Homeಅಂತರಾಷ್ಟ್ರೀಯ1 ಮಿಲಿಯನ್ ವಂಚನೆ: ನೀರವ್ ಮೋದಿ ಸಹೋದರನ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲು!

1 ಮಿಲಿಯನ್ ವಂಚನೆ: ನೀರವ್ ಮೋದಿ ಸಹೋದರನ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲು!

"ವಜ್ರ ವ್ಯಾಪಾರಿ ನೀರವ್ ಮೋದಿ ಪಿಎನ್‌ಬಿಯಿಂದ 2 ಬಿಲಿಯನ್ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನೆಹಾಲ್ ಮೋದಿಯವರನ್ನೂ ಸಿಬಿಐ ಹುಡುಕುತ್ತಿದೆ"

- Advertisement -
- Advertisement -

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿಯ ಸಹೋದರ ನೆಹಾಲ್ ಮೋದಿಯನ್ನು ಇದೇ ಪ್ರಕರಣದಲ್ಲಿ ಸಿಬಿಐ ಹುಡುಕುತ್ತಿತ್ತು. ಈಗ 1 ಮಿಲಿಯನ್ ಮೌಲ್ಯದ ವಜ್ರಗಳನ್ನು ವಂಚಿಸಿದ ಆರೋಪದಲ್ಲಿ ನೆಹಾಲ್ ಮೋದಿಯ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲಾಗಿದೆ.

ನೆಹಾಲ್ ಮೋದಿ ಸುಳ್ಳು ಮಾಹಿತಿ ನೀಡಿ 2.6 ಬಿಲಿಯನ್ ಮೌಲ್ಯದ ರತ್ನಗಳನ್ನು ಪಡೆದಿದ್ದು, ನಂತರ ಅವುಗಳನ್ನು ತನ್ನ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಮ್ಯಾನ್‌ಹ್ಯಾಟನ್‌ನ ಅಟಾರ್ನಿ ಸೈ ವ್ಯಾನ್ಸ್‌ ಜೂನಿಯರ್ ಅವರ ಕಛೇರಿಯಿಂದ ಡಿಸಂಬರ್ 18 ರಂದು ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ (ಸರ್ ನೇಮ್) ಇದೆ ಎಂದ ರಾಹುಲ್ ಹೇಳಿಕೆಯ ಪರಿಣಾಮ ಇಂದು ಪಾಟ್ನಾ…

“ವಜ್ರಗಳು ಶಾಶ್ವತವಾಗಿರಬಹುದು, ಆದರೆ ಈ ದುರುದ್ದೇಶದ ಯೋಜನೆ ಅಲ್ಲ. ಈಗ ನೆಹಾಲ್ ಮೋದಿ ಅವರು ನ್ಯೂಯಾರ್ಕ್ ಸುಪ್ರೀಂ ಕೋರ್ಟ್‌ನ ವಿಚಾರಣೆಯನ್ನು ಎದುರಿಸಲಿದ್ದಾರೆ” ಎಂದು ಸೈ ವ್ಯಾನ್ಸ್ ಜೂನಿಯರ್ ಶುಕ್ರವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಂಟ್ವೆರ್ಪ್‌ನ ನಿವಾಸಿಯಾದ ನೆಹಾಲ್ ಮೋದಿ, ಭಾರತೀಯ ಮೂಲದ ಬೆಲ್ಜಿಯಂನ ವಜ್ರ ವ್ಯಾಪಾರಿ ನೀರವ್ ಮೋದಿಯ ಸಹೋದರನಾಗಿದ್ದು, ಇತ್ತೀಚೆಗೆ ಭಾರತದ ಅತಿದೊಡ್ಡ ಸಾವಿರಾರು ಕೋಟಿ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರು ಪಿಎನ್‌ಬಿಯಿಂದ 2 ಬಿಲಿಯನ್ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನೆಹಾಲ್ ಮೋದಿಯನ್ನೂ ಸಿಬಿಐ ಹುಡುಕುತ್ತಿದೆ.

“ತಾನು ಕೋಸ್ಟ್‌ಕೋ ಸಗಟು ನಿಗಮದೊಂದಿಗಿನ ಸಂಬಂಧವನ್ನು ಮುಂದುವರಿಸುತ್ತಿದ್ದೇನೆ ಎಂದು ಸುಳ್ಳು ಹೇಳಿ ಎಲ್ಎಲ್‌ಡಿಯನ್ನು ಸಂಪರ್ಕಿಸಿ, ಸುಮಾರು, $800,000 ಮೌಲ್ಯದ ವಜ್ರಗಳನ್ನು ಪಡೆದುಕೊಂಡಿದ್ದಾರೆ” ಎಂದು ನೆಹಲ್ ಮೋದಿಯ ದೋಷಾರೋಪಣೆಯನ್ನು ಪ್ರಕಟಿಸಿದ ಜಿಲ್ಲಾ ವಕೀಲರ ಕಚೇರಿ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ: ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಬೃಹತ್ ದಾಖಲೆ ಮಾಡಿದ ಮೋದಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...