! ಆ ನಿಟ್ಟಿನಲ್ಲಿ, ಅರಣ್ಯದ ಕುರಿತು ಸ್ವಲ್ಪವಾದರೂ ಆಸಕ್ತಿಯಿದ್ದರೆ ಈ ಚಿತ್ರ ನಿಮಗೆ ಖಂಡಿತ ನಿರಾಸೆಯನ್ನಂತೂ ಮಾಡುವುದಿಲ್ಲ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...