ಹಣ ಕಾಸಿನ ವಿಚಾರವಾಗಿ ದುಷ್ಕರ್ಮಿಯೊಬ್ಬ ತನ್ನ ತಾಯಿಯನ್ನೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೆಂಬರ್ 8ರಂದು ನಡೆದಿದ್ದ ಕೊಲೆಯ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಮೃತ ಮಹಿಳೆಯ ಹಿರಿಯ ಮಗ ಉಮೇಶ್ (33) ಮತ್ತು ಆತನ ಸಂಬಂಧಿ ಸುರೇಶ್(43) ಎಂಬವನ್ನು ಬಂಧಿಸಿದ್ದಾರೆ. ಮಹಿಳೆಯ ಕಿರಿಯ ಮಗನ ಸ್ನೇಹಿತ ಅವರಿಗೆ ದಿನಸಿ ಸಾಮಾನು ಕೊಡಲು ಮನೆಗೆ ತೆರಳಿದ್ದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದರು. ಬೆಂಗಳೂರು
ಮಹಿಳೆಯ ಹಿರಿಯ ಮಗ ಉಮೇಶ್ ಹಣಕಾಸಿನ ವಿಚಾರದಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ್ದು, ಮೃತ ಜಯಮ್ಮ (49) ಅವರ ತಲೆಯನ್ನು ಗೋಡೆಗೆ ಒಡೆದು, ಆಕೆಯನ್ನು ತುಳಿದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗೃಹಿಣಿಯಾಗಿದ್ದ ಜಯಮ್ಮ ಇತ್ತೀಚೆಗೆ ಬೊಮ್ಮನಹಳ್ಳಿ ಬಳಿಯ ಹೊಂಗಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನವೆಂಬರ್ 9 ರಂದು ಅವರ ಕಿರಿಯ ಮಗನ ಸ್ನೇಹಿತ ಜಯಮ್ಮ ಅವರ ಮನೆಗೆ ದಿನಸಿ ನೀಡಲು ತೆರಳಿದ್ದರು. ಈ ವೇಳೆ ಬಾಗಿಲು ತಟ್ಟಿದರೂ ಯಾರೂ ಬಾಗಿಲು ತೆಗೆದಿರಲಿಲ್ಲ. ಬಳಿಕ ಮನೆಯ ಮಾಲೀಕರಿಗೆ ಮಾಹಿತಿ ನೀಡಿ ಬದಲಿ ಕೀ ಬಳಸಿ ಬಾಗಿಲು ತೆರೆದಾಗ ಜಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ, ಪೊಲೀಸರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿರುವ ಅವರ ಕಿರಿಯ ಮಗನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಅಪರಾಧ ನಡೆದಾಗ ಅವರು ಕರ್ತವ್ಯದಲ್ಲಿದ್ದ ಕಾರಣ ಕೊಲೆಯಲ್ಲಿ ಅವರ ಕೈವಾಡ ಇರುವುದನ್ನು ತಳ್ಳಿಹಾಕಿದ್ದರು.
“ಹಣಕಾಸಿನ ವಿಚಾರದಲ್ಲಿ ಜಗಳವಾಗಿ ಜಯಮ್ಮ ಅವರು ತಮ್ಮ ಹಿರಿಯ ಮಗ ಉಮೇಶ್‌ನಿಂದ ದೂರ ಉಳಿದಿದ್ದರು ಎಂದು ನಮ್ಮ ತನಿಖೆಯಿಂದ ತಿಳಿದುಬಂದಿತ್ತು. ಹಾಗಾಗಿ ಕೆ.ಆರ್.ಮಾರುಕಟ್ಟೆಯಿಂದ ಉಮೇಶ್‌ನನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಆತನೇ ಕೊಲೆ ಮಾಡಿರುವುದು ಪತ್ತೆಯಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಯಮ್ಮ ಇತ್ತೀಚೆಗೆ ತನ್ನ ಪತಿಯ ಆಸ್ತಿಯನ್ನು ಮಾರಿ ಹಣವನ್ನು ಕೆಲವು ಜನರಿಗೆ ಸಾಲವಾಗಿ ನೀಡಿದ್ದರು. ಆದರೆ, ಅವರ ಹಿರಿಯ ಮಗ ಉಮೇಶ್ ವಾಹನ ಖರೀದಿಸಲು ಹಣ ಕೇಳುತ್ತಲೇ ಇದ್ದ. ಆದರೆ ಮದ್ಯದ ದಾಸನಾಗಿದ್ದ ಆತನಿಗೆ ಹಣ ನೀಡಲು ಅವರು ಒಪ್ಪಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ಉಮೇಶ್ ಹಣ ಕೇಳಿ ತನ್ನ ತಾಯಿಗೆ ತೊಂದರೆ ನೀಡುವುದನ್ನು ನಿಲ್ಲಿಸದಿದ್ದಾಗ, ಜಯಮ್ಮ ಆ ಮನೆಯಿಂದ ಹೊರಬಂದು ಹೊಂಗಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಉಮೇಶ್ ತನ್ನ ಸಂಬಂಧಿ ಸುರೇಶನ ಸಹಾಯದಿಂದ ಅವರ ಮನೆಯನ್ನು ಪತ್ತೆಹಚ್ಚಿ ಅಲ್ಲಿಗೆ ತೆರಳಿ ಜಗಳವಾಡಿದ್ದನು. ಈ ವೇಳೆ ಜಯಮ್ಮ ಅವರ ಕೊಲೆ ಮಾಡಲಾಗಿತ್ತು. ಈ ಕೊಲೆಗೆ ಸುರೇಶ ಸಹಕರಿಸಿದ್ದ’’ ಎಂದು ಅಧಿಕಾರಿ ತಿಳಿಸಿದ್ದಾರೆ. ಉಮೇಶ್ ಮತ್ತು ಸುರೇಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಬುಲ್ಡೋಜರ್ ಈಗ ಗ್ಯಾರೇಜ್‌ನಲ್ಲಿ ಉಳಿಯಲಿದೆ..’; ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
‘ಬುಲ್ಡೋಜರ್ ಈಗ ಗ್ಯಾರೇಜ್‌ನಲ್ಲಿ ಉಳಿಯಲಿದೆ..’; ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ


