Homeಮುಖಪುಟ’ಬೆಂಗಳೂರಿನಲ್ಲಿ ಕಸದ ಭಯೋತ್ಪಾದನೆ ನಿಲ್ಲಿಸಿ’-ಆಮ್‌‌‌ಆದ್ಮಿ ಪಕ್ಷದಿಂದ ಪ್ರತಿಭಟನೆ

’ಬೆಂಗಳೂರಿನಲ್ಲಿ ಕಸದ ಭಯೋತ್ಪಾದನೆ ನಿಲ್ಲಿಸಿ’-ಆಮ್‌‌‌ಆದ್ಮಿ ಪಕ್ಷದಿಂದ ಪ್ರತಿಭಟನೆ

ಮುಂಬೈ ಬೆಂಗಳೂರಿಗಿಂತಲೂ ಎರಡು ಪಟ್ಟು ದೊಡ್ಡ ನಗರವಾಗಿದೆ, ಆದರೆ ಬೆಂಗಳೂರಿನಲ್ಲಿ ಕಸದ ನಿರ್ವಹಣೆಗೆ ಮುಂಬೈಗಿಂತಲೂ ಎರಡು ಪಟ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ

- Advertisement -
- Advertisement -

ಅಧಿಕಾರಿಗಳ ದುರ್ವರ್ತನೆ ಹಾಗೂ ಕಸ ವಿಲೇವಾರಿಯನ್ನು ಮಾಫಿಯಾ ಕೈಗೆ ಕೊಟ್ಟಿದ್ದಾರೆಂದು ಆರೋಪಿಸಿದ ಆಮ್‌ಆದ್ಮಿ‌ ಪಕ್ಷವು ಬೆಂಗಳೂರಿನ ಆರ್‌‌ಆರ್‌ ನಗರದ ಬಿಬಿಎಂಪಿ ಕಚೇರಿಯ ಎದುರು ಪ್ರತಿಭಟನೆ ಮಾಡಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಬೆಂಗಳೂರ ನಗರ ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, “ಆರ್ ಆರ್ ನಗರ ನಿವಾಸಿ ಸಂದೀಪ್ ಎನ್ನುವವರು ಬಿಬಿಎಂಪಿ ಸಹಾಯ ಆ್ಯಪ್ ಮೂಲಕ ಮನೆ ಹತ್ತಿರ ಇದ್ದ ಕಸದ ಸಮಸ್ಯೆ ಬಗ್ಗೆ ದೂರು ನೀಡಿದ್ದರು. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಅಧಿಕಾರಿಗಳು ಅಮಾಯಕ ಪೌರಕಾರ್ಮಿಕರನ್ನು ಎತ್ತಿಕಟ್ಟಿ ಕಸದ ಮಾಫಿಯಾ ಪರವಾಗಿ ಕೆಲಸ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೋದಿಯವರ 20 ಲಕ್ಷ ಕೋಟಿ ಎಂಬುದು ಜುಮ್ಲಾ ಪ್ಯಾಕೇಜ್‌ : ಆಮ್‌ ಆದ್ಮಿ ಪಕ್ಷ

“ಬೆಂಗಳೂರು ಈಗ ಸ್ವಚ್ಚತಾ ಸರ್ವೆಯಲ್ಲಿ 214 ನೇ ಸ್ಥಾನಕ್ಕೆ ಬಂದಿದೆ. ಗಾರ್ಡನ್ ಸಿಟಿ ಎಂದು ಕರೆಯುತ್ತಿದ್ದ ಬೆಂಗಳೂರು ಈಗ ಗಾರ್ಬೇಜ್ ಸಿಟಿಯಾಗಿದೆ. ಮುಂಬೈ ಬೆಂಗಳೂರಿಗಿಂತಲೂ ಎರಡು ಪಟ್ಟು ದೊಡ್ಡ ನಗರವಾಗಿದೆ. ಆದರೆ ಬೆಂಗಳೂರು ನಗರದಲ್ಲಿ ಮುಂಬೈಗಿಂತಲೂ ಎರಡು ಪಟ್ಟು ಹಣವನ್ನು ಕಸದ ನಿರ್ವಹಣೆಗಾಗಿ ಖರ್ಚು ಮಾಡಲಾಗುತ್ತಿದೆ. ಇದರ ಹಿಂದೆ ಕಸದ ಮಾಫಿಯಾ ಇದೆ, ಇದಕ್ಕೆ ಬಿಬಿಎಂಪಿ ತಲೆಬಾಗಿದೆ” ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸುರೇಶ್ ರಾಥೋಡ್, ದರ್ಶನ್ ಜೈನ್, ವೆಂಕಟೇ ಗೌಡ, ಸತೀಸ್ ಗೌಡ, ಸುಮನ್ ಪ್ರಶಾಂತ್ ಹಾಗೂ ನೂರಾರೂ ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ: ವೈದ್ಯಕೀಯ ಉಪಕರಣಗಳ ಖರೀದಿ ಹಗರಣದಲ್ಲಿ ಅಶ್ವತ್ಥ ನಾರಾಯಣ್ ಪಾತ್ರ: ಆಪ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...