ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಹಿಂದೆ, ಆಪಾದಿತ ‘ಸಿಡಿ ಪ್ರಕರಣ’ದಲ್ಲಿದ್ದ ಮಹಾನಾಯಕನ ತಂಡದ ಕೈವಾಡವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬಾರದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. “ಸಿಡಿ ಪ್ರಕರಣ ಮತ್ತು ಸಂತೋಷ್ ಸಾವಿನ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ತಾನು ಏಪ್ರಿಲ್ 18 ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ವಾಸ್ತವ ಸಂಗತಿಗಳನ್ನು ಬಹಿರಂಗಪಡಿಸುವುದಾಗಿ ಅವರು ಘೋಷಿಸಿದ್ದಾರೆ. ಗುರುವಾರ ಬೆಳಗಾವಿ ತಾಲೂಕಿನ ಬಡಾಸ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಅವರ ಸಮಾಧಿ ಸ್ಥಳಕ್ಕೆ ತೆರಳಿದ ಜಾರಕಿಹೊಳಿ, ಅವರಿಗೆ ಗೌರವ ಸಲ್ಲಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಂತೋಷ್ ಅವರು ಕಾಂಗ್ರೆಸ್‌ನಲ್ಲಿದ್ದಾಗ ಅವರೊಂದಿಗೆ ತಾನು ಒಳ್ಳೆಯ ಸಂಬಂಧ ಹೊಂದಿದ್ದೆ. ನನ್ನೊಂದಿಗೆ ಅವರು ಬಿಜೆಪಿ ಸೇರಿದ್ದಾರೆ. ಅವರ ಪತ್ನಿ ಜಯಶ್ರೀ ಮತ್ತು ಅವರ ಮಗನಿಗೆ ನಾವು ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುತ್ತೇವೆ. ಜೊತೆಗೆ ಸರ್ಕಾರದಿಂದ ಸಹಾಯ ಪಡೆಯಲು ಪ್ರಯತ್ನಿಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್‌ನಿಂದ ಒತ್ತಡವಿಲ್ಲ: ಸಿಎಂ ಬೊಮ್ಮಾಯಿ
“ಈಶ್ವರಪ್ಪ ಮತ್ತು ನಾನು ಒಂದೇ ತಂಡದ ಷಡ್ಯಂತ್ರಕ್ಕೆ ಬಲಿಯಾಗಿದ್ದೇವೆ. ಇದನ್ನು ಬಿಜೆಪಿ ಹೈಕಮಾಂಡ್‌ನ ಅನುಮತಿ ಪಡೆದ ನಂತರ ಸೋಮವಾರ ತಿಳಿಸುತ್ತೇನೆ. ಈಶ್ವರಪ್ಪ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರ ತಪ್ಪು ಸಾಬೀತಾದರೆ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಲಿ. ನಾನು ರಾಜೀನಾಮೆ ನೀಡಿ ನೋವನ್ನು ಅನುಭವಿಸಿದ್ದೇನೆ, ಈಶ್ವರಪ್ಪನವರಿಗೆ ಅದೇ ಆಗಬಾರದು” ಎಂದಿದ್ದಾರೆ.
“ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಿನಿಂದಲೂ ನನಗೆ ಹಲವು ಸಂಗತಿಗಳು ತಿಳಿದಿವೆ. ಸಂತೋಷ್ ತನ್ನ ಜೀವನವನ್ನು ಕೊನೆಗೊಳಿಸಬಾರದಿತ್ತು. ಅವರ ಸಾವನ್ನು ರಾಜಕೀಯಕ್ಕೆ ಬಳಸಿಕೊಂಡವರಿಗೆ ಎಷ್ಟೋ ಸತ್ಯಗಳು ಗೊತ್ತಿಲ್ಲ. ಹಿಂಡಲಗಾ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳಕರ, ನಾನೇ ಶೀಘ್ರದಲ್ಲೇ ಸಚಿವನಾಗುತ್ತೇನೆ, ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಸಂತೋಷ್‌ಗೆ ಹೇಳಿದ್ದರು” ಎಂದು ಜಾರಕಿಹೊಳಿ ಹೇಳಿದ್ದಾರೆ.
ನನ್ನ ಮೇಲೆ ಆರೋಪ ಮಾಡಿದ್ದ ಸಿಡಿ ಪ್ರಕರಣ ಮತ್ತು ಸಂತೋಷ್ ಸಾವಿನ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾರಕಿಹೊಳಿ ಅವರು ಬೆಳಗಾವಿ ತಾಲೂಕಿನ ಬಡಾಸ್ ಗ್ರಾಮದಲ್ಲಿರುವ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, “ಗುತ್ತಿಗೆದಾರರು ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು ಮತ್ತು ನಂತರ ಅನುಮೋದನೆಗಳನ್ನು ನೀಡುವುದು ಸಾಮಾನ್ಯ ಅಭ್ಯಾಸವಾಗಿತ್ತು. ಅವರ ಸಾವಿನ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿಯಬೇಕಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ: ಸಿದ್ದರಾಮಯ್ಯ, ಡಿ.ಕೆ.ಶಿ, ಸುರ್ಜೇವಾಲರನ್ನು ವಶಕ್ಕೆ ಪಡೆದ ಪೊಲೀಸರು


