ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ ‘ಬೆಂಗಳೂರು ಚಲೋ’ ಬುಧವಾರ (ನವೆಂಬರ್ 26) ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ.
ಬೆಳಗಿನಿಂದಲೂ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮ್ಮದ್, ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಭಟನಾ ಸ್ಥಳಕ್ಕೆ ಬರುವ ಭರವಸೆ ನೀಡಿದ್ದರು, ಮಧ್ಯಾಹ್ನ ಎರಡು ಗಂಟೆಯಿಂದಲೂ ಸಮಯಾವಕಾಶ ಕೇಳುತ್ತಿದ್ದ ಮೂವರು ಸಚಿವರು ಸಂಜೆ 5 ಗಂಟೆಯಾದರೂ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರು ಅಹವಾಲು ಕೇಳಲಿಲ್ಲ, ಹೀಗಾಗಿ ಪ್ರತಿಭಟನಾಕಾರರು ಕೊನೆಗೆ ರಸ್ತೆಗಿಳಿರುದು ಹೋರಾಟ ಮುಂದುವರಿಸಿದ್ದಾರೆ.
ಮೂರು ಗಂಟೆಗೆ ಬರುತ್ತೇನೆಂದು ಐದು ಗಂಟೆಯಾದರೂ ಧರಣಿ ಸ್ಥಳಕ್ಕೆ ಬಾರದ ಸಂಬಂಧಪಟ್ಟ ಸಚಿವರ ನಡೆಯಿಂದಾಗಿ ತಾಳ್ಮೆ ಕಳೆದುಕೊಂಡ ಕಾರ್ಮಿಕರು ಮತ್ತು ರೈತ ಮಹಿಳೆಯರು ವಿಧಾನಸೌಧ ಮುತ್ತಿಗೆ ಯತ್ನಿಸಿದರು. ರಸ್ತೆಗಿಳಿದ ಪ್ರತಿಭಟಕಾರರನ್ನು ತಡೆದ ಪೊಲೀಸರು, ಎರಡು ಹಂತದಲ್ಲಿ ತಡೆಗೋಡೆ ನಿರ್ಮಿಸಿ, ಪೊಲೀಸ್ ಬ್ಯಾರಿಕೇಡ್ ಹಾಕಿ, ಕಬ್ಬಿಣದ ಗೇಟಿನಿಂದ ರೈತರನ್ನೂ ತಡೆದರು.


