ಕಳೆದ ವರ್ಷ ಆಗಸ್ಟ್ ವೇಳೆಗೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿದ್ಯಾರ್ಥಿಗಳು ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ”ಗಣತಾಂತ್ರಿಕ್ ಛತ್ರ ಸಂಘ್ಸದ್” ಅಥವಾ “ಡೆಮಾಕ್ರಟಿಕ್ ಸ್ಟೂಡೆಂಟ್ ಕೌನ್ಸಿಲ್” ಎಂದು ನಾಮಕರಣ ಮಾಡಿದ್ದಾರೆ. ಬಾಂಗ್ಲಾದೇಶ
ವಿದ್ಯಾರ್ಥಿ ದಂಗೆಯನ್ನು ಮುನ್ನಡೆಸಿದ್ದ “ಸ್ಟೂಡೆಂಟ್ ಅಗೈನ್ಸ್ಟ್ ಡಿಸ್ಕ್ರಿಮಿನೇಷನ್” (SAD) ಗುಂಪಿನ ಪ್ರಮುಖ ಸಂಘಟಕರನ್ನು ಪಕ್ಷವೂ ಒಳಗೊಂಡಿದೆ ಎಂದು ವರದಿಯಾಗಿದೆ. ಹೊಸ ಪಕ್ಷದ ವಿರುದ್ಧ SAD ಗುಂಪಿನ ಇತರ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಾಂತಿಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬುಧವಾರ ಹೊಸ ಗುಂಪಿನ ಹೆಸರನ್ನು ಘೋಷಿಸಿದಾಗ SAD ಸದಸ್ಯರ ನಡುವೆ ದೈಹಿಕ ಘರ್ಷಣೆ ಕೂಡಾ ನಡೆದಿದೆ ಎಂದು ವರದಿಯಾಗಿದೆ. ಮಾಜಿ ಪ್ರಧಾನಿ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ನಂತರ ಅಧಿಕಾರ ವಹಿಸಿಕೊಂಡ ಮಧ್ಯಂತರ SAD ಸದಸ್ಯರನ್ನು ಸೇರಿಸಲಾಗಿತ್ತು. ಇದೀಗ ಇತರ SAD ನಾಯಕರು ಶುಕ್ರವಾರ ಮತ್ತೊಂದು ಪ್ರತ್ಯೇಕ ಪಕ್ಷವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಹೊಸ ಪಕ್ಷವಾದ ಗಣತಾಂತ್ರಿಕ್ ಛಾತ್ರ ಸಂಘ್ಸದ್‌ನಲ್ಲಿ ಹಸೀನಾ ಅವರ ಅವಾಮಿ ಲೀಗ್‌ನ ಯುವ ವಿಭಾಗದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳನ್ನು ಸಹ ಇದ್ದಾರೆ ಎಂದು ವರದಿಯಾಗಿದೆ. ಈ ಸೇರ್ಪಡೆಯನ್ನು ಪಕ್ಷದ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಬಾಂಗ್ಲಾದೇಶ
“ಅವಾಮಿ ಲೀಗ್‌ನ ವಿದ್ಯಾರ್ಥಿಗಳಿಗೆ ಪಕ್ಷದಲ್ಲಿ ಅವಕಾಶ ನೀಡುವಾಗ, ಕ್ರಾಂತಿಯ ಸಮಯದಲ್ಲಿ ಅವರಲ್ಲಿ ಯಾರೂ ಸಾಮೂಹಿಕ ಹತ್ಯೆ ಅಥವಾ ಚಿತ್ರಹಿಂಸೆಯಲ್ಲಿ ಭಾಗಿಯಾಗಿಲ್ಲ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ” ಎಂದು ಹೊಸ ಗುಂಪಿನ ನಾಯಕ ಜಾಹಿದ್ ಅಹ್ಸಾನ್ AFP ಗೆ ತಿಳಿಸಿದ್ದಾರೆ.
“ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ನಾವು ಸಮರ್ಪಿತರಾಗಿದ್ದೇವೆ. ಹಸೀನಾ ಅವರ ಸರ್ವಾಧಿಕಾರಿ ಹಿಡಿತವನ್ನು ಕೊನೆಗೊಳಿಸಲು ಒಟ್ಟುಗೂಡಿದ ಸಾಮೂಹಿಕ ಚಳವಳಿಯ ಚೈತನ್ಯವನ್ನು ಎತ್ತಿಹಿಡಿಯಲು ನಾವು ಬಯಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ನಡುವೆ ಭಾರತದಲ್ಲಿ ದೇಶಭ್ರಷ್ಟರಾಗಿರುವ ಹಸೀನಾ ಅವರು, ತಮ್ಮ ವಿರುದ್ಧದ ಅಪರಾಧಗಳ ಆರೋಪಗಳನ್ನು ಒಳಗೊಂಡಂತೆ ಆರೋಪಗಳನ್ನು ಎದುರಿಸಲು ಢಾಕಾದಿಂದ ಬಂದ ಬಂಧನ ವಾರಂಟ್ ಅನ್ನು ಧಿಕ್ಕರಿಸಿದ್ದಾರೆ. ಈ ತಿಂಗಳು ಹಸೀನಾ ಅವರ ಪ್ರತಿಸ್ಪರ್ಧಿ ವಿದ್ಯಾರ್ಥಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತ ಮೈಕ್ರೋಫೈನಾನ್ಸ್ ಪ್ರವರ್ತಕ ಮತ್ತು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು, 2025 ರ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಎಂದು ಹೇಳಿದ್ದಾರೆ. ಹಸೀನಾ ಅವರ ದೀರ್ಘಕಾಲದ ಎದುರಾಳಿಯಾದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ದಲಿತ ಸಹೋದರಿಯರ ಮೇಲೆ ದಾಳಿ-ಮದುವೆ ರದ್ದು ಪ್ರಕರಣ; ವಾರದ ಬಳಿಕ ಕುಟುಂಬವನ್ನು ಭೇಟಿಯಾದ ಸಚಿವರು
ದಲಿತ ಸಹೋದರಿಯರ ಮೇಲೆ ದಾಳಿ-ಮದುವೆ ರದ್ದು ಪ್ರಕರಣ; ವಾರದ ಬಳಿಕ ಕುಟುಂಬವನ್ನು ಭೇಟಿಯಾದ ಸಚಿವರು

