Homeಮುಖಪುಟಬಾಬ್ರಿ ಮಸೀದಿ ಧ್ವಂಸ ಪ್ರಕರಣ : ಕಲ್ಯಾಣ್‍ಸಿಂಗ್‍ಗೆ ಸಮನ್ಸ್ ನೀಡಲು ಸಿಬಿಐ ಸಿದ್ದತೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ಕಲ್ಯಾಣ್‍ಸಿಂಗ್‍ಗೆ ಸಮನ್ಸ್ ನೀಡಲು ಸಿಬಿಐ ಸಿದ್ದತೆ

- Advertisement -
- Advertisement -

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಉತ್ತರಪ್ರದೇಶದ ಮಾಜಿ ಮುಖಯಮಂತ್ರಿ ಕಲ್ಯಾಣಸಿಂಗ್ ಅವರಿಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿರುವ ಸಿಬಿಐ ಸೋಮವಾರ ಕೋರ್ಟಿಗೆ ಈ ಸಂಬಂಧಿತ ಅರ್ಜಿಯನ್ನು ಹಾಕಿದೆ.

ಮಸೀದಿ ಧ್ವಂಸದ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣಸಿಂಗ್, ಮುಂದೆ ರಾಜ್ಯಪಾಲರಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದ ಕಾರಣ ವಿಚಾರಣೆಯಿಂದ ರಕ್ಷಣೆ ಪಡೆದಿದ್ದರು. ಸೋವವಾರವಷ್ಟೇ ಅವಧಿ ಮುಗಿದ ಪರಿಣಾಮವಾಗಿ ರಾಜಸ್ಥಾನದ ರಾಜ್ಯಪಾಲ ಹುದ್ದೆಯಿಂದ ಕಲ್ಯಾಣಸಿಂಗ್ ನಿರ್ಗಮನಗೊಂಡಿದ್ದಾರೆ. 87 ವರ್ಷದ ಕಲ್ಯಾಣಸಿಂಗ್ ಸೋಮವಾರವೇ ಲಕ್ನೋದ ಬಿಜೆಪಿ ಕಚೇರಿಯಲ್ಲಿ ಮತ್ತೆ ಪಕ್ಷಕ್ಕೆ ಸೇರಿದ್ದು ಪುನಃ ಅಧಿಕಾರ ರಾಜಕಾರಣದಲ್ಲಿ ಸಕ್ರಿಯರಾಗುವ ಬಯಕೆ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಕ್ನೋದ ಸಿಬಿಐ ಕೋರ್ಟಿಗೆ ಅರ್ಜಿ ಸಲ್ಲಿಸಿರುವ ಸಿಬಿಐ ಕಲ್ಯಾಣಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಮನ್ಸ್ ನೀಡುವಂತೆ ಕೋರಿದೆ.

ಲಾಲ್‍ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾಭಾರತಿ ಸೇರಿದಂತೆ ಹಲವು ನಾಯಕರು ಮಸೀದಿ ಧ್ವಂಸದಲ್ಲಿ ಪಾಲುದಾರರು ಎಂಬ ಆರೋಪ ಕುರಿತು ಸಿಬಿಐ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಡಿಸೆಂಬರ್ 6, 1992ರಂದು ಮಸೀದಿ ಧ್ವಂಸದ ನಂತರ ಕಲ್ಯಾಣಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. 1993ರಲ್ಲಿ ಸಲ್ಲಿಸಲಾದ ಚಾರ್ಜ್‍ಶೀಟಿನಲ್ಲಿ ಅವರ ಹೆಸರಿತ್ತು.

ಅಪೆಕ್ಸ್ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಕೋರ್ಟು ಪ್ರತಿದಿನವೂ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಸಂಚಿನ ಆರೋಪಿಗಳೆಲ್ಲ ಜಾಮೀನು ಪಡೆದುಕೊಂಡಿದ್ದಾರೆ. ಕಲ್ಯಾಣಸಿಂಗ್ ಪುನಃ ಅಧಿಕಾರ ರಾಜಕಾರಣಕ್ಕೆ ಬರುವುದನ್ನು ತಡೆಯಲು ಬಿಜೆಪಿ ಹೈಕಮಾಂಡ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಸೂಚನೆ ನೀಡಿರಬಹುದು ಎನ್ನಲಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...