ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿರುವುದರಿಂದ ಕಲಬುರಗಿ ನಗರದಲ್ಲಿ ಇಂದಿನಿಂದಲೇ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸ್ಫೋಟಕ ವಸ್ತು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರ ನಡಾವಳಿಯಲ್ಲಿ ತಿಳಿಸಲಾಗಿದೆ.
ದಿನಾಂಕ 04-08-2020ರ ಮಧ್ಯಾಹ್ನ 3 ಗಂಟೆಯಿಂದ ದಿನಾಂಕ 06-08-2020ರ ಬೆಳಿಗ್ಗೆ 6 ಗಂಟೆಯವರೆಗೆ ಕಲಬುರಗಿ ನಗರದಾದ್ಯಂತ 144 ಸೆಕ್ಷನ್ ಹೇರಲಾಗಿದೆ. ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆ ಬರುವಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಭಾರತೀಯ ಪ್ರಕ್ರಿಯಾ ಸಂಹಿತೆಯ ಕಲಂ 144 ನಲ್ಲಿ ಪ್ರದತ್ತವಾದ ಅಧಿಕಾರ ಬಳಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್ ಸತೀಶ್‌ಕುಮಾರ್‌ರವರು ತಿಳಿಸಿದ್ದಾರೆ.
ಪ್ರೀತಿಯ ನರೇಂದ್ರಮೋದಿಯವರೆ, ರಾಮ ನಿಜವಾಗಿಯೂ ಈ ರೀತಿಯ ಪೂಜೆಯನ್ನು ಬಯಸುತ್ತಾರೆಯೇ? ಅಲ್ಲಿ ರಕ್ತ ಚೆಲ್ಲುತ್ತದೆ, ಅಕ್ರಮವಾಗಿ ಧಾರ್ಮಿಕ ರಚನೆ ನಾಶವಾಗಿದೆ, ಆ ಸ್ಥಳದಲ್ಲಿ ನಡೆಯುವ ಭೂಮಿ ಪೂಜೆಗೆ 1000 ಕಿ.ಮೀ ದೂರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆಯೆ? ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ವಿನಯ ಶ್ರೀನಿವಾಸರವರು ಪ್ರಶ್ನಿಸಿದ್ದಾರೆ.
Dear @narendramodi will rama really want this kind of worship, where blood was shed, a religious structure illegally destroyed , that even for bhoomi Pooja in that place, sec 144 imposed 1000 km away ? https://t.co/EPmVb0j75s
— vinaysreenivasa ವಿನಯ (@vinaysreeni) August 4, 2020
ಇದನ್ನೂ ಓದಿ: 370 ನೇ ವಿಧಿ ರದ್ಧತಿಯ ಮೊದಲ ವಾರ್ಷಿಕೋತ್ಸವಕ್ಕೆ ಮುಂಚೆಯೇ ಶ್ರೀನಗರದಲ್ಲಿ ಮತ್ತೆ ಕರ್ಫ್ಯೂ!


