Homeಕರ್ನಾಟಕಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

ಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

- Advertisement -
- Advertisement -

ಶತಮಾನಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಮನುವಾದಿ ಮೀಸಲಾತಿಯನ್ನು ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ. ಸ್ವತಂತ್ರ ಭಾರತದಲ್ಲಿ ಮೀಸಲಾತಿಗೆ ಶಾಸನಬದ್ಧತೆಯನ್ನು ತಂದು ಕೊಟ್ಟವರು ಅಂಬೇಡ್ಕರ್‌ರವರು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ, ’ಮೀಸಲಾತಿ ನೂರು ವರ್ಷ’ ಕುರಿತ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಸಂವಿಧಾನ ಎಂದರೆ ಮೀಸಲಾತಿ, ಮೀಸಲಾತಿ ಎಂದರೆ ಸಂವಿಧಾನ ಎಂದು ತಪ್ಪಾಗಿ ಭಾವಿಸಿದ್ದಾರೆ. ಮೀಸಲಾತಿ ಸಂವಿಧಾನದ ಒಂದು ಅಂಶವೇ ಹೊರತು ಮೀಸಲಾತಿಯೇ ಸಂವಿಧಾನವಲ್ಲ. ಸಂವಿಧಾನ ಆಡಳಿತಕ್ಕೆ ಬೇಕಾದಂತ ಎಲ್ಲಾ ತಾಂತ್ರಿಕ ಮತ್ತು ತಾತ್ವಿಕ ಚೌಕಟ್ಟನ್ನು ಒದಗಿಸಿದೆ. ಸಂವಿಧಾನ ಶಾಸ್ತ್ರಕ್ಕೆ ಸಿಗದ ಸಂವೇದನೆ. ಇಲ್ಲಿ ಸಂವೇದನೆ ಎಂದರೆ ಸಾಮಾಜಿಕ ನ್ಯಾಯದ ಆಶಯ, ಸಮಾನತೆಯ ಆಶಯವಾಗಿದೆ ಎಂದರು.

ಮೀಸಲಾತಿಯಿಂದ ಪ.ಜಾತಿ/ಪ.ಪಂಗಡದವರಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ಬಹಳಷ್ಟು ಜನರಿಗೆ ಅಸಮಾಧಾನವಿದೆ. ಮೀಸಲಾತಿಯಿಂದ ಅನೇಕ ಸುಧಾರಣೆಗಳು ನಡೆದಿವೆ ನಿಜ, ಆದರೆ ಮೀಸಲಾತಿಯ ಕುರಿತು ಅಸಹನೆ ವ್ಯಕ್ತಪಡಿಸುವಷ್ಟು ಉನ್ನತ ಉದ್ಯೋಗಗಳು ದಲಿತರಿಗೆ ಸಿಕ್ಕಿವೆ ಎನ್ನುವುದು ಸತ್ಯವಲ್ಲ. ಯೋಗೇಂದ್ರಯಾದವ್ ಅವರ ಸಮೀಕ್ಷೆಯ ವರದಿ ಮತ್ತು ಕೇಂದ್ರ ಸರ್ಕಾರದ ಅಂಕಿ ಅಂಶಗಳನ್ನು ನೋಡಿದರೆ ದೊಡ್ಡ ದೊಡ್ಡ ಸಂಸ್ಥೆಗಳಾದ ಐಐಎಂ, ಐಐಟಿಗಳಲ್ಲಿ ಎಷ್ಟು ಎಸ್ಸಿ ಎಸ್ಟಿಯ ಪ್ರಾಧ್ಯಾಪಕರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದರು.

ಆದರೆ ಮೀಸಲಾತಿ ಮೆರಿಟ್‌ಗೆ ವಿರುದ್ಧ ಎನ್ನುವವರಿದ್ದಾರೆ. ದೇಶದ ಎಲ್ಲಾ ಉನ್ನತ ವಿವಿಗಳಲ್ಲಿ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಪ್ರಾಧ್ಯಾಪಕರೆ ಇದ್ದಾರೆ. ಆದರೂ ಜಗತ್ತಿನ ಉತ್ತಮ ವಿವಿಗಳ ಪಟ್ಟಿಯಲ್ಲಿ ಭಾರತದ ಒಂದು ವಿವಿ ಇಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಮೆರಿಟ್ ಎಂಬ ಮಿಥ್ಯೆ ಇಟ್ಟುಕೊಂಡು ಮೀಸಲಾತಿ ವಿರೋಧ ಮಾಡುವ ಪ್ರವೃತ್ತಿ ಅಪ್ಪಟ ಹುಸಿತನದ್ದು ಎಂದರು.

ಇನ್ನು ಮೀಸಲಾತಿ ವಿಚಾರಕ್ಕೆ ಬಂದರೆ, ಜಾತಿವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಮೀಸಲಾತಿಯನ್ನು ಅಸಹನೀಯವಾಗಿ ಬಿಂಬಿಸುವ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಹತ್ತಾರು ಶತಮಾನಗಳಿಂದ ಮೀಸಲಾತಿ ಜಾರಿಯಲ್ಲಿದೆ. ಶಿಕ್ಷಣ, ದೇವಾಲಯ ಪ್ರವೇಶ, ಮನೆ, ಬಾವಿ ನೀರು, ಕೆರೆ, ಬೀದಿಗಳು ಕೆಲವರಿಗೆ ಮೀಸಲಾಗಿತ್ತು. ಅಷ್ಟೇ ಅಲ್ಲದೆ, ಸ್ಪರ್ಶ ಸಹ ಮೀಸಲಾಗಿತ್ತು. ಆದರೆ, ಇದನ್ನು ನಾವು ಧಿಕ್ಕರಿಸಿದ ಕಾರಣ, ಕೆಲವರು ಇಂದಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾದ ಮೀಸಲಾತಿಯನ್ನು ಟೀಕಿಸುತ್ತಾರೆ ಎಂದರು.

ಗೋಡ್ಸೆ ಕೊಲೆಗಾರ ಎನ್ನಲು ಹಿಂದೇಟು ಏಕೆ?:

ಕರ್ನಾಟಕ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ, ಸಂವಿಧಾನ ಬರೆದಿಲ್ಲ ಎಂದಿರುವುದು ಅವರ ವಿಕೃತ ಮನಸ್ಥಿತಿಯನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ, ಒರಿಸ್ಸಾದ ಪಠ್ಯವೊಂದರಲ್ಲಿ ಮಹಾತ್ಮ ಗಾಂಧಿ ಅವರು ಅವಘಡದಿಂದಾಗಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಗಾಂಧಿಯನ್ನು ಹತ್ಯೆಗೈದವನು ಗೋಡ್ಸೆ ಎಂದು ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು. 2018ರ ಆಗಸ್ಟ್‌ನಲ್ಲಿ ದೆಹಲಿಯ ಜಂತರ್ ಮಂತರ್ ಅಲ್ಲಿ ಭಾರತೀಯ ಸಂವಿಧಾನವನು ಸುಟ್ಟು ಅಂಬೇಡ್ಕರ್ ವಿರುದ್ಧ ದಿಕ್ಕಾರ ಕೂಗುವ ಘಟನೆ ನಡೆಯುತ್ತದೆ. 2019 ಜನವರಿಯಲ್ಲಿ ಗಾಂಧೀಜಿಯವರ ಭಾವಚಿತ್ರದಲ್ಲಿ ಅವರ ಎದೆಗೆ ಅಣಕು ಗುಂಡನ್ನು ಹಾರಿಸಿ ವಿಕಾರ ಸಂಭ್ರಮ ಪಡುವ ಘಟನೆ ನಡೆಯುತ್ತದೆ. ಇವೆಲ್ಲವೂ ದೇಶದ ಸಂವಿಧಾನವನ್ನು ಮರೆಮಾಚುವ ಹುನ್ನಾರ ಎಂದರು.

ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವೆ ತಾರ್ಕಿಕ ಭಿನ್ನಾಭಿಪ್ರಾಯಗಳು ಮಾತ್ರ ಇದ್ದವು. ಅದನ್ನೇ ನೆಪವಾಗಿಟ್ಟುಕೊಂಡು ಅವರ ಅನುಯಾಯಿಗಳ ನಡುವೆ ಅಸಹನೆ ಹೆಚ್ಚಾಗಿದೆ ಎಂದ ಅವರು, ಗಾಂಧಿ ಮತ್ತು ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಇದೀಗ ಮೂಲಭೂತವಾದಿಗಳು ಗಾಂಧಿಯನ್ನು ತಳ್ಳುತ್ತಾ, ಅಂಬೇಡ್ಕರ್ ಅವರನ್ನು ವಶಪಡೆಸಿಕೊಳ್ಳುತ್ತಿರುವ ಪ್ರಕ್ರಿಯಲ್ಲಿ ನಿರತರಾಗಿರುವಾಗ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಡಾ.ಕಿರಣ್ ಗಾಜನೂರು, ಡಾ.ರಾಜಪ್ಪ ದಳವಾಯಿ ಸಂಘಟನೆ ಸಂಚಾಲಕರಾದ ಡಾ.ರಾಜು ಗುಂಡಾಪುರ, ಬಿ.ರಾಜಶೇಖರ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ಇವತ್ತಿನ ಸ್ವಸ್ಥ ಸಮಸಮಾಜ ನಿರ್ಮಾಣ ದಲ್ಲಿ ಗೌರಿ ಮೇಡಮ್ ರವರ ಪತ್ರಿಕೆ ತುಂಬಾ ಆವಶ್ಯಕವಾದುದು.

  2. ಪಂಗಡ,ಪಂಗಡಗಳೊಳಗೆ ಹಣಕಾಸು ಮಾನದಂಡದಡಿಯಲ್ಲಿ ಶೇ.ನೂರು ಮೀಸಲಾತಿ ಒದಗಿಸುವುದೊಂದೇ ಮೀಸಲಾತಿ ಕಗ್ಗಂಟಿಗಿರುವ ಪರಿಹಾರ.
    ಶೆ.ಅಯ್ವತ್ತರ ಮಿತಿಯನ್ನು ತಕ್ಕ ತಿದ್ದುಪಡಿ ಮಾಡಿ ಸಡಿಲಮಾಡಬೇಕಾಗಿದೆ

  3. ಮೀಸಲಾತಿ ನೆರವಿನಿಂದ ಮೇಲೆ ಬಂದ ಪ.ಪ/ಪ.ಬುಡಕಟ್ಟು ಮಂದಿ ತನ್ನದೇ ಪಂಗಡದ ವಂಚಿತ ಮಂದಿಗೆ ತಕ್ಕ ಪಾಲು ಸಿಗುವಂತೆ ಹೆಜ್ಜೆ ಇಡಬೇಕು. ಇಲ್ಲವಾದರೆ, ಮೀಸಲಾತಿ ಒಪ್ಪದವರ ಎದುರು ದಾಳಿಗೆ ಪದೇಪದೇ ತುತ್ತಾಗಬೇಕಾಗುತ್ತೆ. ಇದು ಮತ್ತೆ ಕೆಲವರ ಎಲೆಕ್ಶನ್ ಇಶ್ಯೂ ಆಗಿ ಒಡಕಿಗೆ ಎಡಮಾಡಲಿದೆ.
    ಮೀಸಲಾತಿಯಿಂದ ಒಂದು ಬಗೆಯ ಹತೋಟಿ ಕೂಟ ಮೂಡಿರುವುದನ್ನೂ ಕೂಡ ಕಡೆಗಣಿಸಬಾರದು.

  4. ಈಗ ಹೆಚ್ಚುಮಂದಿಗೆ ಅನುಕೂಲವಾಗುತ್ತಿರುವ ಮೀಸಲಾತಿ ಏರ್ಪಾಡಿಗಿಂತ ಹತೋಟಿಕೂಟ ಬಡ್ತಿಯಲ್ಲಿ ತನಗೆ ಸಿಗಬೇಕಾದ ಹೆಚ್ಚಿನಪಾಲಿಗೆ ಹಾತೊರೆಯುತ್ತಿರುವ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಬಗೆಹರಿಸಿಕೊಳ್ಳಬೇಕುಉ.
    ಒಳಮೀಸಲಾತಿಯನ್ನು ಪಡೆಯಲು ಮೂಡುತ್ತಿರುವ ದಿಟವಾಗಿಯೂ ತುಳಿತಕ್ಕೊಳಗಾದವರ ಹೋರಾಟವನ್ನು ಮೀಸಲಾತಿ ಒಪ್ಪುವವರು ಬೆಂಬಲಿಸಲು ಯಾವುದೇ ನೆಪ ಹೇಳಬಾರದು.

  5. ಸದಾಶಿವ ರಿಪೋರ್ಟ್, ಸೋಸಿಯೋ ಎಕಾನಮಿಕ್ ಸರ್ವೆ ರಿಪೋರ್ಟ್ ಅನ್ನು ಬಯಲುಗೊಳಿಸಲು ಒತ್ತಾಯಿಸಬೇಕು.

  6. ಈ ಬಗ್ಗೆ ಹೆಚ್ಚಿನ ಒರೆತಮಾಡಿ ತಕ್ಕ ತಿದ್ದುಪಡಿಗೆ ಎಡೆಮಾಡಿಕೊಡಬೇಕು.

  7. ಮೀಸಲಾತಿ ಬಗೆಗೆ ಗಣಿತದಂತೆ ಪಕ್ಕಾ ಪಾರ್ಮುಲ ತಂದರೆ, ಏಳಿಗೆಗೆ ಇರುವ ದಾರಿಯತ್ತ ದಾಪುಗಾಲಿಡಬಹುದು.

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...