ಅಹಮದಾಬಾದ್‌ನ ಓಧವ್‌ನಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಗುಂಪಿನ ಈಸ್ಟರ್ ಪ್ರಾರ್ಥನಾ ಸಭೆಗೆ ನುಗ್ಗಿದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಕಾರ್ಯಕರ್ತರ ಗುಂಪೊಂದು ಗದ್ದಲ ಎಬ್ಬಿಸಿದ ಘಟನೆ ಭಾನುವಾರ (ಏ.20) ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕೋಲು, ಲಾಠಿಗಳನ್ನು ಹಿಡಿದ ಪುರುಷರ ಗುಂಪು “ಹರ ಹರ ಮಹಾದೇವ್”, “ಜೈ ಶ್ರೀ ರಾಮ್” ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಪ್ರಾರ್ಥನಾ ಸಭೆಗೆ ನುಗ್ಗಿ, ಅಲ್ಲಿ ಸೇರಿದ್ದ ಜನರನ್ನು ಹೊರ ಹೋಗುವಂತೆ ಆಕ್ರಮಣಕಾರಿಯಾಗಿ ಒತ್ತಾಯಿಸಿರುವುದು ಇದೆ.
Deathly Alarming 🚨
Goons allegedly links with #VHP & Bajrang Dal attacked #Christians in Odhav (Gujarat, India) during Easter Sunday prayer meeting.
They stormed with sticks & knives, threatening women & children while chanting 'Jai Sri Ram'.@rashtrapatibhvn @INCIndia @UN… pic.twitter.com/Ht3scJft4c
— Dr. Lamtinthang Haokip (@DrLamtinthangHk) April 20, 2025
ವೈರಲ್ ವಿಡಿಯೋವನ್ನು ಅನೇಕರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಗುಜರಾತ್ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅಹಮದಾಬಾದ್ ನಗರ ಪೊಲೀಸರು, ಘಟನೆಯನ್ನು ದೃಢೀಕರಿಸಿದ್ದಾರೆ. “ಧಾರ್ಮಿಕ ಮತಾಂತರದ ಶಂಕೆ ಮೇಲೆ ವಿಎಚ್‌ಪಿ ಸದಸ್ಯರು ಪ್ರಾರ್ಥನಾ ಸಭೆಗೆ ನುಗ್ಗಿದ್ದರು. ತಕ್ಷಣ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಅಲ್ಲಿ ಯಾವುದೇ ಅಪಹರಣ ಅಥವಾ ಒತ್ತೆಯಾಳು ಘಟನೆ ನಡೆದಿಲ್ಲ. ದೈಹಿಕ ಗಲಾಟೆ ಮತ್ತು ಇತರ ಅಹಿತಕರ ಘಟನೆ ಸಂಭವಿಸಿಲ್ಲ” ಎಂದು ಅಹಮದಾಬಾದ್ ನಗರ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಓಧವ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರತೀಕ್ ಜಿಂಜುವಾಡಿಯಾ ಮಾತನಾಡಿ, “ಈಸ್ಟರ್ ಹಬ್ಬದ ಸಂದರ್ಭದಲ್ಲಿ ಓಧವ್‌ನ ವಿಮಲ್‌ಪಾರ್ಕ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಪ್ರಾರ್ಥನಾ ಸಭೆಗೆ ನುಗ್ಗಿದ ವಿಎಚ್‌ಪಿ ಕಾರ್ಯಕರ್ತರು ಗದ್ದಲ ಸೃಷ್ಟಿಸಿದ್ದಾರೆ. ನಾವು ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಿದ್ದೇವೆ ಮತ್ತು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ.
ವಿಎಚ್‌ಪಿ ಕಾರ್ಯಕರ್ತರು ಪ್ರಾರ್ಥನಾ ಸಭೆಗೆ ನುಗ್ಗಿರುವ ಬಗ್ಗೆ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ತಕ್ಷಣ ಓಧವ್ ಪೊಲೀಸರ ತಂಡವು ಅಲ್ಲಿಗೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದೆ. ಘಟನೆ ಸಂಬಂಧ ಇನ್ನೂ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಜಿಂಜುವಾಡಿಯಾ ಹೇಳಿದ್ದಾರೆ.
“ಮತಾಂತರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದ ಕಾರಣ “ವಿಎಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ಓಧವ್ ಮತ್ತು ನಿಕೋಲ್‌ನಲ್ಲಿರುವ ಕ್ರಿಶ್ಚಿಯನ್ನರ ಪೂಜಾ ಸ್ಥಳಗಳಿಗೆ ನುಗ್ಗಿದ್ದರು” ಎಂದು ಬಜರಂಗದಳದ ಉತ್ತರ ಗುಜರಾತ್ ಸಂಚಾಲಕ ಜ್ವಾಲಿತ್ ಮೆಹ್ತಾ ಒಪ್ಪಿಕೊಂಡಿದ್ದಾರೆ.
ಮುರ್ಷಿದಾಬಾದ್ ಗಲಭೆಯಲ್ಲಿ ಹೆಚ್ಚಿನ ಬಲಿಪಶುಗಳು ಮಹಿಳೆಯರು: ಮಹಿಳಾ ಆಯೋಗದ ಮುಖ್ಯಸ್ಥೆಯಿಂದ ಸಂತ್ರಸ್ತರ ಭೇಟಿ


