ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಇಲ್ಲಿ ಮಸೀದಿ ನಿರ್ಮಾಣಕ್ಕೆಂದು ನೀಡಿರುವ 5 ಎಕರೆ ಭೂಮಿಯಲ್ಲಿ ಬಾಬರಿ ಮಸೀದಿಗಿಂತ 4 ಪಟ್ಟು ದೊಡ್ಡ ಮಸೀದಿಯನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಈ ಮಸೀದಿಗಿಂತ 6 ಪಟ್ಟು ದೊಡ್ಡ ಆಸ್ಪತ್ರೆಯೂ ನಿರ್ಮಾಣವಾಗಲಿದೆ.
“ಇಲ್ಲಿ ನಿರ್ಮಾಣವಾಗುವ ಮಸೀದಿಯ ವಿಶೇಷವೆಂದರೆ ಭಾರತದ ಇಸ್ಲಾಮಿಕ್ ಕಟ್ಟಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಮ್ಮಟಗಳು, ಕಮಾನುಗಳು ಅಥವಾ ಸ್ತಂಭಗಳು ಇರುವುದಿಲ್ಲ” ಎಂದು ಇಂಡೋ- ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್‍ನ ಸದಸ್ಯರ ಜತೆಗೆ ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿದ ವಾಸ್ತುಶಿಲ್ಪಿ ಎಸ್.ಎಂ.ಅಖ್ತರ್ ಹೇಳಿದ್ದಾರೆ.
ಇದನ್ನೂ ಓದಿ: Big Breaking: ನೇಪಾಳ ಸಂಸತ್ತು ವಿಸರ್ಜನೆಗೆ ಪ್ರಧಾನಿ ಕೆ ಪಿ ಶರ್ಮಾ ಒಲಿ ನಿರ್ಧಾರ!
The trust incharge of building a Mosque in Ayodhya ( on land allotted by UP govt post the SC’s 2019 Ram Temple verdict ) has revealed the first phase design – a mosque , and a super speciality hospital . Video below … pic.twitter.com/xu6YCFaOZT
— Alok Pandey (@alok_pandey) December 19, 2020
ಧನ್ನಿಪುರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಬಹುಮಹಡಿ ಸಂಕೀರ್ಣದಲ್ಲಿ ಮಸೀದಿ ಸೇರಿದಂತೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡಿಗೆ ಮನೆ ಮತ್ತು ವಸ್ತು ಸಂಗ್ರಹಾಲಯ ಇರುತ್ತದೆ.
ಇದನ್ನೂ ಓದಿ: 1 ಮಿಲಿಯನ್ ವಂಚನೆ: ನೀರವ್ ಮೋದಿ ಸಹೋದರನ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲು!
“2000 ಮಂದಿಗೆ ನಮಾಜ್ ಸಲ್ಲಿಸಲು ಅವಕಾಶವಾಗುವ ವಿಶಾಲ ಮಸೀದಿಯು ಬಾಬರಿ ಮಸೀದಿಗಿಂತ ನಾಲ್ಕು ಪಟ್ಟು ದೊಡ್ಡದಿರುತ್ತದೆ. 300 ಹಾಸಿಗೆಗಳ ಆಸ್ಪತ್ರೆ ಸಂಕೀರ್ಣ, ವಿಸ್ತೀರ್ಣದಲ್ಲಿ ಮಸೀದಿಯ ಆರು ಪಟ್ಟು ದೊಡ್ಡದಾಗಿರುತ್ತದೆ. ಜಾಗತಿಕ ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಶೂನ್ಯ ಇಂಗಾಲ ಪರಿಕಲ್ಪನೆ ಹೊಂದಲಾಗಿದೆ” ಎಂದು ಐಐಸಿಎಫ್ ಕಾರ್ಯದರ್ಶಿ ಅಖ್ತರ್ ಹುಸೇನ್ ಹೇಳಿದ್ದಾರೆ.
Blueprint of Ayodhya's ultra-modern mosque complex: pic.twitter.com/8rHvZJjD97
— Azaad. (@Syaahkaar) December 19, 2020
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರದ ಬಿರುಗಾಳಿ: ಬಿಜೆಪಿ ಸೇರಿದ 9 ಶಾಸಕರು!
“ಅಮೆಜಾನ್‍ನ ಅರಣ್ಯ ಸೇರಿದಂತೆ ವಿಶ್ವದ ವಿವಿಧ ಅರಣ್ಯಗಳಿಂದ ತಂದ ಗಿಡಮರಗಳನ್ನು ವಿಶೇಷವಾಗಿ ಬೆಳೆಸಲಾಗುತ್ತದೆ. ಇದು ಹಸಿರು ಸಂದೇಶದ ಜತೆಗೆ ಶಾಂತಿ, ಸಾಮರಸ್ಯ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ” ಎಂದು ಅವರು ಹೇಳಿದರು.
3,500 ಚದರ ಮೀಟರ್ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗುತ್ತಿದ್ದು, ಆಸ್ಪತ್ರೆ ಮತ್ತು ಇತರ ಸೌಲಭ್ಯಗಳು 24,150 ಚದರ ಮೀಟರ್ ವಿಸ್ತೀರ್ಣದಲ್ಲಿರುತ್ತವೆ. ಫೈಜಾಬಾದ್ ಪಂಚಾಯತ್ ಜಿಲ್ಲಾ ಮಂಡಳಿಯು ನೀಲನಕ್ಷೆ ಅಂಗೀಕರಿಸಿದ ಕೂಡಲೇ ಯೋಜನೆಯ ಕಾಮಗಾರಿ ಪ್ರಾರಂಭವಾಗುತ್ತದೆ. ಎರಡು ವರ್ಷಗಳಲ್ಲಿ ರಚನೆ ಸಿದ್ಧವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ಷಾಮೀಲಾಗಿದೆ: ಸಿದ್ದರಾಮಯ್ಯ ಸರಣಿ ಟ್ವೀಟ್


