300 ರೂ.ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ 11 ರಿಂದ 13 ವರ್ಷ ವಯಸ್ಸಿನ ನಾಲ್ಕು ದಲಿತ ಬಾಲಕರನ್ನು 4 ಕಿ.ಮೀ.ಗಳಷ್ಟು ದೂರ ಬೆನ್ನ ಹಿಂದೆ ಕೈಗಳನ್ನು ಕಟ್ಟಿ ಮೆರವಣಿಗೆ ನಡೆಸಿದ ಅಘಾತಕಾರಿ ಘಟನೆ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಬನ್‌ಭೋರಿ ಗ್ರಾಮದಲ್ಲಿ ನಡೆದಿದೆ. ಭಾಸೌರ್ ಗ್ರಾಮದ ಸರ್ಪಂಚ್ ಮತ್ತು ಪಂಚಾಯತ್ ಸದಸ್ಯರು ಬಾಲಕರಿಗೆ ಈ ಶಿಕ್ಷೆ ವಿಧಿಸಿದ್ದು, ಮಾತ್ರವಲ್ಲದೆ ಅವರ ಕುಟುಂಬಗಳಿಗೆ ₹ 5,000 ದಂಡ ವಿಧಿಸಿದ್ದಾರೆ.
ಘಟನೆಯು ಮಾರ್ಚ್ 7 ರಂದು ನಡೆದರೂ, ಭಾನುವಾರ ಬಾಲಕರ ಕುಟುಂಬ ಸದಸ್ಯರು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಎಸ್‌ಪಿ) ದೂರು ಸಲ್ಲಿಸಿ, ‘ಮಕ್ಕಳ ಹಕ್ಕುಗಳ ರಕ್ಷಣೆ’ ರಾಜ್ಯ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕುಟುಂಬಿಕರು ಸಲ್ಲಿಸಿದ ದೂರಿನ ಪ್ರಕಾರ, ಭಾಸೌರ್ ಗ್ರಾಮದ ಹುಡುಗರು ಬನ್ಭೋರಿ ಗ್ರಾಮಕ್ಕೆ ತೆರಳಿ, ಹೊಲವೊಂದರಲ್ಲಿರುವ ಸಮಾಧಿಯಿಂದ 300 ರೂ.ಗಳನ್ನು ಕದ್ದಿದ್ದಾರೆ. ಗ್ರಾಮದ ನಿವಾಸಿಗಳು ಅವರನ್ನು ಹಿಡಿದು ಭಾಸೌರ್‌ನ ಸರ್ಪಂಚ್ ಮತ್ತು ಪಂಚಾಯತ್ ಸದಸ್ಯರನ್ನು ಕರೆದು ಹುಡುಗರನ್ನು ಹಸ್ತಾಂತರಿಸಿದ್ದಾರೆ. ಗ್ರಾಮದ ಸರ್ಪಂಚ್ ಮತ್ತು ಇತರರು ಬಾಲಕರ ಕೈಗಳನ್ನು ಬೆನ್ನ ಹಿಂದೆ ಕಟ್ಟಿ, ಅವರನ್ನು ತಮ್ಮ ಬೈಕ್‌ಗಳ ಮುಂದಿನಿಂದ ನಡೆಯುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ಬಸವಕಲ್ಯಾಣದಿಂದ ಬಳ್ಳಾರಿವರೆಗೆ ಸಾಗುತ್ತಿರುವ 400 ಕಿ.ಮೀ ರೈತ ಪಾದಯಾತ್ರೆ
ಬಾಲಕರು ದಲಿತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಬಾಲಕನೊಬ್ಬನ ತಂದೆ ಗುರ್ಮೀತ್ ಸಿಂಗ್ ಹೇಳುವಂತೆ, “ಅವರು ಹಲ್ಲೆ ನಡೆಸಿರುವ ಕಾರಣ ಬಾಲಕನೊಬ್ಬನ ಮಣಿಕಟ್ಟಿನ ಮೇಲೆ ಮುರಿತ ಉಂಟಾಗಿದೆ. ಈ ಬಗ್ಗೆ ನಾನು ಪೊಲೀಸ್ ಮತ್ತು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇನೆ. ದುಷ್ಕರ್ಮಿಗಳಿಗೆ ಶಿಕ್ಷೆಯಾಗುವ ಮೂಲಕ ನಮಗೆ ನ್ಯಾಯ ಸಿಗಬೇಕು” ಎಂದು ಹೇಳಿದ್ದಾರೆ.
Shocking visuals from a village in the Sangrur district of Punjab, wherein, four kids were beaten and paraded while their hand had been tied by a rope. Reason: The kids had, reportedly, stolen around 300 bucks from a religious place. @CMOPb @PunjabPoliceInd @UNHumanRights pic.twitter.com/c7ZMaJ8Wmb
— karamprakash (@karamprakash6) March 14, 2021
ಕಳೆದ ಕೆಲವು ತಿಂಗಳುಗಳಿಂದ ಬಾಲಕರು ಕಳ್ಳತನದಲ್ಲಿ ತೊಡಗಿದ್ದರು, ಇದಕ್ಕಾಗಿ ಪಂಚಾಯತ್ ಅವರಿಗೆ ಪಾಠ ಕಲಿಸಲು ಬಯಸಿತ್ತು ಎಂದು ಆರೋಪಿ ಸರ್ಪಂಚ್ ಗುರ್ನಮ್ ಸಿಂಗ್ ಹೇಳಿದ್ದಾನೆ. “ನಾವು ಬನ್ಭೋರಿ ಗ್ರಾಮವನ್ನು ತಲುಪಿದಾಗಲೇ, ಅವರ ಕೈಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ನಾವು ಅವರನ್ನು ನಡೆಯಲು ಕೇಳಿದೆವು, ಈ ಮೂಲಕ ಅವರಿಗೆ ಪಾಠ ಕಲಿಸಲು ಶಿಕ್ಷೆ ನೀಡಿದೆವು. ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ” ಎಂದು ಸರ್ಪಂಚ್ ಹೇಳಿದ್ದಾನೆ.
ಸರ್ಪಂಚ್ ಗುರ್ನಮ್ ಸಿಂಗ್ ಸೇರಿದಂತೆ ನಾಲ್ವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಧುರಿ ಸದರ್ ಪೊಲೀಸ್ ಠಾಣೆ ಉಸ್ತುವಾರಿ ದೀಪಿಂದರ್ಪಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ‘ಭವಿಷ್ಯದಲ್ಲಿ ಮೋದಿ ಕೂಡಾ ರಾಮನ ಅವತಾರ’- ಉತ್ತಾರಾಖಂಡ ಸಿಎಂ



ಈ ಅಮಾನುಶ ಕೃತ್ಯ ಎಸಗಿರುವ ಎಲ್ಲರಿಗೂ ಶಿಕ್ಷೆ ಆಗಬೇಕು.