ಮೂಢನಂಬಿಕೆಗಳಿಂದ ಪ್ರೇರಿತಳಾಗಿ ತನ್ನ ಮಗಳು ಗರ್ಭಿಣಿಯಾಗುವ ಉದ್ದೇಶಕ್ಕಾಗಿ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಬಲಿ ನೀಡಿರುವ ಘಟನೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಿಹಾರ
ಜನವರಿ 22 ರಿಂದ ಕಾಣೆಯಾಗಿದ್ದ ಮಗು ಸುಮಾರು ಒಂದು ವಾರದ ನಂತರ ಕುದ್ರಾ ರೈಲು ನಿಲ್ದಾಣದ ಬಳಿಯ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ವ್ಯಾಪಕ ಹುಡುಕಾಟದ ನಂತರ ಮಗುವಿನ ಕೊಳೆತ ಶವ ಪತ್ತೆಯಾಗಿದೆ ಎಂದು ಕೈಮೂರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರಿ ಮೋಹನ್ ಶುಕ್ಲಾ ತಿಳಿಸಿದ್ದಾರೆ. ಮಗುವನ್ನು ಬಲಿ ಪಡೆದ ಮಹಿಳೆಯು ಮಂತ್ರವಾದಿಯ ಮಾತು ಕೇಳಿ ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದು, ಮಂತ್ರವಾದಿ ಪ್ರಸ್ತುತ ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ. ಬಿಹಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಹಿಳೆಯು ಮಗುವನ್ನು ಕತ್ತು ಹಿಸುಕಿ ಗ್ರೇಡರ್ ಯಂತ್ರವನ್ನು ಬಳಸಿ ಕಾಲುಗಳನ್ನು ಕತ್ತರಿಸಿದ್ದಾಗಿ ಆರೋಪವಿದೆ. ಪೊಲೀಸರು ಗ್ರೇಡರ್ ಅನ್ನು ವಶಪಡಿಸಿಕೊಂಡಿದ್ದಾಗಿ ವರದಿಯಾಗಿದೆ. “ಮಂತ್ರವಾದಿಯ ಗುರುತು ಪತ್ತೆಯಾಗಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಅಧಿಕಾರಿ ಹೇಳಿದ್ದಾರೆ.
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯವರಾದ ಸಂತ್ರಸ್ತರು, ಕುಟುಂಬದ ಮದುವೆಯಲ್ಲಿ ಭಾಗವಹಿಸಲು ತನ್ನ ಮಗು ತಾಯಿಯೊಂದಿಗೆ ಲಾಲಾಪುರಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ತನ್ನ ಅಜ್ಜಿಯ ಮನೆಯ ಹೊರಗೆ ಆಟವಾಡುತ್ತಿದ್ದಾಗ ಮಗು ಕಣ್ಮರೆಯಾಗಿತ್ತು. ಇದರಿಂದಾಗಿ ಮಗುವಿನ ಚಿಕ್ಕಪ್ಪ ಅಜಯ್ ಪಾಲ್ ಕುದ್ರಾ ಪೊಲೀಸರಿಗೆ ದೂರು ದಾಖಲಿಸಿದ್ದರು.
ಎಲೆಕ್ಟ್ರಾನಿಕ್ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿಯನ್ನು ಬಳಸಿಕೊಂಡು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಐದು ಮಂದಿ ಶಂಕಿತರನ್ನು ಬಂಧಿಸಲಾಗಿತ್ತು. ಬಂಧಿತರನ್ನು ಮುನ್ನಿ ಕುನ್ವರ್, ಅವರ ಮಗ ಅವಿನಾಶ್ ಕುಮಾರ್, ಅವರ ಸಹಚರ ಅಂಕಿತ್ ಕುಮಾರ್, ಲಕ್ಷ್ಮಿನಾ ದೇವಿ ಮತ್ತು ಅವರ ಮಗ ಪರಸ್ನಾಥ್ ಪಾಲ್ ಎಂದು ಗುರುತಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಮುನ್ನಿ ತಪ್ಪೊಪ್ಪಿಕೊಂಡಿದ್ದರು. ತನ್ನ ವಿವಾಹಿತ ಮಗಳು ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ಗರ್ಭಿಣಿಯಾಗಿರಲಿಲ್ಲ. ಹಾಗಾಗಿ ಅವರ ಗಂಡನಿಗೆ ಎರಡನೇ ಮದುವೆಗೆ ಸಂಬಂಧಿಸಿದಂತೆ ಅವರ ಅತ್ತೆ ಮಾವರಿಂದ ಒತ್ತಡ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದರು. ಈ ವೇಳೆ ಮಂತ್ರವಾದಿಯನ್ನು ಸಂಪರ್ಕಿಸಿದ್ದು, ಅವರು ಚಿಕ್ಕ ಹುಡುಗನನ್ನು ಬಲಿ ನೀಡುವುದರಿಂದ ಮಗಳು ಗಂಡು ಮಗುವನ್ನು ಹೆರುತ್ತಾರೆ ಎಂದು ಭರವಸೆ ನೀಡಿದ್ದರು ಎಂದು ಮುನ್ನಿ ಹೇಳಿದ್ದಾರೆ.
ಅಪಹರಣವನ್ನು ನಡೆಸಲು ಮುನ್ನಿಯು ಲಕ್ಷ್ಮಿನಾ ಮತ್ತು ಅಂಕಿತ್ ಜೊತೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಜನವರಿ 22 ರಂದು, ಅಂಕಿತ್ ಮತ್ತು ಪರಸ್ನಾಥ್ ಮಗುವನ್ನು ಅಜ್ಜಿಯ ಮನೆಯ ಹೊರಗಿನಿಂದ ಅಪಹರಿಸಿ ಮುನ್ನಿಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹತ್ಯೆಯ ನಂತರ ಮಗುವನ್ನು ಲಕ್ಷ್ಮಿನಾ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದನು.
ಕೊಲೆ ನಡೆದ ಸ್ಥಳದ ಮೇಲೆ ಸಿಮೆಂಟ್ ಹಾಕುವ ಮೂಲಕ ಆರೋಪಿಗಳು ಸಾಕ್ಷ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದ ಮಂತ್ರವಾದಿಯ ಅಧಿಕಾರಿಗಳು ಹುಡುಕಾಟವನ್ನು ಮುಂದುವರೆಸಿದ್ದಾರೆ.
ಇದನ್ನೂಓದಿ: ದೆಹಲಿ ಚುನಾವಣೆ: ಎಎಪಿ-ಕಾಂಗ್ರೆಸ್ ವಿಭಜನೆಯಿಂದ ಬಿಜೆಪಿಗೆ ಲಾಭವಾಗಿದೆಯೇ?
ದೆಹಲಿ ಚುನಾವಣೆ: ಎಎಪಿ-ಕಾಂಗ್ರೆಸ್ ವಿಭಜನೆಯಿಂದ ಬಿಜೆಪಿಗೆ ಲಾಭವಾಗಿದೆಯೇ?


