ಒತ್ತಡ ಹೇರಿದರೆ ಮುಂದಿನ 10-15 ವರ್ಷಗಳಲ್ಲಿ ಬಂಗಾಳಿ ಮುಸ್ಲಿಮರನ್ನು ರಾಜ್ಯದಿಂದ ಓಡಿಸಬಹುದು, ಅವರನ್ನು ಅಸ್ಸಾಂ ಬಿಟ್ಟು ಹೋಗುವಂತೆ ಒತ್ತಾಯಿಸಬೇಕು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದ್ವೇಷ ಪೂರಿತ ಹೇಳಿಕೆ ನೀಡಿದ್ದಾರೆ.
ವರದಿಗಾರರೊಂದಿಗೆ ಶನಿವಾರ ಮಾತನಾಡಿದ ಶರ್ಮಾ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ದ್ವೇಷ ಪೂರಿತ ಹೇಳಿಕೆ ನೀಡಿದ್ದಾರೆ. ಸಮುದಾಯವೊಂದರ ವಿರುದ್ಧ ‘ಮಿಯಾಸ್’ ಎಂಬ ಅವಹೇಳನಕಾರಿ ಪದ ಬಳಸಿದ್ದಾರೆ. “ಬಂಗಾಳಿ ಮಾತನಾಡುವ ಮುಸ್ಲಿಮರು ಕೆಳ ಅಸ್ಸಾಂನಿಂದ ವಾಪಸ್ ಕಳುಹಿಸಲು ಸಾಧ್ಯವಿಲ್ಲ, ಅವರು ರಾಜ್ಯದ ಮೇಲಿನ ಜಿಲ್ಲೆಗಳ ಕಡೆಗೆ ಹೋಗದಂತೆ ಅವರ ಮೇಲೆ ಒತ್ತಡ ಹೇರಬೇಕು” ಎಂದು ಅವರು ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಂಗಾಳಿ ಮುಸ್ಲಿಮರ ಮೇಲೆ ಸಾಕಷ್ಟು ಒತ್ತಡ ಹೇರಿದರೆ, ಅವರನ್ನು 10-15 ವರ್ಷಗಳಲ್ಲಿ ರಾಜ್ಯದಿಂದ ಓಡಿಸಬಹುದು ಎಂದು ಅವರು ಹೇಳಿದರು.
“ಕೆಳ ಅಸ್ಸಾಂ ಅನ್ನು ಅವರಿಂದ ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಅವರನ್ನು ಒತ್ತಡದಲ್ಲಿ ಇಡಬೇಕು. ತೊಂದರೆಗಳನ್ನು ಸೃಷ್ಟಿಸಬೇಕು, ಇದರಿಂದ ಇಂದು ಅಲ್ಲದಿದ್ದರೆ ಮುಂದಿನ 10-15 ವರ್ಷಗಳ ನಂತರ ಅವರು ಹೊರಹೋಗುವಂತೆ ಒತ್ತಾಯಿಸಲಾಗುತ್ತದೆ” ಎಂದು ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಹೆಸರುವಾಸಿಯಾದ ಬಿಜೆಪಿ ನಾಯಕ ಹೇಳಿದರು.
ಬಂಗಾಳಿ ಮಾತನಾಡುವ ಮುಸ್ಲಿಮರು ಒಗ್ಗಟ್ಟಿನಿಂದ ಮತ ಚಲಾಯಿಸುತ್ತಾರೆ. ಇದರಿಂದ ಅವರು ‘ರಾಜಕೀಯವಾಗಿ ಮುಂದುವರಿಯುತ್ತಿದ್ದಾರೆ, ಆದರೆ ನಮ್ಮ ಜನರ ಮತಗಳು ಚದುರಿಹೋಗಿವೆ ಎಂದು ಖಚಿತಪಡಿಸಿದೆ.
“ಮಿಯಾಗಳು ಒಟ್ಟಾಗಿ ಮತ ಚಲಾಯಿಸುತ್ತಾರೆ. ಅದಕ್ಕಾಗಿಯೇ ಅವರು ರಾಜಕೀಯವಾಗಿ ಮುಂದುವರಿಯುತ್ತಿದ್ದಾರೆ. ನಮ್ಮ ಮತಗಳು ಚದುರಿಹೋಗಿವೆ. ಅದಕ್ಕಾಗಿಯೇ ನಾನು ನಮ್ಮ ಜನರಿಗೆ ಒಟ್ಟಿಗೆ ಮತ ಚಲಾಯಿಸಲು ಹೇಳುತ್ತೇನೆ, ಅದು ಯಾವುದೇ ಪಕ್ಷ ಅಥವಾ ವ್ಯಕ್ತಿಯಾಗಿರಲಿ” ಎಂದರು.
‘ಮಿಯಾ’ ಮೂಲತಃ ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ಅವಹೇಳನಕ್ಕೆ ಬಳಸಲಾಗುವ ಪದವಾಗಿದೆ. ಬಂಗಾಳಿ ಮಾತನಾಡದ ಜನರು ಸಾಮಾನ್ಯವಾಗಿ ಅವರನ್ನು ಬಾಂಗ್ಲಾದೇಶಿ ವಲಸಿಗರೆಂದು ಗುರುತಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಹಿಂದುತ್ವವಾದಿಗಳು ಈ ಪದವನ್ನು ಪ್ರತಿಭಟನೆಯ ಸೂಚಕವಾಗಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.
ಅಸ್ಸಾಂನಲ್ಲಿನ ಬಿಜೆಪಿ ಸರ್ಕಾರವು ಅತಿಕ್ರಮಣವನ್ನು ತೆರವುಗೊಳಿಸುವ ಹೆಸರಿನಲ್ಲಿ ದಶಕಗಳಿಂದ ವಾಸಿಸುತ್ತಿದ್ದ ಕುಟುಂಬಗಳನ್ನು ಅಲ್ಲಿಂದ ಹೊರಹಾಕಲು ಬೃಹತ್ ಅಭಿಯಾನ ನಡೆಸುತ್ತಿದೆ. ಹೊರಹಾಕಲ್ಪಟ್ಟವರಲ್ಲಿ ಸಿಂಹಪಾಲು ಜನರು ಬಂಗಾಳಿ ಮಾತನಾಡುವ ಮುಸ್ಲಿಮರಾಗಿದ್ದರು ಎಂಬುದನ್ನು ಗಮನಿಸಬೇಕು.


