Homeಮುಖಪುಟಸ್ನೇಹಿತೆಯ ಭೇಟಿ - ಮುಸ್ಲಿಂ ಯುವಕನನ್ನು ಥಳಿಸಿದ ಬಜರಂಗದಳ ಕಾರ್ಯಕರ್ತರು

ಸ್ನೇಹಿತೆಯ ಭೇಟಿ – ಮುಸ್ಲಿಂ ಯುವಕನನ್ನು ಥಳಿಸಿದ ಬಜರಂಗದಳ ಕಾರ್ಯಕರ್ತರು

- Advertisement -
- Advertisement -

ಉತ್ತರ ಪ್ರದೇಶದ ಮೀರತ್‌‌ ಜಿಲ್ಲೆಯ ಸಾಕೇತ್‌‌‌ನ ಗೋಲ್‌ ಮಾರ್ಕೆಟ್‌ ಪಾರ್ಕ್‌ನಲ್ಲಿ ತನ್ನ ಸ್ನೇಹಿತ ಸಲ್ಮಾನ್‌ ಎಂಬ ಮುಸ್ಲಿಂ ಯುವಕನನ್ನು ಭೇಟಿಯಾದ ಯುವತಿಯನ್ನು, ಬಜರಂಗದಳ ಕಾರ್ಯಕರ್ತರು ಚಪ್ಪಲಿ ಬಳಸಿ ಬಲವಾಗಿ ಥಳಿಸುವಂತೆ ಮಾಡಿರುವ ಘಟನೆ ಘಟನೆ ಸೆಪ್ಟೆಂಬರ್‌ 17 ರ ಶುಕ್ರವಾರದಂದು ನಡೆದಿದೆ. ಇಷ್ಟೇ ಅಲ್ಲದೆ ಯುವಕನ ಮೇಲೆ ದುಷ್ಕಮಿಗಳು ದೌರ್ಜನ್ಯ ನಡೆಸಿದ್ದು, ಮರವೊಂದರ ಕಟ್ಟೆಯ ಮೇಲೆ ಯುವಕನನ್ನು ಬಗ್ಗಿ ನಿಲ್ಲಿಸಿ ಶಿಕ್ಷೆಯನ್ನು ನೀಡಿದ್ದಾರೆ.

ಈ ಬಗ್ಗೆ ಯುವತಿ ದೂರು ನೀಡಿದ್ದು, “ಶುಕ್ರವಾರ ಸಂಜೆ ನಾನು ಮತ್ತು ನನ್ನ ಇನ್ನೊಬ್ಬ ಸ್ನೇಹಿತೆ ಗೋಲ್ ಮಾರ್ಕೆಟ್‌ಗೆ ಬಂದಿದ್ದು, ಈ ವೇಳೆ ಸಲ್ಮಾನ್ ಕೂಡಾ ಸಿಕ್ಕಿದ್ದರು. ಈ ವೇಳೆ ನಾವು ಮೂವರೂ ತಂಪು ಪಾನಿಯ ಕುಡಿಯಲು ಅಂಗಡಿಗೆ ತೆರಳಿದ್ದಾಗ ಬಜರಂಗದಳದವರು ಎಂದು ಹೇಳಿಕೊಂಡು ಕೆಲವರು ಆಗಮಿಸಿದ್ದರು. ಅದರಲ್ಲಿಒಬ್ಬನ ಹೆಸರು ಸಚಿನ್ ಸಿರೋಹಿ ಎಂದಾಗಿತ್ತು” ಎಂದು ದೂರಿದ್ದಾರೆ.

ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್‌ಗಿರಿ; ಬಜರಂಗದಳದ ಕಾರ್ಯಕರ್ತರಿಬ್ಬರ ಬಂಧನ

“ಅವರು ಬಂದು ನನ್ನ ಮತ್ತು ನನ್ನ ಸ್ನೇಹಿತರ ಹೆಸರು ಕೇಳಿದರು. ನಂತರ ಸ್ನೇಹಿತ ಸಲ್ಮಾನ್‌ಗೆ ಹಲ್ಲೆ ನಡೆಸಿದ್ದಾರೆ. ನನ್ನೊಂದಿಗೆ ಮತ್ತು ನನ್ನ ಸ್ನೇಹಿತೆಯೊಂದಿಗೂ ಸಲ್ಮಾನ್‌ಗೆ ಹಲ್ಲೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಮತ್ತೆ ಸಲ್ಮಾನ್ ವಿರುದ್ದ ಪ್ರಕರಣ ದಾಖಲು ಮಾಡುವಂತೆಯು ಒತ್ತಾಯ ಮಾಡಿದ್ದು, ಇಲ್ಲವೆಂದರೆ ಚೆನ್ನಾಗಿರುವುದಿಲ್ಲ ಎಂದು ಬೆದಸಿದ್ದಾರೆ” ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಯ ಕೈಯಲ್ಲಿ ಚಪ್ಪಲಿಯಿಂದ ಥಳಿಸುವಂತೆ ಬಲವಂತ ಪಡಿಸುವ ವಿಡಿಯೊ ಕೂಡಾ ವೈರಲ್ ಆಗಿದೆ. ವಿಡಿಯೊದಲ್ಲಿ ಯುವತಿ ಹಿಂಜರಿದರೂ ದುಷ್ಕರ್ಮಿಗಳು ಮತ್ತೆ ಮತ್ತೆ ಜೋರಾಗಿ ಥಳಿಸುವಂತೆ ಯುವತಿಗೆ ಬೆದರಿಸುವುದು ದಾಖಲಾಗಿದೆ.

“ಸಿವಿಲ್ ಲೈನ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಮೀರತ್‌ ಪೊಲೀಸ್‌ ತನ್ನ ಅಧೀಕೃತ ಟ್ವಿಟರ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಪೊಲೀಸ್‌ಗಿರಿ ನಡೆಸಿದ ಐವರು ಬಿಜೆಪಿ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...