ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಬಂಗಾಳದ ಜನರು ಎಷ್ಟೊಂದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ ಎಂದರೆ ಬಿಜೆಪಿ ಈಗಾಗಲೇ ಶತಕ ಪೂರ್ಣಗೊಳಿಸಿದೆ ಮತ್ತು ಟಿಎಂಸಿ ಅಳಿಸಿಹೋಗುವ ಹಂತದಲ್ಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಮೋದಿ, “ಬಂಗಾಳದ ಜನರು ನಂದಿಗ್ರಾಮದಲ್ಲಿ ದೀದಿಯನ್ನು ಕ್ಲೀನ್ ಬೌಲ್ ಮಾಡಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
“ಬಂಗಾಳದ ಜನರು ಎಷ್ಟೊಂದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ ಎಂದರೆ, ವಿಧಾನಸಭಾ ಚುನಾವಣೆಯ ಮೊದಲ 4 ಹಂತಗಳಲ್ಲೇ ಬಿಜೆಪಿಯು ಶತಕವನ್ನು ಪೂರೈಸಿದೆ. ಅರ್ಧ ಚುನಾವಣೆಯಲ್ಲೇ ಟಿಎಂಸಿಯನ್ನು ಅಳಿಸಿಹಾಕಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಫೇಲ್ ಹಗರಣ ಕುರಿತು PIL: ಮತ್ತೆ ವಿಚಾರಣೆಗೆ ಮುಂದಾದ ಸುಪ್ರೀಂ
“ಬಂಗಾಳದ ಜನರು ನಂದಿಗ್ರಾಮದಲ್ಲಿ ದೀದಿಯನ್ನು ಕ್ಲೀನ್ ಬೌಲ್ ಮಾಡಿದ್ದಾರೆ. ಜೊತೆಗೆ ಅವರ ಇಡೀ ತಂಡವನ್ನು ಮೈದಾನದಿಂದ ಹೊರಹೋಗುವಂತೆ ಕೇಳಿಕೊಂಡಿದ್ದಾರೆ” ಎಂದು ಅವರು ಬರ್ಧಾಮ್ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರ “ಮಾತೆ, ಮಾತೃಭೂಮಿ, ಮನುಷ್ಯ” ಘೋಷಣೆಯನ್ನು ಅಪಹಾಸ್ಯ ಮಾಡಿದ ಪ್ರಧಾನಿ, ‘ತಾಯಿಯ ಮೇಲೆ ದೌರ್ಜನ್ಯ, ಮಾತೃಭೂಮಿಯನ್ನು ಲೂಟಿ ಮತ್ತು ಮನುಷ್ಯನ ರಕ್ತಪಾತ’ ಮಾಡುವುದು ಈ ಘೋಷಣೆಯ ವಾಸ್ತವಾಂಶವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಜನರನ್ನು ಪ್ರಚೋದಿಸಿದ್ದಾರೆಂದು ಅವರು ಆರೋಪಿಸಿದ್ದು, “ನಿಮ್ಮ (ಬ್ಯಾನರ್ಜಿಯ) ನೀತಿಗಳು ಅಸಂಖ್ಯಾತ ತಾಯಂದಿರ ಮಕ್ಕಳ ಜೀವನವನ್ನು ಕಸಿದುಕೊಂಡಿವೆ” ಎಂದು ಮೋದಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಜಾತಿ ಆಧಾರಿತ ಹಿಂಸಾಚಾರ ಹೆಚ್ಚಾಗುತ್ತಿದೆ ಎಂದ ಪತ್ರಕರ್ತನ ಮೇಲೆ ಸೈಬರ್ ಭಯೋತ್ಪಾದನೆ FIR!



Modi is a great Joker
Being a PM of largest nation his behaviors are childish.