ಭಾರತದ ತಲಾ ಆದಾಯ ಬಾಂಗ್ಲಾದೇಶಕ್ಕಿಂತ ಕೆಳಗಿಳಿಯಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಈ ವರ್ಷ ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ತಲಾ ಜಿಡಿಪಿ ಕುಸಿಯುವ ನಿರೀಕ್ಷೆಯಿದೆ ಇದ್ದು, ತಲಾ ಆದಾಯ ಜಿಡಿಪಿಯಲ್ಲಿ ಬಾಂಗ್ಲಾದೇಶವು ಭಾರತವನ್ನು ಹಿಂದಿಕ್ಕಲಿದೆ ಎಂದು ಅದು ಹೇಳಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ, 2020 ರಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ.4 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಈ ಮೂಲಕ ಭಾರತವನ್ನು ಹಿಂದಿಕ್ಕಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಜಿಡಿಪಿ ಕುಸಿತ: “ಮೋದಿನಾಮಿಕ್ಸ್” ವಿಫಲವಾಗಿದೆ: ಅಧೀರ್ ರಂಜನ್ ಚೌಧರಿ
ಈ ಅಂದಾಜಿನ ಪ್ರಕಾರ, ಭಾರತವು ದಕ್ಷಿಣ ಏಷ್ಯಾದ ಮೂರನೇ ಬಡ ರಾಷ್ಟ್ರವಾಗಲಿದೆ. ಪಾಕಿಸ್ತಾನ ಮತ್ತು ನೇಪಾಳದಲ್ಲಿ ಮಾತ್ರ ತಲಾ ಜಿಡಿಪಿ ಕುಸಿತ ಕಂಡಿದೆ. ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶಗಳು ಭಾರತವನ್ನು ಹಿಂದಿಕ್ಕಲಿವೆ.
ಡಬ್ಲ್ಯುಇಒ ದತ್ತಾಂಶದ ಪ್ರಕಾರ, ಕೊರೊನಾ ವೈರಸ್‌ನಿಂದಾಗಿ ಶ್ರೀಲಂಕಾದ ತಲಾ ಆದಾಯ ಶೇ.4 ರಷ್ಟು ಕುಸಿದಿದ್ದು, ಭಾರತವು ಅತಿ ಹೆಚ್ಚು ಹಿನ್ನಡೆಗೆ ಒಳಗಾಗಿದೆ. ಶ್ರೀಲಂಕಾ ತಲಾ ಆದಾಯ ಜಿಡಿಪಿ ಕುಸಿದಿದ್ದರೂ ಭಾರತವನ್ನು ಹಿಂದಿಕ್ಕಲಿದೆ.
ನೇಪಾಳ ಮತ್ತು ಭೂತಾನ್ ಈ ವರ್ಷ ತಮ್ಮ ಆರ್ಥಿಕತೆಯನ್ನು ಬೆಳೆಸಲು ತುಲನಾತ್ಮಕವಾಗಿ ಹೆಜ್ಜೆ ಇಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.
ಮುಂದಿನ ವರ್ಷ ಭಾರತದಲ್ಲಿ ತೀಕ್ಷ್ಣವಾದ ಆರ್ಥಿಕ ಚೇತರಿಕೆ ಕಾಣುವ ಸಾಧ್ಯತೆಯಿದೆ ಎಂದು ಐಎಂಎಫ್ ಹೇಳಿದೆ. ಒಂದು ವೇಳೆ 2021ರಲ್ಲಿ ಆರ್ಥಿಕ ಚೇತರಿಕೆ ಕಂಡಲ್ಲಿ ಬಾಂಗ್ಲಾದೇಶಕ್ಕಿಂತ ಕೊಂಚನೇ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಆದರೆ, ಬಾಂಗ್ಲಾದೇಶವೂ ಮತ್ತಷ್ಟು ಚೇತರಿಕೆ ಕಂಡಲ್ಲಿ ಅದೂ ಕೂಡ ಅಸಾಧ್ಯವೇ ಆಗಿದೆ.
ಐಎಮ್‌ಎಫ್ ವರದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, “ಬಿಜೆಪಿಯ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ 6 ವರ್ಷಗಳ ಘನ ಸಾಧನೆಯಿದು. ಭಾರತವನ್ನು ಹಿಂದಿಕ್ಕಲು ಬಾಂಗ್ಲಾದೇಶ ಸಜ್ಜಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
Solid achievement of 6 years of BJP’s hate-filled cultural nationalism:
Bangladesh set to overtake India.
??? pic.twitter.com/waOdsLNUVg
— Rahul Gandhi (@RahulGandhi) October 14, 2020
ಇದನ್ನೂ ಓದಿ: ಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?


