Homeಮುಖಪುಟಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ: ಐವರು ಹಿಂದೂ ಸೇನೆ ಕಾರ್ಯಕರ್ತರ ಬಂಧನ

ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ: ಐವರು ಹಿಂದೂ ಸೇನೆ ಕಾರ್ಯಕರ್ತರ ಬಂಧನ

- Advertisement -
- Advertisement -

ದೆಹಲಿಯ ಅಶೋಕ ರಸ್ತೆಯಲ್ಲಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಅಧಿಕೃತ ನಿವಾಸದ ಮೇಳೆ ದಾಳಿ ನಡೆಸಿದ ಆರೋಪದಲ್ಲಿ ಹಿಂದೂ ಸೇನೆ ಎಂಬ ಗುಂಪಿನವರೆಂದು ಹೇಳಿಕೊಂಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಆಯುಕ್ತ ದೀಪಕ್ ಯಾದವ್ ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಓವೈಸಿ, “ಮನೆ ಮೇಲೆ ದಾಳಿ ನಡೆಸಿದ ಈ ಗುಂಪು ಕೋಮು ಘೋಷಣೆಗಳನ್ನು ಕೂಗಿ, ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದೆ” ಎಂದಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಐವರನ್ನು ಬಂಧಿಸಲಾಗಿದೆ. ಪೊಲೀಸ್ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ದೆಹಲಿ ನೂತನ ಪೊಲೀಸ್ ಆಯುಕ್ತ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಬಿಎಸ್‍ಪಿ ಏಕಾಂಗಿ ಸ್ಪರ್ಧೆ: ಓವೈಸಿ ಜೊತೆ ಮೈತ್ರಿ ತಳ್ಳಿ ಹಾಕಿದ ಮಾಯಾವತಿ

ಘಟನೆ ಕುರಿತು ಸರಣಿ ಟ್ವೀಟ್ ಮಾಡಿರುವ ಹೈದರಾಬಾದ್ ಸಂಸದ ಓವೈಸಿ, “ನನ್ನ ದೆಹಲಿಯ ನಿವಾಸದ ಮೇಲೆ ಇಂದು ಗೂಂಡಾಗಳು ದಾಳಿ ಮಾಡಿದ್ದಾರೆ. ಅವರ ಹೇಡಿತನ ನನಗೆ ಚೆನ್ನಾಗಿ ತಿಳಿದಿದೆ. ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಎಂದಿನಂತೆ ಗುಂಪಿನಲ್ಲಿ ಬಂದಿದ್ದಾರೆ. ಕೊಡಲಿ ಮತ್ತು ಕೋಲುಗಳನ್ನು ಹಿಡು ಬಂದಿದ್ದ ಅವರು ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮನೆ ಮುಂದಿನ ನನ್ನ ನಾಮಫಲಕ ನಾಶ ಮಾಡಿದ್ದಾರೆ” ಎಂದಿದ್ದಾರೆ.

“ದಾಳಿ ನಡೆಸಿದವರು ಕನಿಷ್ಠ 13 ಜನರಿದ್ದರು, ಅದರಲ್ಲಿ 6 ಜನರನ್ನು ಬಂಧಿಸಲಾಗಿದೆ. ನನ್ನ ನಿವಾಸದ ಮೇಲೆ ದಾಳಿ ನಡೆಸುತ್ತಿರುವುದು ಇದು ಮೂರನೇ ಬಾರಿ. ಕಳೆದ ಬಾರಿ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ರಾಜನಾಥ ಸಿಂಗ್ ಅವರು ಕೇವಲ ಗೃಹ ಸಚಿವರಾಗಿರದೆ ನನ್ನ ನೆರೆಯವರಾಗಿದ್ದರು” ಎಂದು ತಿಳಿಸಿದ್ದಾರೆ.

“ಕಳೆದ 40 ವರ್ಷಗಳಿಂದ ಮನೆಯನ್ನು ನೊಡಿಕೊಳ್ಳುತ್ತಿರುವ ರಾಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಗುಂಪು ಕೋಮು ಘೋಷಣೆಗಳನ್ನು ಕೂಗಿ, ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ರಾಜು ಅವರ ಮೊಮ್ಮಕ್ಕಳು ಈಗ ಭಯದಿಂದ ಬದುಕುತ್ತಿದ್ದಾರೆ. ರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದು ಭಾವಿಸುತ್ತೇವೆ” ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.


ಇದನ್ನೂ ಓದಿ: ಹಿಂದುತ್ವ ವಿಚಾರ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...