- Advertisement -
- Advertisement -
ಬಾಗಲಕೋಟೆ : ಸಮವಸ್ತ್ರದಲ್ಲೇ ಇಳಕಲ್ ತಾಲೂಕು ಸಿದ್ದನಕೊಳ್ಳದ ಶಿವಕುಮಾರ ಸ್ವಾಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಆರು ಮಂದಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಪೊಲೀಸರು ಸಮವಸ್ತ್ರದಲ್ಲೇ ಸ್ವಾಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವುದು ಮತ್ತು ಸ್ವಾಮಿ ಅವರನ್ನು ಏಕವಚನದಲ್ಲೇ ಮಾತನಾಡಿಸಿ ಹಣ ಕೊಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರ ವರ್ತನೆಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಬೆನ್ನಲ್ಲೇ, ವಿಡಿಯೋದಲ್ಲಿರುವ ಬಾದಾಮಿ ಪೊಲೀಸ್ ಠಾಣೆಯ ಎಎಸ್‌ಐ ಜಿ.ಬಿ ದಳವಾಯಿ, ಎಎಸ್‌ಐ ಡಿ.ಜೆ ಶಿವಪುರ, ಕಾನ್‌ಸ್ಟೇಬಲ್‌ಗಳಾದ ಎಸ್.ಪಿ ಅಂಕೋಲೆ, ಜಿ.ಬಿ ಅಂಗಡಿ, ರಮೇಶ ಇಳಗೇರ, ಎಂ.ಎಸ್ ಹುಲ್ಲೂರ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಫೋಕ್ಸೋ ಪ್ರಕರಣ: ಯಡಿಯೂರಪ್ಪಗೆ ಮಧ್ಯಂತರ ರಿಲೀಫ್; ಖುದ್ದು ಹಾಜರಾತಿಗೂ ವಿನಾಯಿತಿ


