ಬೆಂಗಳೂರಿನಲ್ಲಿ 2016ರ ಮಾರ್ಚ್‌ನಲ್ಲಿ ವರದಿಯಾದ ಕಸ್ಟಡಿ ಸಾವಿನ ಪ್ರಕರಣದಲ್ಲಿ ಹೆಡ್ ಕಾನ್‌ಸ್ಟೆಬಲ್ ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ತಪ್ಪಿತಸ್ಥರೆಂದು 51ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ (ನವೆಂಬರ್ 25) ತೀರ್ಪು ನೀಡಿದೆ. ನ್ಯಾಯಾಲಯವು ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹50,000 ದಂಡ ವಿಧಿಸಿದೆ. 2016ರ ಕಸ್ಟಡಿ ಸಾವು
ಜೆಬಿ ನಗರದಲ್ಲಿನ ಉದ್ಯಮಿಯೊಬ್ಬರ ಕಳ್ಳತನಕ್ಕೆ ಸಂಬಂಧಿಸಿ ಅವರ ಮನೆಗೆಲಸದ ವ್ಯಕ್ತಿಯನ್ನು ಆರೋಪಿ ಎಂದು ಶಂಕಿಸಲಾಗಿತ್ತು. ಶಿಕ್ಷೆಗೊಳಗಾದ ಪೊಲೀಸ್ ಸಿಬ್ಬಂದಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ಏಜಾಜ್ ಖಾನ್, ಈ ಹಿಂದೆ ಜೆ.ಬಿ.ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪ್ರಸ್ತುತ ಅವರು ಹಲಸೂರು ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ; ಮತ್ತು ಕಾನ್‌ಸ್ಟೆಬಲ್‌ಗಳಾದ ರಾಮಮೂರ್ತಿನಗರ ಠಾಣೆಯ ಕೇಶವ ಮೂರ್ತಿ, ಇಂದಿರಾನಗರ ಸಂಚಾರ ಠಾಣೆಯ ಮೋಹನ್ ರಾಮ್ ಮತ್ತು ಇಂದಿರಾನಗರ ಪೊಲೀಸ್ ಠಾಣೆಯ ಸಿದ್ದಪ್ಪ ಸೇರಿದ್ದಾರೆ. 2016ರ ಕಸ್ಟಡಿ ಸಾವು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಳ್ಳತನ ಪ್ರಕರಣದಲ್ಲಿ ಪೊಲೀಸರು 42 ವರ್ಷದ ಮಹೇಂದ್ರ ಸಿಂಗ್ ರಾಥೋಡ್ ಎಂಬ ಮನೆಕೆಲಸಗಾರರನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆಯ ವೇಳೆ ಪೊಲೀಸರು ಕಸ್ಟಡಿಯಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹಲ್ಲೆಯ ಗಾಯದಿಂದ ಅವರು ನಂತರ ಸಾವನ್ನಪ್ಪಿದ್ದರು.
ಸಂತ್ರಸ್ತ ವ್ಯಕ್ತಿಯು ಮೂಲತಃ ಬಿಹಾರ ಮೂಲದವರಾಗಿದ್ದು, 12 ವರ್ಷಗಳಿಂದ ಎಚ್‌ಎಎಲ್ 2ನೇ ಹಂತದಲ್ಲಿರುವ ಉದ್ಯಮಿಯ ಮನೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರು ₹3.5 ಲಕ್ಷ ದೋಚಿದ್ದಾರೆ ಎಂದು ಆರೋಪಿಸಲಾಗಿತ್ತು. ಸ್ಟೇಷನ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹೇಂದ್ರ ಅವರು ಸ್ಟೇಷನ್ ಒಳಗೆ ನಡೆದುಕೊಂಡು ಹೋಗುತ್ತಿರುವುದು ದಾಖಲಾಗಿತ್ತು. ಆದರೆ ಸಂಜೆಯ ಹೊತ್ತಿಗೆ ಅವರು ಕುಸಿದುಬಿದ್ದಿದ್ದರು ಮತ್ತು ಹತ್ತಿರದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು.
ಮೃತರ ಕುಟುಂಬಕ್ಕೆ ಪರಿಹಾರವಾಗಿ ₹ 2 ಲಕ್ಷ (ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ವಿಧಿಸಿರುವ ದಂಡ) ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ರಾಜ್ಯ ಸರ್ಕಾರದಿಂದ ಪರಿಹಾರವನ್ನು ನಿರ್ಧರಿಸಲು ಜಿಲ್ಲಾ ಕಾನೂನು ಘಟಕದ ಶಿಫಾರಸನ್ನೂ ಕೋರಿದೆ.
ಮಹೇಂದ್ರ ಅವರನ್ನು ಠಾಣೆಗೆ ಕರೆತಂದಾಗ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಕ್ರಿಕೆಟ್ ಪಂದ್ಯವೊಂದರ ಭದ್ರತಾ ಕರ್ತವ್ಯದ ಮೇಲೆ ಹೋಗಿದ್ದರು. ಈ ವೇಳೆ ಆರೋಪಿ ಮಹೇಂದ್ರ ಅವರ ವಿರುದ್ಧ ಲಾಠಿ ಮತ್ತು ರೋಲರ್‌ನಿಂದ ಹಲ್ಲೆ ನಡೆಸಲಾಗಿತ್ತು. ಇದು ಅವರ ಸಾವಿಗೆ ಕಾರಣ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕೃಷ್ಣವೇಣಿ ಹೇಳಿದ್ದಾರೆ.
ಕಸ್ಟಡಿಯಲ್ ಸಾವು ಕರ್ತವ್ಯಲೋಪಕ್ಕಾಗಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಆರಂಭದಲ್ಲಿ, ಅಸ್ವಾಭಾವಿಕ ಸಾವು ಎಂದು ಪ್ರಕರಣವನ್ನು ದಾಖಲಿಸಲಾಯಿತಾದರೂ, ಸಿಐಡಿ ತನಿಖೆಯ ನಂತರ ಆರೋಪಿಗಳ ವಿರುದ್ಧ ಕೊಲೆಗೆ ಸಮಾನವಲ್ಲದ ಅಪರಾಧದ ನರಹತ್ಯೆಯ ಆರೋಪಗಳನ್ನು ಹೊರಿಸಲಾಗಿತ್ತು.


