ಆಝಾದ್ ಸಮಾಜ ಪಕ್ಷ (ಎಎಸ್‌ಪಿ)-ಕಾನ್ಶಿ ರಾಮ್ ನಾಯಕ ಮತ್ತು ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಝಾದ್ ‘ರಾವಣ’ ಅವರು ಉತ್ತರ ಪ್ರದೇಶದ ನಗೀನಾ ಕ್ಷೇತ್ರದಲ್ಲಿ 75,000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಈ ಸುದ್ದಿ ಬರೆಯುವ ಹೊತ್ತಿಗೆ(1 ಗಂಟೆ) ಆಝಾದ್ 3,14,652 ಮತಗಳನ್ನು ಪಡೆದಿದ್ದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಓಂ ಕುಮಾರ್ 2,39, 573 ಮತಗಳನ್ನು ಗಳಿಸಿದ್ದರು. 69,477 ಮತಗಳನ್ನು ಪಡೆಯುವ ಮೂಲಕ ಸಮಾಜವಾದಿ ಪಕ್ಷದ (ಎಸ್‌ಪಿ) ಮನೋಜ್ ಕುಮಾರ್ ಮೂರನೇ ಸ್ಥಾನದಲ್ಲಿದ್ದರು ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸುರೇಂದ್ರ ಪಾಲ್ ಸಿಂಗ್ 9,154 ಮತಗಳನ್ನು ಪಡೆದಿದ್ದರು.
ಅಂಬೇಡ್ಕರ್ ವಾದಿ ಮತ್ತು ಜಾತಿ ವಿರೋಧಿ ಹೋರಾಟಗಾರ ಆಝಾದ್ ಅವರು ಇಂಡಿಯಾ ಮೈತ್ರಿಕೂಟದೊಂದಿಗೆ ಸೇರಲು ನಿರಾಕರಿಸಿದ್ದರು. ಕೇವಲ ನಾಲ್ಕು ವರ್ಷಗಳ ಹಳೆಯ ಪಕ್ಷವಾಗಿರುವ ಎಎಸ್‌ಪಿಯ ಮೊದಲ ಲೋಕಸಭೆ ಚುನಾವಣೆ ಇದಾಗಿದ್ದು, ಟೀಪಾಟ್ ಪಕ್ಷದ ಚುನಾವಣಾ ಚಿಹ್ನೆಯಾಗಿದೆ.
ಚಂದ್ರಶೇಖರ್ ಆಝಾದ್ ಅವರ ಎಎಸ್ಪಿ, ಬಿಎಸ್ಪಿಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. “ಸಾರಿ ಪಾರ್ಟಿ ದೇಖ್ ಲಿ, ಅಬ್ ಕಿ ಬಾರ್ ಕೆಟ್ಲಿ (ನಾವು ಎಲ್ಲಾ ಪಕ್ಷಗಳನ್ನು ಪರೀಕ್ಷಿಸಿದ್ದೇವೆ, ಈಗ ಟೀಪಾಟ್ ಸರದಿ)” ಎಂಬ ಘೋಷಣೆಯೊಂದಿಗೆ ಪಕ್ಷ ಚುನಾವಣೆ ಪ್ರಚಾರ ನಡೆಸಿತ್ತು.
ಇದನ್ನೂ ಓದಿ : ಲೋಕಸಭೆ ಚುನಾವಣೆ ಫಲಿತಾಂಶ 2024: ಇಂದೋರ್‌ನಲ್ಲಿ 1.8 ಲಕ್ಷ ನೋಟಾ ಚಲಾವಣೆ; ಕಾಂಗ್ರೆಸ್ ಕರೆಗೆ ಉತ್ತಮ ಪ್ರತಿಕ್ರಿಯೆ


