ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಮೂವರು ಬಿಜೆಪಿ ಶಾಸಕರನ್ನು ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಸ್ಪೀಕರ್ ಸೋಮವಾರ ಬಜೆಟ್ ಅಧಿವೇಶನದಿಂದ ಅಮಾನತುಗೊಳಿಸಿದ್ದಾರೆ. ಇದೇ ವೇಳೆ ತಾವು ಮತ್ತು ಇತರ ಕೆಲವು ಪಕ್ಷದ ಶಾಸಕರು ಮಂಡಿಸಿದ ನಿಲುವಳಿ ಸೂಚನೆಯ ಮೇಲಿನ ಚರ್ಚೆಗೆ ಸ್ಪೀಕರ್ ನಿರಾಕರಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ್ದಾರೆ.
ಸುವೇಂದು ಅಧಿಕಾರಿ ಹೊರತುಪಡಿಸಿ ಬಿಜೆಪಿ ಅಗ್ನಿಮಿತ್ರ ಪಾಲ್, ಬಂಕಿಮ್ ಘೋಷ್ ಮತ್ತು ಬಿಸ್ವನಾಥ್ ಕರಕ್ ಅವರನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭೆಯ ಈ ಅಧಿವೇಶನದ ಅಂತ್ಯದವರೆಗೆ ಅಥವಾ 30 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಿಲುವಳಿ ಸೂಚನೆಯ ಕುರಿತು ಚರ್ಚೆ ನಡೆಸಲು ಸ್ಪೀಕರ್ ನಿರಾಕರಿಸಿದ ಕಾರಣಕ್ಕೆ ಸುವೇಂಧು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದು, ವ್ಯವಹಾರ ಪತ್ರಗಳನ್ನು ಹರಿದು ಎಸೆದಿದ್ದಾರೆ. ಅದರ ನಂತರ ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸರಸ್ವತಿ ಪೂಜೆಯನ್ನು ಆಯೋಜಿಸುವುದಕ್ಕೆ ರಾಜ್ಯದ ಕೆಲವು ಸ್ಥಳಗಳಲ್ಲಿ ಬೆದರಿಕೆ ಇದೆ ಎಂದು ಆರೋಪಿಸಿ ಬಿಜೆಪಿ ಈ ನಿಲುವಳಿ ಸೂಚನೆಯನ್ನು ಮಂಡಿಸಿತ್ತು.
ಘಟನೆ ನಂತರ ವಿಧಾನಸಭೆಯ ಹೊರಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ಬಿಜೆಪಿ ಶಾಸಕ ಅತ್ನಿಮಿತ್ರ ಪಾಲ್, ಕಲ್ಕತ್ತಾ ಹೈಕೋರ್ಟ್ ಆದೇಶದಂತೆ ಕೋಲ್ಕತ್ತಾದ ಕಾನೂನು ಕಾಲೇಜು ಸೇರಿದಂತೆ ರಾಜ್ಯದ ಕೆಲವು ಸ್ಥಳಗಳಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಸರಸ್ವತಿ ಪೂಜೆಯನ್ನು ನಡೆಸಬೇಕಾಯಿತು ಎಂದು ಹೇಳಿದ್ದಾರೆ.
ಸ್ಪೀಕರ್, ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ, ಒಬ್ಬ ಬಿಜೆಪಿ ಶಾಸಕರಿಗೆ ಪ್ರಸ್ತಾವನೆಯನ್ನು ಓದಲು ಅವಕಾಶ ನೀಡಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ಅವರು ಸದನದಲ್ಲಿ ಪ್ರಸ್ತಾವನೆಯನ್ನು ಓದಿದ ನಂತರ, ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಾ ಮತ್ತು ಫಲಕಗಳನ್ನು ಹಿಡಿದು ಪ್ರತಿಭಟಿಸಲು ಪ್ರಾರಂಭಿಸಿದರು. ಚುನಾವಣಾ ಲಾಭಕ್ಕಾಗಿ ಆಡಳಿತ ಟಿಎಂಸಿಯ ತುಷ್ಟೀಕರಣ ಎಂದು ಈ ವೇಳೆ ಆರೋಪಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖ್ಯ ಸಚೇತಕ ನಿರ್ಮಲ್ ಘೋಷ್ ಅವರು ಬಿಜೆಪಿ ಶಾಸಕರ ಪ್ರತಿಭಟನಾ ಕೃತ್ಯಗಳು ಶಾಸಕಾಂಗ ಸಂಸ್ಕೃತಿಯ ಹೊರಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂಓದಿ: ಮುಖ್ಯಮಂತ್ರಿ ನೇಮಿಸುವಲ್ಲಿ ವಿಳಂಬ; ದೆಹಲಿ ಆಳುವ ಮುಖ ಬಿಜೆಪಿಯಲ್ಲಿ ಇಲ್ಲ ಎಎಪಿ.
ಮುಖ್ಯಮಂತ್ರಿ ನೇಮಿಸುವಲ್ಲಿ ವಿಳಂಬ; ದೆಹಲಿ ಆಳುವ ಮುಖ ಬಿಜೆಪಿಯಲ್ಲಿ ಇಲ್ಲ ಎಎಪಿ


