2012 ರಲ್ಲಿ ಕೂಡಂಕುಳಂ ಪರಮಾಣು ಸ್ಥಾವರದ ವಿರುದ್ಧದ ಪ್ರತಿಭಟನೆಗಳ ಕುರಿತು ಚಲನಚಿತ್ರವನ್ನು ನಿರ್ಮಿಸಿದ ಆಸ್ಟ್ರೇಲಿಯಾದ ಸಾಕ್ಷ್ಯಚಿತ್ರ ನಿರ್ಮಾಪಕ ಡೇವಿಡ್ ಬ್ರಾಡ್ಬರಿ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದು ಭಾರತ ಪ್ರವೇಶಿಸದಂತೆ ಬಂಧಿಲಾಗಿದ್ದು, ನಂತರ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಘಟನೆ ಸೆಪ್ಟೆಂಬರ್ 10 ರಂದು ನಡೆದಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಯಿತು ಎಂದು ದಿ ವೈರ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
73 ವರ್ಷದ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಡೇವಿಡ್ ಬ್ರಾಡ್ಬರಿ ತಮ್ಮ ಮಕ್ಕಳಾದ ನಕೀಟಾ ಬ್ರಾಡ್‌ಬರಿ (21) ಮತ್ತು ಒಮರ್ ಬ್ರಾಡ್‌ಬರಿ (14) ಅವರೊಂದಿಗೆ ಎರಡು ವಾರಗಳ ಭಾರತ ಪ್ರವಾಸಕ್ಕೆ ಎಂದು ಆಗಮಿಸಿದ್ದರು. ಈ ಅವರ ಮಕ್ಕಳಿಗೆ ಭಾರತ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಬ್ರಾಡ್ಬರಿ ಅವರನ್ನು 24 ಗಂಟೆಗಳ ಕಾಲ ಬಂಧಿಸಿ ಗಡಿಪಾರು ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಚಲನಚಿತ್ರ ನಿರ್ಮಾಪಕಿ ಮತ್ತು ಹೋರಾಟಗಾರ್ತಿಯು ಆಗಿರುವ ಅವರ ಪತ್ನಿ ಟ್ರೀನಾ ಐದು ತಿಂಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಬ್ರಾಡ್‌ಬರಿ ಅವರು ಭಾರತಕ್ಕೆ ಬಂದಿಳಿದ ಕೂಡಲೇ ಅವರನ್ನು ಬಂಧಿಸಿ 24 ಗಂಟೆಗಳ ಕಾಲ ಶೌಚಾಲಯಕ್ಕೆ ತೆರಳಲು ಕೂಡಾ ಅನುಮತಿ ನೀಡದೆ ಅಶುಚಿಯಾದ ಮತ್ತು “ಅಸಹ್ಯಕರ” ಸ್ಥಳದಲ್ಲಿ ಇರಿಸಲಾಯಿತು ಎಂದು ಆರೋಪಿಸಿದ್ದಾರೆ.
ಇದನ್ನೂಓದಿ: ಆಹಾರ ಮಳಿಗೆಗಳಲ್ಲಿ ಮಾಲೀಕರ ಹೆಸರು ಪ್ರದರ್ಶಿಸಲು ಆದೇಶ : ಬಿಜೆಪಿಯನ್ನು ಅನುಸರಿಸಿದ ಕಾಂಗ್ರೆಸ್ ಸರ್ಕಾರ
ಅಷ್ಟೆ ಅಲ್ಲದೆ, ಅವರಿಗೆ ಆಸ್ಟ್ರೇಲಿಯನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ, ಬ್ರಾಡ್‌ಬರಿ ಅವರಿಗೆ ಔಷಧಿಗಳನ್ನು ಕೂಡಾ ನಿರಾಕರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಅವರ ಮಕ್ಕಳು ಉಳಿಸಿಕೊಂಡು, ಅವರನ್ನು ಭಾರತದಿಂದ ಗಡೀಪಾರು ಮಾಡಲಾಯಿತು ಎಂದು ಅದು ಹೇಳಿದೆ.
ಅವರ ಪ್ರಸ್ತುತ ಭೇಟಿಯ ಉದ್ದೇಶ, ಅವರ 2012 ರ ಭಾರತ ಭೇಟಿಯ ಕಾರಣ ಮತ್ತು ದೇಶದಲ್ಲಿ ಅವರ ಸಂಪರ್ಕಗಳನ್ನು ವಿವರಿಸಲು ಕೇಳಲಾಯಿತು ಎಂದು ಬ್ರಾಡ್ಬರಿ ಅವರು ಹೇಳಿದ್ದಾರೆ. ತನ್ನ ಫೋನ್ ಅನ್ನು ಅನ್ಲಾಕ್ ಮಾಡಲು ಮತ್ತು ಭಾರತದಲ್ಲಿನ ತನ್ನ ಸಹಚರರ ಸಂಪರ್ಕ ಸಂಖ್ಯೆಗಳನ್ನು ಹಂಚಿಕೊಳ್ಳಲು ಅಧಿಕಾರಿಗಳು ಒತ್ತಾಯಿಸಿದರಾದರೂ, ತಾನು ಅದನ್ನು “ನಿರಾಕರಿಸಿದೆ” ಅವರು ಹೇಳಿದ್ದಾರೆ.
ಈ ಹಿಂದೆ ಬ್ರಾಡ್ಬರಿ ಅವರು ತನ್ನ ಪತ್ನಿ ಮತ್ತು ಮೂರು ವರ್ಷದ ಮಗನೊಂದಿಗೆ ಅಕ್ಟೋಬರ್ 2012 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅವರು ಪ್ರವಾಸಿ ವೀಸಾದಲ್ಲಿ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಸದಸ್ಯರಾಗಿ ಆಗಮಿಸಿದ್ದರು. ಈ ಚಿತ್ರೋತ್ಸವದ ನಂತರ, ಬ್ರಾಡ್ಬರಿ ತನ್ನ ಕುಟುಂಬದೊಂದಿಗೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಇಡಿಂತಕರೈ ಎಂಬ ಕರಾವಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ ಈ ಗ್ರಾಮವು ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ವಿರುದ್ಧದ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು.
ಜಪಾನ್‌ನಲ್ಲಿ 2011 ರ ಫುಕುಶಿಮಾ ಪರಮಾಣು ದುರಂತದ ನಂತರ ಅಣು ಸ್ಥಾವರದಲ್ಲಿ ಸಂಭವಿಸುವ ಯಾವುದೇ ಅಪಘಾತದ ವ್ಯಾಪ್ತಿ ಮತ್ತು ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ತಿರುನಲ್ವೇಲಿ ಜಿಲ್ಲೆಯಾದ್ಯಂತ ಹರಡಿದ್ದವು.
ಇದನ್ನೂಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ; ಶಿಕ್ಷೆ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದ ಸಂಜಯ್ ರಾವತ್
ಅಲ್ಲದೆ ಬ್ರಾಡ್ಬರಿ ಅವರ ಭೇಟಿಗೆ ಒಂದು ತಿಂಗಳ ಮೊದಲು, ಇಡಿಂತಕರೈನ ಸ್ಥಾವರದಲ್ಲಿ ಯುರೇನಿಯಂ ಇಂಧನ ತುಂಬಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದ್ದರು. ಈ ವೇಳೆ ಸುಮಾರು 66 ಜನರನ್ನು, ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಬಂಧಿಸಲಾಗಿತ್ತು. ಹಲವರ ವಿರುದ್ಧ ದೇಶದ್ರೋಹದ ಆರೋಪ ಕೂಡಾ ಮಾಡಲಾಗಿತ್ತು.
ಇಂತಹ ಸಮಯದಲ್ಲಿ ಬ್ರಾಡ್ಬರಿ ಎರಡು ವಾರಗಳ ಕಾಲ ಗ್ರಾಮದಲ್ಲಿ ಉಳಿದುಕೊಂಡರು ಮತ್ತು ಪ್ರತಿಭಟನೆಗಳು ಮತ್ತು ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಪ್ರಧಾನವಾಗಿ ಅವಲಂಬಿಸಿರುವ ಗ್ರಾಮಸ್ಥರ ದೈನಂದಿನ ಜೀವನವನ್ನು ದಾಖಲಿಸಿದ್ದರು.
ಅದೇ ವೇಳೆ ಅವರನ್ನು ಕೂಡಂಕುಳಂ ಸ್ಥಳಕ್ಕೆ ಭೇಟಿ ನೀಡದಂತೆ ತಡೆಯಲಾಗಿತ್ತು ಮತ್ತು ಕಿರುಕುಳ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದರ ನಂತರ ಅವರು ‘ಡಾಕ್ಯುಮೆಂಟಿಂಗ್ ಡಿಸೆಂಟ್: ಡೇವಿಡ್ ಬ್ರಾಡ್‌ಬರಿಸ್ ಅಕೌಂಟ್ ಆಫ್ ಹರಾಸ್‌ಮೆಂಟ್ ಇನ್ ಕೂಡಂಕುಳಂ’ ಎಂಬ ಶೀರ್ಷಿಕೆಯ ಲೇಖನವನ್ನು ಬರೆದಿದ್ದರು. ಕೂಡಂಕುಳಂನಲ್ಲಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಧಾರವನ್ನು ಅವರು, “ತಮ್ಮ ಸ್ವಂತ ಜನರು ಮತ್ತು ಜಗತ್ತಿನ ಬಗ್ಗೆ ಬೇಜವಾಬ್ದಾರಿಯ ನಡೆ” ಎಂದು ಹೇಳಿದ್ದರು.ಆಸ್ಟ್ರೇಲಿಯಾದ ಸಾಕ್ಷ್ಯಚಿತ್ರ
ತಮ್ಮ ಬಂಧನ ಮತ್ತು ಗಡೀಪಾರು ಕೂಡಂಕುಳಂ ಪರಮಾಣು ಸ್ಥಾವರದ ತಮ್ಮ ಚಲನಚಿತ್ರದ ಕಾರಣಕ್ಕೆ ನಡೆದಿದೆ ಎಂದು ಬ್ರಾಡ್ಬರಿ ಅವರು ಆರೋಪಿಸಿದ್ದಾರೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


