Homeಕರ್ನಾಟಕದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಭಗವಾಧ್ವಜ ರಾಷ್ಟ್ರಧ್ವಜ ಆಗುತ್ತದೆ; ಕೆಂಪುಕೋಟೆಯಲ್ಲಿ ಅದನ್ನು ಹಾರಿಸುತ್ತೇವೆ: ಕೆ.ಎಸ್‌. ಈಶ್ವರಪ್ಪ

ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಭಗವಾಧ್ವಜ ರಾಷ್ಟ್ರಧ್ವಜ ಆಗುತ್ತದೆ; ಕೆಂಪುಕೋಟೆಯಲ್ಲಿ ಅದನ್ನು ಹಾರಿಸುತ್ತೇವೆ: ಕೆ.ಎಸ್‌. ಈಶ್ವರಪ್ಪ

- Advertisement -
- Advertisement -

ಈ ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಅವತ್ತು ಕೆಂಪು ಕೋಟೆಯ ಮೇಲೆ ಕೂಡಾ ಕೇಸರಿ ಧ್ವಜ ಹಾರಿಸುತ್ತೇವೆ. ಮುಂದೊಂದು ದಿನ ಭಗವಾಧ್ವಜವೇ ರಾಷ್ಟ್ರಧ್ವಜ ಆಗಹುದು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಬುಧವಾರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ಬೆಂಬಲಿತ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿರುವ ವಿವಾದದ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಈಶ್ವರಪ್ಪ, “ಇವತ್ತು ಇಡೀ ದೇಶದಲ್ಲಿ ತ್ರಿವರ್ಣ ಧ್ವಜ ರಾಷ್ಟ್ರಧ್ವಜ ಆಗಿದೆ. ಇದರಲ್ಲಿ ಏನೂ ಅನುಮಾನ ಇಲ್ಲ. ಅದಕ್ಕೆ ನಾವೆಲ್ಲರೂ ಕೂಡಾ ಗೌರವ ಕೊಡುತ್ತೇವೆ. ಅಲ್ಲಿ ಭಗವಾಧ್ವಜ ಹಾರಿಸಿದ್ದು ಹೌದು. ಕೇಸರಿ ಧ್ವಜ ಹಾರಿಸಬಾರದೇನು?” ಎಂದು ಕೇಳಿದ್ದಾರೆ.

ರಾಷ್ಟ್ರಧ್ವಜದ ಸ್ಥಂಭದಲ್ಲಿ ಕೇಸರಿಧ್ವಜ ಹಾರಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, “ಕೇಸರಿ ಯಾವ ಧ್ವಜ ಸ್ಥಂಭದಲ್ಲಿ ಬೇಕಾದರೂ ಹಾರಿಸಬಹುದು. ಯಾವುದೇ ಸ್ಥಳದಲ್ಲಿ ಬೇಕಾದರೂ ಕೇಸರಿ ಧ್ವಜ ಹಾರಿಸಬಹುದು. ಆದರೆ ರಾಷ್ಟ್ರಧ್ವಜವನ್ನು ತೆಗೆದು ಯಾವುದೇ ಕೇಸರಿ ಧ್ವಜ ಹಾಕಿಲ್ಲ, ಹಾಕುವುದು ಇಲ್ಲ. ಹಿಂದೂ ಮುಸಲ್ಮಾನರಲ್ಲಿ ಧ್ವೇಷ ಬೆಳೆಸುವುದಕ್ಕೋಸ್ಕರ ರಾಷ್ಟ್ರ ಧ್ವಜವನ್ನು ಬಳಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂದು ಡಿಕೆ ಶಿವಕುಮಾರ್‌ ಸುಳ್ಳು ಹೇಳಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಡಿಕೆ ಶಿವಕುಮಾರ್‌‌ಗಿಂತಲೂ ಹೆಚ್ಚು ಗೌರವ ನಮಗೆ ಇದೆ. ರಾಷ್ಟ್ರಧ್ವಜವನ್ನು ತೆಗೆದಿಲ್ಲ. ಧ್ವಜಸ್ಥಂಭಗಳಲ್ಲಿ ಕೇಸರಿ ಧ್ವಜವನ್ನು ಹಾಕಿಕೊಂಡು ಬಂದಿದ್ದಾರೆ. ಅದನ್ನು ತಿರುಗಿಸಿ ಹಿಂದೂ ಮುಸಲ್ಮಾನರ ಬಗ್ಗೆ ಗೊಂದಲ ಉಂಟು ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಕೇಸರಿ ಧ್ವಜ ಎಲ್ಲಿ ಬೇಕಾದರೂ ಹಾರಿಸಬಹುದು. ಮುಂದಿನ ದಿನದಲ್ಲಿ ಕೆಂಪುಕೋಟೆ ಮೇಲೆ ಹಾರಿಸುತ್ತೇವೆ. ನೂರಾರು ವರ್ಷಗಳ ಹಿಂದೆ ರಾಮ, ಮಾರುತಿಯ ರಥಗಳಲ್ಲಿ ಕೇಸರಿ ಧ್ವಜ ಇತ್ತು. ಆಗ ತ್ರಿವರ್ಣ ಧ್ವಜ ನಮ್ಮ ದೇಶದಲ್ಲಿ ಇತ್ತಾ? ಅದು ಈಗ ರಾಷ್ಟ್ರಧ್ವಜ ಆಗಿದೆ. ಆದರೆ ಈಗ ಈ ದೇಶದಲ್ಲಿ ಅನ್ನ ತಿಂದ ಪ್ರತಿಯೊಬ್ಬನೂ ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು, ಇದರ ಬಗ್ಗೆ ಪ್ರಶ್ನೆಯೆ ಇಲ್ಲ” ಎಂದು ಅವರು ತಿಳಿಸಿದ್ದಾರೆ.

“ಇವತ್ತು ಹಿಂದೂ ವಿಚಾರದ ಬಗ್ಗೆ, ಹಿಂದುತ್ವದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ಒಂದು ಕಾಲದಲ್ಲಿ ಅಯೋಧ್ಯೆ ರಾಮಮಂದಿರ ಕಟ್ಟುವ ಬಗ್ಗೆ ಕೇಳಿ ನಗುತ್ತಿದ್ದರು. ಈಗ ಕಟ್ಟಿದ್ದೇವೆ ಅಲ್ಲವೇ? ಹಾಗೆಯೆ ಯಾವುದೋ ಕಾದಲ್ಲಿ, ನೂರು, ಇನ್ನೂರು ಅಥವಾ ಐನೂರು ವರ್ಷಗಳಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜ ಆಗಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಎಲ್ಲಿ ಬೇಕಾದರೂ ಹಾರಾಡಬಹುದು. ಆದರೆ ಈಗ ಸಂವಿಧಾನ ಬದ್ದವಾಗಿ ತ್ರಿವರ್ಣ ಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಯಾರೇ ತಪ್ಪಿದರೂ ಅವ ರಾಷ್ಟ್ರದ್ರೋಹಿಯಾಗುತ್ತಾನೆ” ಎಂದು ಈಶ್ವರಪ್ಪ ಹೇಳಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಈಶ್ವರಪ್ಪನವರು ವರಿಷ್ಠರನ್ನು ತೃಷ್ಟಿಕರಿಸಿ ಮಂತ್ರಿಪದವಿ ಉಳಿಸಿಕೊಳ್ಳುವುದಕೋಸ್ಕರ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ

  2. ಹುಚ್ಚು ಈಶ್ವರಪ್ಪ! ಹುಂಭುತನ ಏನೇನು ಮಾತಾನಾಡುತ್ತಾನೆ ಎಂಬುದು ಅವನಿಗೆ ಗೋತ್ತಿರುವದಿಲ್ಲವಂತೆ ಈಗಾಗೀ ಆತ ಬಿ.ಜೆ.ಪಿಯ ಹಳೆಯ ಕಾರ್ಯಕರ್ತರಾದರೂ ಆತನನ್ನು ಅವರು ಮುಖ್ಯಮಂತ್ರಿ ಮಾಡಲೇ ಇಲ್ಲ !

  3. ಅಭಿವೃದ್ಧಿ ಪರ ಕೆಲಸ ಮಾಡ್ರಿ ಜಾತಿ ಮತ ಧರ್ಮ ಕೇಸರಿ ಹಸಿರು ಕಪ್ಪು ನೀಲಿ ಅಂತಾ ರಾಜಕೀಯ ಮಾಡಿ ದೇಶದ ಸ್ವಾಸ್ತ್ಯ ಹಾಳು ಮಾಡಬೇಡಿ
    ಇದು ನಿಮ್ಮ ತಪ್ಪಲ್ಲಜಾತಿ ಧರ್ಮದ ಅಮಲಿನಲ್ಲಿ ನಿಮ್ಮಂತ ವರಿಗೆ vote ಹಾಕ್ತಾರಲ್ಲ ಅವ್ರೆಲ್ಲಾ ಬದಲಾಗಬೇಕು

  4. ಈಶ್ವರಪ್ಪ ಅಂತಹ ಅವಿವೇಕಿ ಮತ್ತು ವಿಕೃತ ಮನಸ್ಸಿನ ರಾಜಕಾರಣಿಗೆ ನಮ್ಮ ಜನ ವೋಟು ಹಾಕಿ ಗೆಲ್ಲಿಸಿರುವುದೇ ದೊಡ್ಡ ದುರಂತ!

    ಈಶ್ವರಪ್ಪ ಅವರ ಹೇಳಿಕೆ ದೇಶ ದ್ರೋಹಿ ಹೇಳಿಕೆಯಾಗಿದ್ದು, ರಾಷ್ಟ್ರ ಭಕ್ತರು ಎಂದು ಹೇಳಿಕೊಳ್ಳುವ ಕೇಸರಿಯಾ ರಾಷ್ಟ್ರೀಯ ಸುಲಭ್ ಸೌಚಾಲಯದ ಸ್ವಯಂ ಘೋಷಿತ ಮುಠ್ಠಾಳರು ಮೌನವಾಗಿರುವುದು ಏಕೆ?

    ಹಣ ಮತ್ತು ಅಧಿಕಾರದ ಅಹಂ ಹೊದ್ದುಕೊಂಡಿರುವ ಈಶ್ವರಪ್ಪ ಅವರೇ ಕಾಲಯ ತಸ್ಮೈಯೇ ನಮಃ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...