ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಇಸ್ರೇಲ್ ಭೂಪ್ರದೇಶದಿಂದ ನಿಷೇಧಿಸುವ ಇಸ್ರೇಲ್ ಕ್ರಮವನ್ನು ಖಂಡಿಸುವ ಪತ್ರಕ್ಕೆ ಸಹಿ ಹಾಕುವುದರಿಂದ ದೂರವಿರಲು ಭಾರತ ನಿರ್ಧಾರಿಸಿದೆ. ಭಾರತ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಭಾನುವಾರ ಕಟುವಾಗಿ ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿಗೆ ಇಸ್ರೇಲ್ ನಿಷೇಧ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಚಿದಂಬರಂ ಅವರು ಭಾರತದ ನಿಲುವು “ವಿವರಿಸಲಾಗದ ವಿಚಾರ” ಎಂದು ಬಣ್ಣಿಸಿದ್ದು, ಭಾರತವು BRICSನ ದೇಶಗಳಾದ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಹಾಗೂ ಹೆಚ್ಚಿನ ಜಾಗತಿಕ ದಕ್ಷಿಣದ ದೇಶಗಳ ನಿಲುವುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತಾಂಧತೆ ಪ್ರಚೋದಿಸುವ ಘಟನೆ ದೇಶದಲ್ಲಿ ಹೆಚ್ಚುತ್ತಿವೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
“ಬ್ರಿಕ್ಸ್‌ನ ದೇಶಗಳಾದ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಭಾರತವು ತನ್ನ ರ‍್ಯಾಂಕ್‌ಗಳನ್ನು ಮುರಿದುಕೊಂಡಿದೆ. ಭಾರತವು ಸೌಹಾರ್ದ ಮತ್ತು ಸ್ನೇಹಯುತ ಸಂಬಂಧವನ್ನು ಹೊಂದಿರುವ ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳೊಂದಿಗಿನ ರ‍್ಯಾಂಕ್‌ಗಳನ್ನು ಮುರಿದಿದೆ” ಎಂದು ಚಿದಂಬರಂ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿಗೆ ಇಸ್ರೇಲ್ ನಿಷೇಧ
ವಿಶ್ವಸಂಸ್ಥೆಯ ಮುಖ್ಯಸ್ಥರ ಕಚೇರಿಯ ನಿಷ್ಪಕ್ಷಪಾತತೆಯನ್ನು ಒತ್ತಿ ಹೇಳಿದ ಚಿದಂಬರಂ, “ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಪಕ್ಷಾತೀತ ಕಚೇರಿಯಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊರಹಾಕಲು ವಿಶ್ವಸಂಸ್ಥೆ ಏಕೈಕ ಅಂತರರಾಷ್ಟ್ರೀಯ ವೇದಿಕೆಯಾಗಿದೆ. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅನ್ನು ಇಸ್ರೇಲ್ ಪ್ರವೇಶಿಸದಂತೆ ತಡೆಯುವಲ್ಲಿ ಮಾಡಿರುವ ಇಸ್ರೇಲ್‌ನ ನಿರ್ಧಾರ ಸಂಪೂರ್ಣವಾಗಿ ತಪ್ಪಾಗಿದೆ” ಎಂದು ಹೇಳಿದ್ದಾರೆ.
ಇಸ್ರೇಲ್ ನಿರ್ಧಾರವನ್ನು ಖಂಡಿಸುವ ಪತ್ರಕ್ಕೆ ಚಿಲಿ ಸಹಿಹಾಕಿದ್ದು, ಜೊತೆಗೆ ಯುರೋಪಿಯನ್ ಮತ್ತು ಆಫ್ರಿಕನ್ ರಾಷ್ಟ್ರಗಳು ಸೇರಿದಂತೆ 104 ದೇಶಗಳು ಕೂಡಾ ಸಹಿ ಹಾಕಿದೆ. ಈ ಪತ್ರಕ್ಕೆ ಸಹಿ ಹಾಕಿದ ಮೊದಲ ಪಟ್ಟಿಯಲ್ಲಿ ಭಾರತವೂ ಸೇರಿರಬೇಕು ಎಂದು ಚಿದಂಬರಂ ವಾದಿಸಿದ್ದಾರೆ. ಇಸ್ರೇಲ್ ಅನ್ನು ಟೀಕಿಸುವ ನಿರ್ಣಯಗಳ ಮೇಲೆ ಭಾರತವು ಈ ಹಿಂದೆ ಕೂಡಾ ಗೈರುಹಾಜರಾಗಿದ್ದು, ಈ ಪ್ರಕರಣ ತೀರಾ ಇತ್ತೀಚಿನದಗಿದೆ.
ಇದನ್ನೂ ಓದಿ: ಬಿಜೆಪಿ ಭಯೋತ್ಪಾದಕ ಪಕ್ಷ; ದಲಿತರ ಮೇಲಿನ ದಾಳಿಗೆ ಬೆಂಬಲಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ
ಇಸ್ರೇಲ್‌ನ ನಿರ್ಧಾರವನ್ನು ಖಂಡಿಸಿರು ಪತ್ರವು, ಅಂತಹ ಕ್ರಮಗಳು ಸಂಘರ್ಷಗಳಿಗೆ ಮಧ್ಯಸ್ಥಿಕೆ ವಹಿಸುವ ಮತ್ತು ಮಾನವೀಯ ನೆರವು ನೀಡುವ ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಾದಿಸಿದೆ.
ಇತ್ತೀಚೆಗೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು “ನಿಸ್ಸಂದಿಗ್ಧವಾಗಿ ಖಂಡಿಸಲು” ವಿಶ್ವಸಂಸ್ಥೆ ವಿಫಲವಾಗಿದೆ ಎಂದು ಉಲ್ಲೇಖಿಸಿ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಗುಟೆರಸ್ ಅವರನ್ನು ‘ಪರ್ಸನಾ ನಾನ್ ಗ್ರಾಟಾ’ ಎಂದು ಘೋಷಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಹಮಾಸ್ ಮಾಡಿದ ದೌರ್ಜನ್ಯವನ್ನು ಖಂಡಿಸದ ಯುಎನ್ ಮುಖ್ಯಸ್ಥರನ್ನು ಕಾಟ್ಜ್ ಖಂಡಿಸಿದ್ದಾರೆ. “ಇಸ್ರೇಲ್‌ನ ಮೇಲೆ ಇರಾನ್‌ನ ಘೋರ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಲು ಸಾಧ್ಯವಾಗದ ಯಾರಾದರೂ, ಪ್ರಪಂಚದ ಪ್ರತಿಯೊಂದು ದೇಶಗಳು ಮಾಡಿದಂತೆ, ಇಸ್ರೇಲಿ ನೆಲದಲ್ಲಿ ಕಾಲಿಡಲು ಅರ್ಹರಲ್ಲ” ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ವಿಡಿಯೊ ನೋಡಿ: ರಾಯಚೂರಿನಲ್ಲಿ AIIMS ಸ್ಥಾಪಿಸದೆ ವಂಚನೆ ಮಾಡುತ್ತಿರುವ ಸರ್ಕಾರ: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟನೆಯ ದನಿ
ವಿಡಿಯೊ ನೋಡಿ: ರಾಯಚೂರಿನಲ್ಲಿ AIIMS ಸ್ಥಾಪಿಸದೆ ವಂಚನೆ ಮಾಡುತ್ತಿರುವ ಸರ್ಕಾರ: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟನೆಯ ದನಿ
ವಿಡಿಯೊ ನೋಡಿ: ರಾಯಚೂರಿನಲ್ಲಿ AIIMS ಸ್ಥಾಪಿಸದೆ ವಂಚನೆ ಮಾಡುತ್ತಿರುವ ಸರ್ಕಾರ: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟನೆಯ ದನಿ


