ಗೌರ್ಮೆಂಟ್ ಈಸಿ ಆಫ್ ಲಿವಿಂಗ್ ಇಂಡೆಕ್ಸ್-2020 ರಲ್ಲಿ 111 ನಗರಗಳಲ್ಲಿ ಬೆಂಗಳೂರು ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಪುಣೆ ಎರಡನೇ ಸ್ಥಾನ ಪಡೆದರೆ, ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.
“ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದೆ. ನಂತರ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವೀ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್ ಮತ್ತು ಗ್ರೇಟರ್ ಮುಂಬೈ ನಗರಗಳು ಸ್ಥಾನ ಪಡೆದಿದೆ” ಎಂದು PIB ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ವರ್ಗ: ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು
1. ಬೆಂಗಳೂರು
2. ಪುಣೆ
3. ಅಹಮದಾಬಾದ್
4. ಚೆನ್ನೈ
5. ಸೂರತ್
6. ನವೀ ಮುಂಬೈ
7. ಕೊಯಮತ್ತೂರು
8. ವಡೋದರಾ
9. ಇಂದೋರ್
10. ಗ್ರೇಟರ್ ಮುಂಬೈ
ಇದನ್ನೂ ಓದಿ: ’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!
‘ಹತ್ತು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ’ ಎಂಬ ವಿಭಾಗದಲ್ಲಿ, ಶಿಮ್ಲಾ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭುವನೇಶ್ವರ, ಸಿಲ್ವಾಸ್ಸ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ಗುರುಗ್ರಾಮ್, ದಾವಂಗೆರೆ ಮತ್ತು ತಿರುಚಿರಾಪಳ್ಳಿ.
ವರ್ಗ: ಜನಸಂಖ್ಯೆ ಮಿಲಿಯನ್‌ಗಿಂತ ಕಡಿಮೆ
1. ಶಿಮ್ಲಾ
2. ಭುವನೇಶ್ವರ
3. ಸಿಲ್ವಾಸ್ಸಾ
4. ಕಾಕಿನಾಡ
5. ಸೇಲಂ
6. ವೆಲ್ಲೂರು
7. ಗಾಂಧಿನಗರ
8. ಗುರುಗ್ರಾಮ್
9. ದವಾಂಗೆರೆ
10. ತಿರುಚಿರಾಪಳ್ಳಿ
ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮತ್ತು ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ ಈಸಿ ಆಫ್ ಲಿವಿಂಗ್ ಇಂಡೆಕ್ಸ್-2020 ರ ಶ್ರೇಯಾಂಕಗಳನ್ನು ಘೋಷಿಸಲಾಗಿದೆ. ಮೌಲ್ಯಮಾಪನವನ್ನು 2020 ರಲ್ಲಿ ನಡೆಸಲಾಗಿದ್ದು, ಒಟ್ಟು 111 ನಗರಗಳು ಈ ಮೌಲ್ಯಮಾಪನದಲ್ಲಿ ಭಾಗವಹಿಸಿದ್ದವು.
ಪಿಐಬಿ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, “ಈಸಿ ಆಫ್ ಲಿವಿಂಗ್ ಇಂಡೆಕ್ಸ್ ಎಂಬುದು, ಜೀವನೋಪಾಯ ಮತ್ತು ನಗರ ಅಭಿವೃದ್ಧಿಗೆ ವಿವಿಧ ಯೋಜನೆಗಳ ಪ್ರಭಾವವನ್ನು ಮೌಲ್ಯಮಾಪನ ಮಾಡುವ ಸಾಧನವಾಗಿದೆ.”
“ಇದು ಜೀವನದ ಗುಣಮಟ್ಟ, ನಗರದ ಆರ್ಥಿಕ-ಸಾಮರ್ಥ್ಯ ಮತ್ತು ಅದರ ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಆಧರಿಸಿ ಭಾರತದಾದ್ಯಂತ ನಗರಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ. ನಾಗರಿಕ ಗ್ರಹಿಕೆ ಮೂಲಕ ನಗರ ಆಡಳಿತವು ಒದಗಿಸುವ ಸೇವೆಗಳ ಬಗ್ಗೆ ನಿವಾಸಿಗಳ ದೃಷ್ಟಿಕೋನವನ್ನು ಮೌಲ್ಯಮಾಪನವು ಒಳಗೊಂಡಿದೆ” ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ವಿಧಾನಸಭಾ ಅಧಿವೇಶನ | ನಾನುಗೌರಿ ಫೇಸ್‌ಬುಕ್ ಲೈವ್


