ಕಳೆದ ಭಾನುವಾರ ಸಂಜೆ ಹುಲ್ಲು ಕತ್ತರಿಸಲು ಗೋಧಿ ಹೊಲಕ್ಕೆ ತೆರಳಿದ್ದ 80 ವರ್ಷದ ದಲಿತ ವೃದ್ದೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾ ಬಳಿಯಲ್ಲಿ ಬೆಳಕಿಗೆ ಬಂದಿದೆ. ಹೊಲಕ್ಕೆ ತೆರಳಿದ್ದ ವೃದ್ದೆ ಮೇಲೆ ಆರೋಪಿ ಹಲ್ಲೆ ನಡೆಸಿದ್ದು, ಆಕೆಯ ಬಾಯಿ ಮುಚ್ಚಿಸಿದ ನಂತರ ಘೋರ ಅಪರಾಧ ಎಸಗಿದ್ದಾನೆ ಎಂದು ಆಕೆಯ ಕುಟುಂಬ ಸದಸ್ಯರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
“ಸಂತ್ರಸ್ತ ಮಹಿಳೆ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಗೋಧಿ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದಾಗ, ಕೆಲವರು ಆಕೆಯನ್ನು ಹಿಂದಿನಿಂದ ಹಿಡಿದುಕೊಂಡಿದ್ದಾರೆ. ಆಕೆ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ, ಬಾಯಿ ಮುಚ್ಚಿ ಅತ್ಯಾಚಾರ ಎಸಗಿದರು. ಹಲ್ಲೆ ನಡೆಸಿ, ಆಕೆಯ ದೇಹದ ಮೇಲೆ ಹಲವಾರು ಗಾಯಗಳನ್ನು ಮಾಡಿದ್ದಾರೆ. ಆರೋಪಿ ವೃದ್ದೆಯ ಕಣ್ಣುಗಳನ್ನು ಕಿತ್ತುಹಾಕಲು ಪ್ರಯತ್ನಿಸಿದ್ದು, ಆಕೆ ಪ್ರಜ್ಞೆ ತಪ್ಪಿದ ನಂತರ ಮೃತಪಟ್ಟಿದ್ದಾಳೆಂದು ನಂಬಿ ಸ್ಥಳದಿಂದ ಪರಾರಿಯಾಗಿದ್ದನು” ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿ ಇನ್ನೂ ಇಬ್ಬರಿರು. ಆದರೆ, ಅವರು ಅತ್ಯಾಚಾರದಲ್ಲಿ ಭಾಗವಹಿಸಲಿಲ್ಲ ಎಂದು ತಿಳಿದುಬಂದಿದೆ.
“ಅಪರಾಧ ನಡೆದ 19 ಗಂಟೆಗಳ ನಂತರ ಮಾರ್ಚ್ 15 ರಂದು ಮಧ್ಯಾಹ್ನ ಮಹಿಳೆಗೆ ಪ್ರಜ್ಞೆ ಬಂದು ಘಟನೆಯ ಬಗ್ಗೆ ತಿಳಿಸಿದಾಗ, ಅವರು ಆರೋಪಿಯ ಮನೆಗೆ ಹೋಗಿ ಆತನನ್ನು ಪ್ರಶ್ನಿಸಿದ್ದಾರೆ. ಆದರೆ, ಆತನ ಸಹೋದರ ಮತ್ತು ತಂದೆ ಜಾತಿ ನಿಂದನೆ ಮಾಡಿ ಅವರನ್ನು ಬೆದರಿಸಿದ್ದಾರೆ. ಇದರ ನಂತರ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಲಾಯಿತು” ಎಂದು ದೂರುದಾರರು ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಮುಖ ಆರೋಪಿ, ಆತನ ಕುಟುಂಬದ ನಾಲ್ವರು ಮತ್ತು ಅಪರಾಧದ ಸಮಯದಲ್ಲಿ ಸ್ಥಳದಲ್ಲಿದ್ದ ಇತರ ಇಬ್ಬರು ಸೇರಿದ್ದಾರೆ. ಪ್ರಮುಖ ಆರೋಪಿಯೊಂದಿಗೆ ಇದ್ದ ಇಬ್ಬರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ತಿಳಿಸಿದ್ದಾರೆ.
“ಪ್ರಮುಖ ಆರೋಪಿ, ಆತನ ಮತ್ತೊಬ್ಬ ಸಹಚರ ಮತ್ತು ಆತನ ಕುಟುಂಬದ ನಾಲ್ವರು ಸದಸ್ಯರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ, ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ” ಎಂದು ಅವರು ಹೇಳಿದರು.
ಹೋಳಿ ಹಬ್ಬದ ದಿನದಂದು ಅತ್ತೆಯನ್ನು ಹುಡುಕುತ್ತಿದ್ದಾಗ, ಗ್ರಾಮದ ಕೆಲವು ಮಹಿಳೆಯರು ವೃದ್ಧ ಮಹಿಳೆ ಗೋಧಿ ಹೊಲದಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ ಎಂದು ಸಂತ್ರಸ್ತೆಯ ಸೊಸೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಸ್‌ಎಚ್‌ಒ ಹೇಳಿದರು. ನಂತರ ಅವರು ಸ್ಥಳಕ್ಕೆ ಹೋಗಿ ಸ್ಥಳೀಯ ನಿವಾಸಿಗಳ ಸಹಾಯದಿಂದ ಆಕೆಯನ್ನು ಮನೆಗೆ ಕರೆತಂದು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.
“ಘಟನೆಯ 19 ಗಂಟೆಗಳ ನಂತರ, ಮಾರ್ಚ್ 15 ಮಧ್ಯಾಹ್ನದ ಸುಮಾರಿಗೆ ವೃದ್ಧ ಮಹಿಳೆ ಪ್ರಜ್ಞೆ ಮರಳಿ ಬಂದು ಇಡೀ ಸಂಕಷ್ಟವನ್ನು ವಿವರಿಸಿದರು” ಎಂದು ಎಸ್‌ಎಚ್‌ಒ ಹೇಳಿದರು.
24 ದಲಿತರ ಸಾಮೂಹಿಕ ಹತ್ಯೆ ಪ್ರಕರಣ | 44 ವರ್ಷಗಳ ಬಳಿಕ ತೀರ್ಪು ಪ್ರಕಟ; ಮೂವರು ದೋಷಿಗಳೆಂದ ಕೋರ್ಟ್


