Homeಮುಖಪುಟಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

ಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

- Advertisement -
- Advertisement -

ಆಪ್ತ ವಲಯದಲ್ಲಿ ನಚ್ಚಿ ಎಂದೇ ಕರೆಸಿಕೊಳ್ಳುತ್ತಿದ್ದ ಪತ್ರಕರ್ತ ಎಂ.ಎನ್. ಚಕ್ರವರ್ತಿ ಅನೇಕ ಬಣ್ಣಗಳಿಂದ ಕೂಡಿದ ಮತ್ತು ಮಲ್ಲೇಶ್ವರದಲ್ಲಿ ಎಲ್ಲ ಕಡೆಗೂ ಹರಡಿಕೊಂಡು ಬೆಳಗುತ್ತಿದ್ದ ಬೃಹತ್ತಾದ ಕಾಮನ ಬಿಲ್ಲು. ನಾನು ಬೆಂಗಳೂರಿಗೆ ಬಂದು ನನ್ನ ಪಿ.ಯು.ಸಿ. ತರಗತಿಗೆ ದಾಖಲಾದಾಗ, ನಾನು ವಾಸವಿದ್ದ ನಮ್ಮಣ್ಣನ ಮನೆಯ ರಸ್ತೆಯಲ್ಲಿಯೇ ನಚ್ಚಿಯ ಮನೆಯೂ ಇದ್ದದ್ದು. ಮೊದಲ ಭೇಟಿಯಲ್ಲಿಯೇ ನಮ್ಮಿಬ್ಬರ ಸ್ನೇಹದ ಸಂಕೋಲೆಗೆ ಪುಷ್ಟಿಕೊಟ್ಟಿದ್ದು ಇಬ್ಬರಲ್ಲಿಯೂ ಇದ್ದ ಮತ್ತು ಹೊಂದಿಕೊಳ್ಳುತ್ತಿದ್ದ ಒಂದೇ ತರಂಗಾಂತರದ ಹಾಸ್ಯ ಪ್ರಜ್ಞೆ. ನನ್ನ ಹಳ್ಳಿಯ ಅನುಭವಗಳನ್ನ ವಿವರಿಸುವಾಗ ಪಟ್ಟಣದಲ್ಲೇ ಬೆಳೆದ ನಚ್ಚಿ ವಿಸ್ಮಯಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ಆಗತಾನೆ ನನಗೆ ಪರಿಚಯವಾಗುತ್ತಿದ್ದ ನನ್ನ ಸ್ನೇಹಿತರ ಬಳಗ ನನಗೆ ’ಗೌಡ’ ಎಂಬ ನಾಮಕರಣವನ್ನ ಮಾಡಿದ್ದರು.

ಸಂಜೆಯಾದರೆ ಈ ಬಳಗವೆಲ್ಲಾ ನಚ್ಚಿಯ ಮನೆಯ ಮುಂದಿದ್ದ ಖಾಲಿ ಸೈಟಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನಚ್ಚಿಯಲ್ಲಿ ಆಗತಾನೆ ಮೊಳಕೆಯೊಡೆದ ಸಾಹಿತ್ಯಾಭಿಮಾನ ನನ್ನಲ್ಲೂ ಅದು ಅಂಕುರವಾಗುವಂತೆ ಮಾಡಿತು. ಮಲ್ಲೇಶ್ವರದ ಗುಪ್ತ ಲೈಬ್ರರಿಗೆ ಪ್ರತಿ ದಿನವೂ ನಮ್ಮ ಭೇಟಿ ಇರುತ್ತಲೇ ಇತ್ತು. ಆಗ ನಾವು ಓದುತ್ತಿದ್ದದ್ದು ನರಸಿಂಹಯ್ಯನವರ ಪುರುಷೋತ್ತಮನ ಸಾಹಸ, ಪೆರ್ರಿಮೇಸನ್ ಮುಂತಾದ ಪತ್ತೇದಾರಿ ಕಾದಂಬರಿಗಳು ಮತ್ತು ಆಸ್ಟರಿಕ್ಸ್ ಕಾಮಿಕ್ಸ್‌ಗಳು ಇತ್ಯಾದಿ. ಈ ಸಮಯದಲ್ಲಿ ನಚ್ಚಿಗೆ ವಿಶೇಷವಾದ ಆಸಕ್ತಿ ಮೂಡಿದ್ದು ಪತ್ರಿಕೋದ್ಯಮದ ಮೇಲೆ. ನಮ್ಮ ಪದವೀಧರ ಪರೀಕ್ಷೆ ಮುಗಿದ ಮೇಲೆ ನಚ್ಚಿ ಮೂರು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ಬರಹಗಾರ ಆಗಿದ್ದರು.

ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಮುಖ್ಯ ವರದಿಗಾರರಾಗಿ ನಿವೃತ್ತಿ ಹೊಂದಿದರು. ಈಗಿನ ದೂರದರ್ಶನದ ಮಹಾನಿರ್ದೇಶಕ ಸೂರ್ಯಪ್ರಕಾಶ್ ಅವರ ಒಡನಾಡಿಯಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದ್ದರು.

ಪತ್ರಿಕೋದ್ಯಮದ ಜೊತೆಜೊತೆಗೇ, ನಚ್ಚಿ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದ ಗರ್ವ ಧಾರಾವಾಹಿಯ ಸಂಭಾಷಣೆಯನ್ನು ಕೂಡ ಬರೆದಿದ್ದರು. ಇಂತಹ ಅನೇಕ ಘಟನೆಗಳು ನನ್ನ ನೆನಪಿನಲ್ಲಿ ಹಾದುಹೋಗುತ್ತಿವೆ.

ಅಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಬರೆದ ಎಂ.ಎಸ್. ಸುಬ್ಬಲಕ್ಷ್ಮಿಯವರ ಜೀವನ ಚರಿತ್ರೆಯ ಬಿಡುಗಡೆ. ಅದೇ ಸಂದರ್ಭದಲ್ಲಿ ಸುಧಾ ರಘುನಾಥನ್ ಅವರ ಸಂಗೀತ. ನಾನೂ ಅಲ್ಲಿಗೆ ಹೋಗಿದ್ದೆ. ನಚ್ಚಿಯ ಪತ್ರಿಕೋದ್ಯಮದಲ್ಲಿನ ಆಸಕ್ತಿ ಅವನನ್ನು ಅಲ್ಲಿಗೆ ಕರೆತಂದಿತ್ತು. ನನ್ನ ಸಂಗೀತದ ಆಸಕ್ತಿ ನಾನು ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದು. ಅಂದು ಜಾರ್ಜ್ ಅವರ ಹಸ್ತಾಕ್ಷರವನ್ನು ಎರಡೂ ಪುಸ್ತಕಗಳಿಗೆ ಇಬ್ಬರೂ ಹಾಕಿಸಿಕೊಂಡು ಕೊಂಡೆವು.

ಭಾಷಣದ ಕಾರ್ಯಕ್ರಮ ಮುಗಿದಮೇಲೆ ಇಡೀ ಮೂರು ಗಂಟೆಗಳ ಕಾಲ ನಚ್ಚಿ ನನ್ನ
ಜತೆಯಲ್ಲಿಯೇ ಕುಳಿತಿದ್ದ. ವಿಶೇಷವೆಂದರೆ ನನಗೂ ತಿಳಿಯದಿದ್ದ ಕೆಲವು ರಾಗಗಳ ಬಗ್ಗೆ ನನಗೆ ಹೇಳುತ್ತಿದ್ದ. ಅವನ ವೈವಿಧ್ಯಮಯ ಆಸಕ್ತಿಯ ಬಗ್ಗೆ ಹೇಳಬೇಕಾದ ಉದಾಹರಣೆಯಲ್ಲಿ ಇದೂ ಒಂದು.

ಇನ್ನೊಂದು ಘಟನೆ ಈಗ ನೆನಪಿಗೆ ಬರುತ್ತಿದೆ. ಒಮ್ಮೆ ’ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ ಬರೆದ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬೆಂಗಳೂರಿಗೆ ಬಂದಿದ್ದರು. ಆ ಪುಸ್ತಕವನ್ನ ಗಂಗಾರಾಮ್ ಬುಕ್‌ಹೌಸ್‌ನಲ್ಲಿ ಕೊಂಡು ಅವರ ಹಸ್ತಾಕ್ಷರವನ್ನ ಹಾಕಿಸಿಕೊಳ್ಳಲು ಅವರು ಉಳಿದುಕೊಂಡಿದ್ದ ಅಶೋಕ ಹೊಟೇಲಿಗೆ ಇಬ್ಬರೂ ನಡೆದುಕೊಂಡು ಹೋದೆವು. ಆದರೆ ಅವರು ನಮ್ಮನ್ನು ಭೇಟಿಮಾಡಲು ನಿರಾಕರಿಸಿದರು. ಅವರು ಆಚೆ ಬರುವವರೆಗೂ ನಾವು ರಿಸೆಪ್ಷನ್ ಬಳಿಯೇ ಕುಳಿತಿದ್ದೆವು. ಅವರು ಹೊರಬಂದಾಗ ನಮಗೆ ತಿಳಿಸಬೇಕೆಂದು ರಿಸೆಪ್ಷನಿಸ್ಟ್ ಅನ್ನು ಕೇಳಿಕೊಂಡಿದ್ದೆವು. ಅವರಿಬ್ಬರೂ ಆಚೆ ಬಂದಾಗ ರಿಸೆಪ್ಷನಿಸ್ಟ್ ನಮಗೆ ಸಂಜ್ಞೆ ಮಾಡಿದ. ತಕ್ಷಣ ಓಡಿ ಹೋಗಿ ಅವರ ಹಸ್ತಾಕ್ಷರವನ್ನ ಪಡೆದವು.

ಇನ್ನೂ ಒಂದು ಘಟನೆ ನೆನಪಿಗೆ ಬರುತ್ತಿದೆ. ಮಲ್ಲೇಶ್ವರದಲ್ಲಿ ಒಬ್ಬ ಉಭಯಕರ್ ಎನ್ನುವ ಎಣ್ಣೆ ಪಾರ್ಟಿ ಗೆಳೆಯ ಇದ್ದ. ನಮ್ಮಿಬ್ಬರಿಗೂ ಸ್ನೇಹಿತ. ಬೆಳಿಗ್ಗೆ ಶುರುಮಾಡಿದರೆ ರಾತ್ರಿ ಬಾರ್ ಮುಚ್ಚುವವರೆಗೂ ಕುಡಿಯುತ್ತಲೇ ಇರುತ್ತಿದ್ದ. ಅದೇ ಕಾರಣಕ್ಕೆ ಲಿವರ್ ಕೆಟ್ಟು ಹೋಗಿ ಅಸು ನೀಗಿದ್ದು ದುರಂತದ ಮತ್ತು ದುಃಖದ ಸಂಗತಿಯಾಗಿತ್ತು. ಅವನ ತಿಥಿಗೆ ಇಬ್ಬರೂ ಹೋಗಿದ್ದೆವು. ಅವನ ತಂದೆ ಪಿಂಡ ತಂದಿಟ್ಟಾಗ ಒಂದು ಕಾಗೆಯೂ ಬರಲಿಲ್ಲ. ನಚ್ಚಿಗೆ ಏನೋ ಹೊಳೆದಂತಾಯಿತು. ಅಂದು ಅಕ್ಟೋಬರ್ ಎರಡು. ಎಲ್ಲಾ ಹೆಂಡದ ಅಂಗಡಿಗಳೂ ಬಂದ್. ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಕಾಡಿ ಬೇಡಿ ನಚ್ಚಿ ಒಂದು ಕ್ವಾರ್ಟರ್ ತಂದು ಪಿಂಡ ಇಟ್ಟ ದೊನ್ನೆಯ ಒಳಗೆ ಸುರಿದ. ತಕ್ಷಣ ಅನೇಕ ಕಾಗೆಗಳು ಬಂದು ಮುತ್ತಿಕೊಂಡವು. ದುಃಖದ ಸನ್ನಿವೇಶದಲ್ಲಿಯೂ ನಚ್ಚಿಯ ಸಮಯ ಮತ್ತು ಹಾಸ್ಯಪ್ರಜ್ಞೆ ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಕೆಲವು ವರ್ಷಗಳಿಂದ ಕಣ್ಣಿನಲ್ಲಿ ಡಯಾಬೆಟಿಕ್ ರೆಟಿನೊಪತಿಯಿಂದ ಬಳಲುತ್ತಿದ್ದ ನಚ್ಚಿ ದೃಷ್ಟಿಹೀನರಾಗಿದ್ದರು. ಹಲವು ಬಾರಿ ಅವರ ಮನೆಗೆ ಭೇಟಿ ನೀಡಿದಾಗ ಏನೇನೋ ಓದಿ ಹೇಳುವಂತೆ ನನಗೆ ಹೇಳುತ್ತಿದ್ದ.

ನಚ್ಚಿ ಮಾರ್ಚ್ 1, 2021 ರಂದು ಈ ಇಹ ಲೋಕವನ್ನ ತ್ಯಜಿಸಿದ್ದು, ಆತನ ಪ್ರೀತಿಪಾತ್ರರೆಲ್ಲರಲ್ಲೂ ಅತೀವವಾದ ದುಃಖ ಮಡುವುಗಟ್ಟಿದೆ.

ಶ್ರೀನಾಥ್ ಕೆ
ನಟ ಮತ್ತು ಲೇಖಕ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀನಾಥ್ ಇತ್ತೀಚೆಗೆ ಫ್ಯೋದೊರ್ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...