ರಾಜ್ಯ ಸರ್ಕಾರ ಉದ್ದೇಶಿಸಿರುವ ಬಸ್ ಪ್ರಯಾಣ ದರ ಏರಿಕೆಯನ್ನು ‘ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ’ ವಿರೊಧಿಸಿದ್ದು, ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. “ಆದಾಯ ಪಾರ್ಕಿಂಗ್ ಶುಲ್ಕ ಮತ್ತು ದಟ್ಟಣೆ ತೆರಿಗೆಯಂತಹ ಉಪಾಯಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಹೇಳಿರುವ ವೇದಿಕೆಯು, “ಟನಲ್ ರಸ್ತೆ ಮತ್ತು ಸಿಗ್ನಲ್ ಮುಕ್ತ ಕಾರಿಡಾರ್‌ಗಳಂತಹ ಯೋಜನೆಗಳನ್ನು ಸರ್ಕಾರ ಕೈಬಿಡಬೇಕು ಮತ್ತು ಬಸ್ ವ್ಯವಸ್ಥೆಯನ್ನು ಬಲಪಡಿಸಲು ಆ ಹಣವನ್ನು ಬಳಸಬೇಕು” ಎಂದು ಭಾನುವಾರ ಹೇಳಿದೆ. ಬೆಂಗಳೂರು ಬಸ್ ಪ್ರಯಾಣಿಕರ
ರಾಜ್ಯ ಸರ್ಕಾರ ಬಸ್ ದರ ಹೆಚ್ಚಳ ಮಾಡಿರೋದು ನ್ಯಾಯಯುತವಾಗಿಲ್ಲ ಎಂದು ಹೇಳಿರುವ ವೇದಿಕೆಯು, ಬಸ್ ದರ ಹೆಚ್ಚಿಸುವುದರಿಂದ ಸರ್ಕಾರವು ಜನರನ್ನು ಬಸ್ ಸೇವೆಯಿಂದ ದೂರ ತಳ್ಳುತಿದೆ, ದುಡಿಯುವ ವರ್ಗದ ಬಸ್ ಪ್ರಯಾಣಿಕರಿಗೆ, ಈ ಬಸ್ ದರದಿಂದ ಹೊಡೆತ ಬೀಳುತ್ತದೆ ಹಾಗೂ ಅವರಿಗೆ ಇದನ್ನು ಬರಿಸುವುದು ಕಷ್ಟವಾಗುತ್ತದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಹುಪಾಲು ಕಾರ್ಮಿಕ ವರ್ಗದವರಿಗೆ ಬಸ್ಸು ನಗರ ಸಂಚಾರದ ಜೀವನಾಡಿಯಾಗಿದೆ. ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿರುವುದಕ್ಕಾಗಿ ಅವರಿಗೆ ಈ ರೀತಿ ದರ ಏರಿಸಿ ದಂಡ ವಿಧಿಸುವುದು ಅನ್ಯಾಯವಾಗಿದೆ ಎಂದು ವೇದಿಕೆಯು ಹೇಳಿದೆ. ಬೆಂಗಳೂರಿನ ಸಂಚಾರ ಸಮಸ್ಯೆಗೆ ಆರಾಮದಾಯಕ, ಕೈಗೆಟುಕುವ ದರವುಳ್ಳ ಸಾರ್ವಜನಿಕ ಸಾರಿಗೆಯೇ ಪರಿಹಾರ ಎಂದಿರುವ ಬಸ್ ಪ್ರಯಾಣಿಕರ ವೇದಿಕೆ, ಇದರಿಂದ ಪರಿಸರಕ್ಕೂ ಒಳ್ಳೆಯದಾಗುತ್ತದೆ ಎಂದು ಹೇಳಿದೆ.ಬೆಂಗಳೂರು ಬಸ್ ಪ್ರಯಾಣಿಕರ
“ದ್ವಿಚಕ್ರವಾಹನ ಉಳ್ಳ ಬಸ್ ಪ್ರಯಾಣಿಕರು, ಬಸ್ ಅನ್ನು ಬಿಟ್ಟು ಮತ್ತೆ ದ್ವಿಚಕ್ರ ವಾಹನ ಉಪಯೋಗಿಸುವುದು ಪ್ರಾರಂಭಿಸುತ್ತಾರೋ ಎಂಬ ಆತಂಕ ಇದೆ. ಹೆಚ್ಚು ಶುಲ್ಕ ಕೊಟ್ಟು ಐರಾವತ ಹಾಗು ಎಸಿ ವೋಲ್ವೋ ಬಸ್ ಗಳಲ್ಲಿ ಪ್ರಯಾಣಿಸುವ ಗ್ರಾಹಕರು ದರ ಏರಿಕೆಯಿಂದ ಈ ಸೌಲತ್ತನ್ನು ಉಪಯೋಗಿಸುವುದು ನಿಲ್ಲಿಸಬಹುದು ಎಂದು ಸಹ ನಮಗೆ ಆತಂಕವಿದೆ” ಎಂದು ವೇದಿಕೆ ಹೇಳಿದ್ದು, ಸಾರಿಗೆ ನಿಗಮದ ಆದಾಯ ಹೆಚ್ಚಿಸಲು , ಸರ್ಕಾರ ಬೇರೆ ಮಾರ್ಗೋಪಾಯಗಳನ್ನು ಅನುಸರಿಸಬೇಕೆಂದು ಮನವಿ ಮಾಡಿದೆ.
ಜೊತೆಗೆ ಬಸ್ ಸಾರಿಗೆ ಸಂಸ್ಥೆಗಳು ಆದಾಯ ಹೆಚ್ಚಿಸಲು ಕೆಲವು ವಿಧಾನಗಳನ್ನು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸರ್ಕಾರಕ್ಕೆ ಸೂಚಿಸಿದೆ.
1. ಎಲ್ಲ ರಸ್ತೆಗಳಲ್ಲೂ ಪಾರ್ಕಿಂಗ್ ಶುಲ್ಕ ಸಂಗ್ರಹಿಸಿ.
2. ಗರಿಷ್ಟ ಸಂಚಾರ ಸಮಯದಲ್ಲಿ ಖಾಸಗಿ ವಾಹನಗಳಿಂದ ದಟ್ಟಣೆ ಶುಲ್ಕ ( congestion tax) ಸಂಗ್ರಹಿಸಿ.
3. ಕಂಪನಿಗಳಿಗೆ ತಮ್ಮ ನೌಕರರ ಖಾಸಗಿ ಸಂಚಾರದ ಆದರದ ಮೇಲೆ ಟ್ರಾಫಿಕ್ ಸೆಸ್ಸ್ ವಿಧಿಸಿ, ಎಂಬ ಮೂರು ವಿಧಾನಗಳನ್ನು ಸೂಚಿಸಿದೆ.
ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಹಕ್ಕೊತ್ತಾಯ
1. ಸರ್ಕಾರ ಬಸ್ ದರ ಏರಿಕೆಯನ್ನು ಹಿಂಪಡಿಯಬೇಕು.
2. ಟನಲ್ ರೋಡ್ ಫ್ಲೈಓವರ್ ಮತ್ತು ಮುಂತಾದ ಯೋಜನೆಗಳು, ಎಲ್ಲೂ ಸಹ ವಾಹನ ದಟ್ಟಣೆಯನ್ನು ನಿಲ್ಲಿಸಿಲ್ಲ, ಸಂಚಾರದ ಸಮಸ್ಯೆ ಪರಿಹರಿಸಿಲ್ಲ. ಹಾಗಾಗಿ ಸರ್ಕಾರ ಈ ಯೋಜನೆಗಳನ್ನು ಕೈ ಬಿಡಬೇಕು. ಈ ಯೋಜನೆಗಳಿಗೆ ಸುರಿಯುವ ಬಂಡವಾಳವನ್ನ ಬಸ್ ಸೇವೆ ಬಲಪಡಿಸಲು ಉಪಯೋಗಿಸಬಹುದು.
3. ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರವೆಂದರೆ ಹೆಚ್ಚು ಬಸ್‌ಗಳು ಹಾಗೂ ಬಸ್ ಆದ್ಯತೆ ಲೇನ್ ( bus-lanes). ಹಾಗಾಗಿ ಸರ್ಕಾರ ಇದಕ್ಕೆ ಆಧ್ಯತೆ ನೀಡಬೇಕು.
4. ಸರ್ಕಾರ ಬಸ್ ಸೇವೆಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಬೇಕು.
5. ನಗರಗಳಲ್ಲಿ ಕಾರ್ ಉಪಯೋಗಿಸುವುದನ್ನು ಸರ್ಕಾರ ನಿರುತ್ಸಾಹಗೊಳಿಸಬೇಕು – ಕಾರುಗಳ ಮೇಲೆ ಪಾರ್ಕಿಂಗ್ ಶುಲ್ಕ , ದಟ್ಟಣೆ ಶುಲ್ಕ , ಟ್ರಾಫಿಕ್ ಸೆಸ್ ಅನ್ನು ವಿಧಿಸಬೇಕು. ಸಾರ್ವಜನಿಕ ಸಂಚಾರವನ್ನು ಉಪಯೋಗಿಸಲು ಪ್ರೋತ್ಸಾಹಿಸಬೇಕು, ಹಾಗಾಗಿ ಬಸ್ ದರ ಕಮ್ಮಿ ಅಥವಾ ಉಚಿತ ಮಾಡಬೇಕು.
ಇದನ್ನೂಓದಿ: ಉತ್ತರ ಪ್ರದೇಶ 2027ರ ಚುನಾವಣೆಗೆ ಚಟುವಟಿಕೆ ಪ್ರಾರಂಭಿಸಿದ ಸಮಾಜವಾದಿ ಪಕ್ಷ!
ಉತ್ತರ ಪ್ರದೇಶ 2027ರ ಚುನಾವಣೆಗೆ ಚಟುವಟಿಕೆ ಪ್ರಾರಂಭಿಸಿದ ಸಮಾಜವಾದಿ ಪಕ್ಷ!


