Homeಮುಖಪುಟಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ...

ಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ…

ಕರ್ನಾಟಕದ ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ

- Advertisement -
- Advertisement -

ಪ್ರಭುತ್ವದ ತಪ್ಪುಗಳ ಬಗ್ಗೆ ಮಾತನಾಡುವವರನ್ನು ಅಮಾನವೀಯವಾಗಿ ದಮನಿಸುವುದು ಹಿಂದಿನಿಂದಲೂ ನಡೆದುಬಂದಿರುವ ಪದ್ದತಿ. ಆ ಪ್ರಭುತ್ವಕ್ಕೆ ಇದರಿಂದ ತಾನೆಷ್ಟು ಬೆತ್ತಲಾಗುತ್ತೇನೆ ಎಂಬ ಅರಿವು ಸಹ ಇಲ್ಲದೇ ಅದು ಕ್ರೂರವಾಗಿ ವರ್ತಿಸುತ್ತದೆ. ಮೈಸೂರಿನ ಫ್ರಿ ಕಾಶ್ಮೀರ್ ವಿವಾದ, ಕೊಪ್ಪಳದ ಸಿರಾಜ್‌ರವರ ಕವನದ ಮೇಲೆ ಕೇಸು ಮತ್ತು ಬೀದರ್‌ನ ಶಾಹಿನ್ ಅನುದಾನಿತ ಶಾಲೆಯ ಸಿಎಎ ವಿರುದ್ಧದ ನಾಟಕಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಪ್ರಭುತ್ವದ ದಮನಕ್ಕೆ ಹಿಡಿದ ಕನ್ನಡಿಗಳಾಗಿವೆ.

ಒಂದು ಪ್ಲೆಕಾರ್ಡ್, ಒಂದು ಕವನ, ಒಂದು ನಾಟಕಕ್ಕೆ ಬಲಪಂಥೀಯ ಸರ್ಕಾರ ಎಷ್ಟು ಬೆದರುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದಾಗಿದೆ. ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಅದು ಎಂತಹ ಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ.

ಬೀದರ್‌ನ ಘಟನೆ ಕೇಳಿದರಂತೂ ನಮ್ಮನ್ನು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಸಿಎಎ ವಿರುದ್ಧದ ನಾಟಕದಲ್ಲಿ 5ನೇ ತರಗತಿಯ ಮಗುವೊಬ್ಬಳು ಆಕ್ಷೆಪಾರ್ಯ ಸಂಭಾಷಣೆ ಬಳಸಿದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯ ತಾಯಿಯನ್ನು ಮತ್ತು ಆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಪೊಲೀಸರು ಒಂದು ವಾರದಿಂದ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ತಂದೆಯಿಲ್ಲದ, ಕೇವಲ ತಾಯಿಯನ್ನೇ ನೆಚ್ಚಿಕೊಂಡಿದ್ದ 11 ವರ್ಷದ ಆ ಮಗು ಈ ಪ್ರಭುತ್ವದ ಕಣ್ಣಿಗೆ ದೇಶದ್ರೋಹಿಯಾಗಿ ಕಾಣುತ್ತದೆಯೆಂದರೆ ಅದರ ಸಿದ್ಧಾಂತ ಎಷ್ಟು ಟೊಳ್ಳು ಅಲ್ಲವೇ?

ನಡೆದಿದ್ದೇನು?

ಜನವರಿ 21ರಂದು ಬೀದರ್‌ನ ಅನುದಾನಿತ ಶಾಹಿನ್ ಶಾಲೆಯಲ್ಲಿ “ಸಿಎಎ ವಿರುದ್ಧ ಮಕ್ಕಳ ನಾಟಕವೊಂದು” ನಡೆದಿದೆ. ನಾಟಕದಲ್ಲಿ “ದಾಖಲೆ ಕೇಳುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು” ಎಂಬ ಮಾತುಗಳನ್ನು 5ನೇ ತರಗತಿಯ ಮಗು ಹೇಳಿದೆ. ಅಷ್ಟಕ್ಕೆ ಅದನ್ನು ಕೇಳಿದ ಎಬಿವಿಪಿ ಕಾರ್ಯಕರ್ತನಿಗೆ ದೇಶವೇ ಕುಸಿದುಹೋಯಿತು ಅನ್ನಿಸಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೊಟ್ಟಿದ್ದಾನೆ. ಅದಕ್ಕಾಗಿಯೇ ಕಾಯುತ್ತಿದ್ದರೋ ಎನ್ನುವ ರೀತಿಯಲ್ಲಿ ಪೊಲೀಸರು ದಿಢೀರ್ ಶಾಲೆಗೆ ನುಗ್ಗಿದ್ದಲ್ಲದೇ, ಎಳೆಯ ಮಕ್ಕಳನ್ನು ಕೂರಿಸಿಕೊಂಡು ತಾಸುಗಟ್ಟಲೇ ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಅವರು ಕೇಳಿದ ಪ್ರಶ್ನೆಗಳೆಂದರೆ ಆ ಡೈಲಾಗ್ ಅನ್ನು ಯಾರು ಹೇಳಿಕೊಟ್ಟರು? ನಾಟಕದ ಸ್ಕ್ರಿಪ್ಟ್ ಬರೆದುಕೊಟ್ಟ ಶಿಕ್ಷಕರು ಯಾರು?.. ಇಷ್ಟಕ್ಕೆ ಆ ಮಕ್ಕಳು ನಡುಗಿಹೋಗಿದ್ದಾರೆ.

ಪೊಲೀಸರ ಈ ದುರ್ವತನೆಯ ಫೋಟೊಗಳು ವೈರಲ್ ಆಗಿ ಸಾವಿರಾರು ಜನ ಈ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ತಪ್ಪಿನ ಮೇಲೆ ತಪ್ಪು ಮಾಡಿದ ಪೊಲೀಸರು ಜನವರಿ 30ರಂದು 5ನೇ ತರಗತಿಯ ಮಗುವಿನ ತಾಯಿ ನಾಜುಬುನ್ನೀಸ ಮತ್ತು ಶಾಲೆಯ ಮುಖ್ಯೋಪಾಧ್ಯಯಿನಿ ಫರಿದಾ ಬೇಗಂರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿದ್ದಾರೆ. ವಾರ ಕಳೆದರೂ ಅವರಿಬ್ಬರಿಗೂ ಬೇಲ್ ಸಿಕ್ಕಿಲ್ಲ. ಏಕೆಂದರೆ ಜಡ್ಜ್ ರಜೆಯಲ್ಲಿದ್ದಾರೆ.. ಕಾಕತಾಳಿಯವೆಂದರೆ ದೇಶದ ನ್ಯಾಯವೂ ಕೂಡ ರಜೆಯಲ್ಲಿದೆ..!

ನೋವಿನ ಕಥೆ

ಬಂಧನದಲ್ಲಿರುವ ನಾಜುಬುನ್ನೀಸ ಎಂಬ ಮಹಿಳೆಯ ಗಂಡ ತೀರಿಕೊಂಡಿದ್ದಾನೆ. ಚಿಕ್ಕಮಗುವಿನೊಂದಿಗೆ ಬೀದರ್ ಜಿಲ್ಲೆಯ ಹಳ್ಳಿಯಲ್ಲಿ ವಾಸವಿದ್ದ ಆಕೆ, ಇದ್ದ ತುಂಡು ಭೂಮಿಯನ್ನು ಗೇಣಿಗೆ ಕೊಟ್ಟು ತನ್ನ ಮಗಳು ಚೆನ್ನಾಗಿ ಓದಬೇಕೆಂಬ ಅದಮ್ಯ ಆಸೆಯಿಂದ ಎರಡು ತಿಂಗಳ ಹಿಂದೆ ತಾನೇ ಬೀದರ್ ನಗರಕ್ಕೆ ವಲಸೆ ಬಂದಿದ್ದಾಳೆ. ಆದರೆ ತನ್ನದಲ್ಲದ ತಪ್ಪಿಗೆ ಆಕೆ ದುರಂತ ಸ್ಥಿತಿಯಲ್ಲಿ ಜೈಲಿನಲ್ಲಿದ್ದರೆ, ಆಕೆಯ ಮಗಳು ತಾನು ಬಾಡಿಗೆಗೆ ಇದ್ದ ಮನೆಯ ಯಜಮಾನರ ಮನೆಯಲ್ಲಿ ಆಶ್ರಯ ಪಡೆದಿದ್ದು, ತನ್ನ ತಾಯಿಯ ಆಗಮನಕ್ಕಾಗಿ ಕಣ್ಣು ಬಿಟ್ಟಿಕೊಂಡು ಕಾಯುತ್ತಿದ್ದಾಳೆ..

ಆಕೆಯ ತಾಯಿ ಈಗಾಗಲೇ ಮಾಧ್ಯಮಗಳ ಎದುರು ತನ್ನ ಮಗಳು ಆಡಿದ ಮಾತುಗಳು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅವಲತ್ತುಕೊಂಡಿದ್ದಾಳೆ. ಆದರೆ ಪೊಲೀಸರು ಮಾತ್ರ ನಾಟಕದ ಡೈಲಾಗ್‌ಗಳು ಸಿಎಎ, ಎನ್‌ಆರ್‌ಸಿ ವಿರುದ್ಧ ಸುಳ್ಳು ಹರಡುತ್ತಿವೆ ಮತ್ತು ಪ್ರಧಾನಿ ನರೆಂದ್ರ ಮೋದಿಯವರಿಗೆ ಅವಮಾನಿಸುವಂತಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟು ಮಾತ್ರವಲ್ಲ ದೂರು ದಾಖಲಾದ ನಂತರ ಇದುವರೆಗೂ ನಾಲ್ಕು ಬಾರಿ ಶಾಹಿನ್ ಶಾಲೆಗೆ ಭೇಟಿ ಕೊಟ್ಟಿದ್ದಲ್ಲದೇ ಪದೇ ಪದೇ ವಿಚಾರಣೆ ನೆಪದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳಕೊಟ್ಟಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ದೂರಿದೆ. ಪೊಲೀಸರ ಭಯಕ್ಕೆ ಹಲವು ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.

ನ್ಯಾಯ ಎಲ್ಲಿದೆ?

ಸರ್ಕಾರ ಒಂದು ಕಡೆ ಎನ್‌ಸಿಆರ್ ಮಾಡುವುದಿಲ್ಲ ಎನ್ನುತ್ತಿದೆ. ಈ ಬಗ್ಗೆ ಪ್ರಧಾನಿ ಒಂದು ಹೇಳಿದರೆ, ಗೃಹಸಚಿವ ಅಮಿತ್ ಶಾ ಮತ್ತೊಂದು ಹೇಳುತ್ತಿದ್ದಾರೆ. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿದೆಯೆಂದು ಒಮ್ಮೆ, ಇಲ್ಲ ಎಂದು ಇನ್ನೊಮ್ಮೆ ಹೇಳುತ್ತಿದ್ದಾರೆ. ದಾಖಲೆ ತೋರಿಸಬೇಕಿಲ್ಲ ಎಂದು ಒಮ್ಮೆ, ತೋರಿಸಬೇಕೆಂದು ಒಮ್ಮೆ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸುಳ್ಳು ಸುದ್ದಿ ಹರಡಿ ದಿಕ್ಕುತಪ್ಪಿಸುತ್ತಿರುವುದು ಸರ್ಕಾರವೇ ಆಗಿದೆ. ಇವರಿಗೆ ಯಾವ ಶಿಕ್ಷೆ ಕೊಡಬೇಕು? ದಾಖಲೆ ಕೇಳಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬುದು ದೇಶದ್ರೋಹವೇ? ಅದಕ್ಕೂ ಪ್ರಧಾನಿಗೂ ಏನು ಸಂಬಂಧ? ಒಟ್ಟಿನಲ್ಲಿ ಕರ್ನಾಟಕ ಪೊಲೀಸರು ಸಂಘಪರಿವಾರದ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗಿದೆ.

NRC or No NRC- – Who is Lying, Modi or Shah- – CAA-NRC Protests – The Wire

NRC or No NRC- – Who is Lying, Modi or Shah- – CAA-NRC Protests – The Wire

Posted by PEclub on Wednesday, December 25, 2019

ಬಿಜೆಪಿ ಮುಖಂಡರು ರಾಜ್ಯದಲ್ಲಿ ಮತ್ತು ದೇಶದಲ್ಲಿ ದಿನಕ್ಕೊಂದು ಕೋಮುಪ್ರಚೋದಿತ, ಶಾಂತಿ -ಸಾಮರಸ್ಯ ಹಾಳುಮಾಡುವ ಹೇಳಿಕೆ ಕೊಡುತ್ತಿದ್ದಾರೆ. ಸಿಎಎ ವಿರೋಧಿಸುವವರನ್ನು ಸೆದೆಬಡಿಯುತ್ತೇವೆ ಎಂದೂ, ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡದೇ ಹೆಸರು ಪಡೆಯುತ್ತಿದ್ದಾರೆ ಎಂದು ಬಹಿರಂಗವಾಗಿ ಕರ್ನಾಟಕದ ಸಂಸದ ಅನಂತ್‌ಕುಮಾರ್‌ಹೆಗಡೆ ಹೇಳಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮುಸ್ಲಿಮರನ್ನು ಕೊಚ್ಚಿ ಹಾಕುತ್ತೇವೆ ಎಂದು ಭಾಷಣ ಮಾಡುತ್ತಾರೆ. ಸಚಿವ ಸಿ.ಟಿ ರವಿ ಕನ್ನಡಪರ ಸಂಘಟನೆಗಳನ್ನು ತುಕಡೆ ತುಕಡೆ ಗ್ಯಾಂಗ್ ಅನ್ನುತ್ತಾರೆ. ಗೋಧ್ರಾದಲ್ಲಿ ಮುಸ್ಲಿಮರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ದೆಹಲಿಯಲ್ಲಿ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎನ್ನುತ್ತಾರೆ. ಆದರೆ ಇವರ‍್ಯಾರ ಮೇಲೂ ಸಹ ಯಾವುದೇ ದೂರು ದಾಖಲಾಗುವುದಿಲ್ಲ.. ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ.

ಶಾಹಿನ್ ಶಾಲೆಯ ಮೇಲೇಕೆ ಕೋಪ?

ಪೊಲೀಸರು ಪದೇ ಪದೇ ವಿಚಾರಣೆಯ ನೆಪದಲ್ಲಿ ಶಾಹಿನ್ ಶಾಲೆಗೆ ಭೇಟಿಕೊಡುವ ಮೂಲಕ ಆ ಶಾಲೆಯ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. 9-10 ವರ್ಷದ ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಗು, ಅವರ ಪೋಷಕರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಶಾಹಿನ್ ಸಂಸ್ಥೆಯು ಕಳೆದ 31 ವರ್ಷಗಳಿಂದ ದೇಶದ 8 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದ ಸುಮಾರು 16000 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಕಳೆದ ವರ್ಷವೊಂದರಲ್ಲಿಯೇ 327 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಬಡವರ ಪರವಾಗಿ ಇರುವ ಇಂತಹ ಸಂಸ್ಥೆಯ ಮೇಲೆ ಕಣ್ಣುಬಿದ್ದಿರುವ ದುರುಳರ ಪರವಾಗಿ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.

ಒಟ್ಟಿನಲ್ಲಿ ಮುಂದಾಲೋಚನೆಯಿಲ್ಲದೇ ಸಿಎಎ ಕಾನೂನನ್ನು ತಂದ ಸರ್ಕಾರ, ಅದನ್ನು ಸಮರ್ಥಿಸಿಕೊಳ್ಳಲು ಕಂಡ ಕಂಡವರ ಮೇಲೆ ದೂರು ದಾಖಲಿಸಿ ಹೆದರಿಸುವ ನೀಚತನಕ್ಕೆ ಇಳಿದಿದೆ. ಅದಕ್ಕಾಗಿಯೇ ಅದು ಭಿತ್ತಿಪತ್ರಕ್ಕೆ, ಕವನಕ್ಕೆ, ನಾಟಕಕ್ಕೆ ಹೆದರುತ್ತಿದೆ. ಮೈಸೂರಿನಲ್ಲಿಯೂ ಸಹ ಫ್ರಿ ಕಾಶ್ಮೀರ್ ಭಿತ್ತಿಫಲಕ ಹಿಡಿದ ವಿದ್ಯಾರ್ಥಿನಿಯದು ತಪ್ಪಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಾಡಲಾಗಿದೆ. ಹಾಗಾಗಿ ಆಕೆಗೆ ಜಾಮೀನು ದೊರೆತಿದೆ. ಅದೇ ರೀತಿ ಇಲ್ಲಿಯೂ ಸಹ ನ್ಯಾಯಾಲಯದಲ್ಲಿ ಈ ಕೇಸುಗಳು ನಿಲ್ಲುವುದಿಲ್ಲ. ಆದರೆ ಈ ಮೂಲಕ ಜನರಲ್ಲಿ ಭಯ ಉಂಟುಮಾಡಲು ಹೋಗಿ ಪ್ರಭುತ್ವ ಮತ್ತಷ್ಟು ಬೆತ್ತಲಾಗುತ್ತಿದೆ ಅಷ್ಟೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾನ್ಯೆರೆ,
    ಹಲವಾರು ಹಿಂದಿ, ಕನ್ನಡ, ಇತರ ಭಾಷೆಗಳ ಚಲನ ಚಿತ್ರಗಳಲ್ಲಿ ಐತಿಹಾಸಿಕ ಕಥೆಗಳ ಸಿನೆಮಾಗಳಲ್ಲಿ ದೇಶ ಮತ್ತು ವಿದೇಶಿಗರ ಪಾತ್ರ ನಮ್ಮ ದೇಶ ಕಲಾವಿಧರು ಮಾಡುತ್ತಾರೆ. ಅಂಥಹವರಲ್ಲಿ ಕೆಲವರು ದೇಶ ಭಕ್ತಿಯ ಪಾತ್ರ ವಹಿಸುತ್ತಾರೆ ಕೆಲವರು ದೇಶ ದ್ರೋಹಿಗಳ ಪಾತ್ರ ವಹಿಸುತ್ತಾರೆ. ದೇಶ ಭಕ್ತರ ಪಾತ್ರ ವಹಿಸಿದವರು ಜೈಕಾರ ಹಾಕುತ್ತಾರೆ, ಭಾರತ ಕೀ ಜೈ ಹೋ ಅಂತಾರೆ, ದೇಶ ದ್ರೋಹಿಗಳ ಪಾತ್ರ ವಹಿಸಿದವರು ನಮ್ಮ ವೈರಿ ದೇಶಗಳ ಜೈಕಾರ ಹಾಕುತ್ತಾರೆ.
    ಇಂತಹ ವಿಷಯಗಳಲ್ಲಿ ಬೀದರ ಪೊಲೀಸರಿಗೆ ನನ್ನ ಸವಾಲು, ಆಗ ಸಿನೆಮಾಗಳಲ್ಲಿ ದೇಶ ದ್ರೋಹ ಪಾತ್ರ ವಹಿಸಿದ ಎಷ್ಟು ಜನರ ಮೇಲೆ ಕೇಸ ಹಾಕಿ ಜೇಲಿಗೆ ಕಳಹಿಸಿದಿರಿ ಉತ್ತರ ಕೊಡಿ?
    ನೀವು ಯಾವ ಶಾಲೆಯಲ್ಲಿ ಕಾನೂನು ಕಲಿರುವಿರಿ? ಜನರ ಬಗ್ಗೆ, ಕಾನೂನಿನ ಬಗ್ಗೆ ಕಾಳಜಿಯಿಂದ ವರ್ತಿಸಿ
    ಯಿಂದ:-
    ಸಯದ ಸಜ್ಜಾದ ಅಲಿ ಇನಾಮದಾರ
    ಮಾಜಿ ಉಪ ಮಹಾ ಪೌರರು ಕಲಬುರಗಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...