ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಹೋರಾಟನಿರತ ರೈತರು ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ. ದೇಶದ ಉದ್ದಗಲಕ್ಕೂ ಎಲ್ಲಾ ವರ್ಗದ ಜನರು ಬಂದ್‌ಗೆ ಬೆಂಬಲ ನೀಡಿ ಅನ್ನದಾತರ ಹೋರಾಟಕ್ಕೆ ಕೈಜೋಡಿಸಿದ್ದಾರೆ.
#BharatBandh pic.twitter.com/qLjCeW6l4z
— Sitaram Yechury (@SitaramYechury) December 8, 2020
ದೆಹಲಿ ಮತ್ತು ಉತ್ತರ ಪ್ರದೇಶದ ಮೀರತ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ -24 ನ್ನು ರೈತರು ಮುತ್ತಿಗೆ ಹಾಕಿದ್ದಾರೆ. ಗಾಜಿಯಾಬಾದ್-ಗಾಜಿಪುರ್ ಗಡಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ದೊಡ್ಡಮಟ್ಟದ ಪೊಲೀಸ್ ನಿಯೋಜನೆಯ ಹೊರತಾಗಿಯೂ ಪ್ರತಿಭಟನಾಕಾರರು ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದಾರೆ.
ದೆಹಲಿ ಚಲೋ ರೈತ ಹೋರಾಟ
ಡಿಸೆಂಬರ್ 8 ಭಾರತ್ ಬಂದ್
ರೈತ ವಿರೋಧಿ ಕಾಯ್ದೆ ವಿರೋಧಿ ಸಿಂಗೋ ಬಾರ್ಡರ್ ನಲ್ಲಿ ಸಭೆ #bharthbandhdec8#standwithfarmerschallenge#FarmersProtest#ಜೈಕಿಸಾನ್ pic.twitter.com/v6uqDl9Tll— Gnana Sindhu Swamy (@Gnanasindhus) December 8, 2020
ಕಳೆದ 12 ದಿನಗಳಿಂದ ಹೋರಾಟ ನಿರತ ರೈತರಿಂದಾಗಿ ದೇಶದ ಗಮನ ಸೆಳೆದಿದ್ದ ದೆಹಲಿಯ ಸಿಂಘು ಗಡಿಗೆ ಪಂಜಾಬ್‌ನ ರೋಪಾರ್ ಜಿಲ್ಲೆಯಿಂದ 200 ಟ್ರಕ್‌ಗಳಲ್ಲಿ ರೈತರು ಬಂದು ಸೇರಿದ್ದಾರೆ. ಎಷ್ಟೇ ಪೊಲೀಸ್ ಬಲ ಬಳಸಿದರೂ ರೈತರು ಶಾಂತಿಯುತವಾಗಿ ಹೆದ್ದಾರಿ ಬಂದ್ ಮಾಡುವುದನ್ನು ತಡೆಯಲಾಗಿಲ್ಲ. ರೈತರು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಲ್ಕು ಗಂಟೆಗಳ ಕಾಲ ಹೆದ್ದಾರಿ ತಡೆದಿದ್ದಾರೆ. ಇದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಬ್ದಗೊಂಡಿದೆ.
#BharatBandh pic.twitter.com/aVhqMh6yN8
— Sitaram Yechury (@SitaramYechury) December 8, 2020

ಕರ್ನಾಟಕದಲ್ಲಿ ಇಂದು ಬೆಳಿಗ್ಗೆ ನೂರಾರು ಸಂಘಟನೆಗಳ ಕಾರ್ಯಕರ್ತರು ಟೌನ್‌ಹಾಲ್ ಬಳಿ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎತ್ತಿನಗಾಡಿ, ಟ್ರಾಕ್ಟರ್‌ಗಳಲ್ಲಿ ಬಂದ ರೈತರು ತರಕಾರಿಗಳನ್ನು ತಂದು ಪ್ರದರ್ಶನ ಮಾಡಿ ಹೋರಾಟ ನಡೆಸಿದ್ದಾರೆ. ಹಲವು ಕನ್ನಡಪರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಹ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಕೋಡಿಹಳ್ಳಿ ಚಂದ್ರಶೇಖರ್, ಡಿ.ಕೆ ಶಿವಕುಮಾರ್, ಮೀನಾಕ್ಷಿ ಸುಂದರಂ ಸೇರಿ ಇತರ ಮುಖಂಡರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಐಕ್ಯ ಹೋರಾಟ ಸಮಿತಿಯು ಬೆಳಿಗ್ಗೆಯಿಂದಲೇ ಧರಣಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದೆ. ಆನಂದ್ ರಾವ್ ವೃತ್ತದ ರಸ್ತೆಯಲ್ಲಿ ಒಂದೂ ವಾಹನಗಳು ಸಂಚರಿಸಿದೆ ಸಂಪೂರ್ಣ ಖಾಲಿಯಾಗಿದೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿಯೂ ಸಹ ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆದಿದೆ. ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಭಾರತ್ ಬಂದ್ ಆಚರಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಾಗಿದೆ.



ಇದನ್ನೂ ಓದಿ: ರೈತ ಮುಖಂಡರಿಗೆ ಕರೆ ಮಾಡಿದ ಅಮಿತ್ ಶಾ: ಇಂದು ಸಂಜೆ ಮಾತುಕತೆಗೆ ಆಹ್ವಾನ


