ಅಸ್ಸಾಂನ ಹೊಟೇಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆಯ ಮೇಲೆ ಸಂಪೂರ್ಣ ನಿಷೇಧ ಹೇರಿದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಗುರುವಾರ ವಿರೊಧಿಸಿದ್ದು, ಇದು ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಆಹಾರ ಸೇವನೆಯ ವಿರುದ್ಧ ನಿಷೇಧ ಹೇರಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಗೋಮಾಂಸ ಸೇವನೆ
“ಬಿಜೆಪಿ ಸರ್ಕಾರ ನಿರ್ಧಾರವು ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ. ಸರ್ಕಾರವು ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರೆಸಿದರೆ ರಾಷ್ಟ್ರವು ಸರ್ವಾಧಿಕಾರದತ್ತ ಸಾಗುತ್ತದೆ. ವಿಭಿನ್ನ ಸಂಸ್ಕೃತಿ ಮತ್ತು ಧರ್ಮಗಳನ್ನು ಅನುಸರಿಸುವ ಜನರು ನಮ್ಮಲ್ಲಿರುವುದು ದೇಶದ ಸೌಂದರ್ಯ. ಈ ರೀತಿಯ ನಿರ್ಧಾರಗಳು ಸಂವಿಧಾನಕ್ಕೆ ವಿರುದ್ಧವಾಗಿವೆ” ಎಂದು ಸಂಸದೆ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯಾದ್ಯಂತ ಯಾವುದೇ ರೆಸ್ಟೋರೆಂಟ್, ಹೋಟೆಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವಿಸುವುದನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದ್ದಾರೆ. 2021 ರಲ್ಲಿ ಅಂಗೀಕರಿಸಿದ ಅಸ್ಸಾಂ ಗೋವು ಸಂರಕ್ಷಣಾ ಕಾಯ್ದೆಯು ಜಾನುವಾರುಗಳ ಹತ್ಯೆಯನ್ನು ಖಾತ್ರಿಪಡಿಸುವಲ್ಲಿ ಸರ್ಕಾರ ಸಾಕಷ್ಟು ಯಶಸ್ವಿಯಾಗಿದೆ. ಈಗ ನಾವು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆಯನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸಿಎಂ ಹೇಳಿದ್ದರು.
“ನಾವು ಮೂರು ವರ್ಷಗಳ ಹಿಂದೆ ಗೋಹತ್ಯೆ ನಿಷೇಧದ ಕಾನೂನನ್ನು ಜಾರಿಗೆ ತಂದಿದ್ದೇವೆ ಮತ್ತು ಅದು ಸಾಕಷ್ಟು ಯಶಸ್ವಿಯಾಗಿದೆ. ಆದ್ದರಿಂದ ಈಗ, ಅಸ್ಸಾಂನಲ್ಲಿ, ನಾವು ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್‌ನಲ್ಲಿ ಹಾಗೂ ಸಾರ್ವಜನಿಕ ಸಮಾರಂಭ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಲು ನಿರ್ಧರಿಸಿದ್ದೇವೆ” ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. ಗೋಮಾಂಸ ಸೇವನೆ
ದೇವಸ್ಥಾನಗಳ ಬಳಿ ಗೋಮಾಂಸ ಸೇವನೆಯನ್ನು ಮಾತ್ರ ನಿರ್ಬಂಧಿಸುವುದು ಹಿಂದಿನ ನಿರ್ಧಾರವಾಗಿತ್ತು, ಆದರೆ ಈಗ ಸರ್ಕಾರ ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದೆ ಎಂದು ಸಿಎಂ ಹೇಳಿದ್ದಾರೆ.
“ಈ ಹಿಂದೆ ದೇವಸ್ಥಾನಗಳ ಬಳಿ ಗೋಮಾಂಸ ತಿನ್ನುವುದನ್ನು ನಿಲ್ಲಿಸುವುದು ನಮ್ಮ ನಿರ್ಧಾರವಾಗಿತ್ತು. ಆದರೆ ಈಗ ನಾವು ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ್ದೇವೆ. ಆದ್ದರಿಂದ, ಯಾವುದೇ ಸಮುದಾಯಿಕ ಸ್ಥಳ, ಸಾರ್ವಜನಿಕ ಸ್ಥಳ, ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ತಿನ್ನಲು ನಿಷೇಧ ಮಾಡಲಿದ್ದೇವೆ” ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ‘ಜನಕಲ್ಯಾಣ ಸಮಾವೇಶ’ಕ್ಕೆ ಹರಿದುಬಂದ ಜನಸಾಗರ; ದೇವೇಗೌಡರ ತವರಿನಲ್ಲಿ ‘ಕೈ’ ನಾಯಕರ ಶಕ್ತಿ ಪ್ರದರ್ಶನ
ಕಾಂಗ್ರೆಸ್ ‘ಜನಕಲ್ಯಾಣ ಸಮಾವೇಶ’ಕ್ಕೆ ಹರಿದುಬಂದ ಜನಸಾಗರ; ದೇವೇಗೌಡರ ತವರಿನಲ್ಲಿ ‘ಕೈ’ ನಾಯಕರ ಶಕ್ತಿ ಪ್ರದರ್ಶನ


