ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಸ್ಪರ್ಧಿಸಲಿದೆ ಎಂದು ಬಿಜೆಪಿ ನಾಯಕ, ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಭಾನುವಾರ ಹೇಳಿದ್ದಾರೆ. ”ಇದರಲ್ಲಿ ಯಾವುದೇ ಗೊಂದಲ ಬೇಡ. ಸಿಎಂ ನಿತೀಶ್ ಕುಮಾರ್ ಮತ್ತು ಪಿಎಂ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎನ್‌ಡಿಎ ಮತ್ತೊಮ್ಮೆ ಜನಾದೇಶವನ್ನು ಪಡೆಯಲಿದೆ” ಎಂದು ಅವರು ಹೇಳಿದ್ದಾರೆ. ಬಿಹಾರ ಚುನಾವಣೆಯನ್ನು
ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2025 ರ ರಾಜ್ಯ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ನಾಯಕನಾಗಿ ಪ್ರಕಟಿಸುವ ಬಗ್ಗೆಗಿನ ಊಹಾಪೋಹಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಅದಕ್ಕೂ ಮುನ್ನ, ಮುಂಬರುವ ಚುನಾವಣೆಯಲ್ಲಿ ನಿತೀಶ್ ಅವರ ಪ್ರಮುಖ ಪಾತ್ರದ ಬಗ್ಗೆ ಜೆಡಿಯು ಭಾನುವಾರ ತನ್ನ ನಿಲುವನ್ನು ಪುನರುಚ್ಚರಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಮಹಾರಾಷ್ಟ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದಂತೆ ಬಿಹಾರಲ್ಲಿ ಕೂಡಾ ಚುನಾವಣೆಗೆ ಹೋಗುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತಿಚೆಗೆ ಮಾತನಾಡಿದ್ದರು. ಅವರ ಹೇಳಿಕೆಗೆ ಉಂಟಾದ ಗೊಂದಲದ ನಂತರ ಉಪ ಮುಖ್ಯಮಂತ್ರಿ ಚೌಧರಿ ಅವರ ಹೇಳಿಕೆಗಳು ಹೊರಬಂದಿವೆ.
ಪಕ್ಷದ ಪ್ರಮುಖ ಚುನಾವಣಾ ತಂತ್ರಜ್ಞ ಎಂದು ಇನ್ನೂ ಪರಿಗಣಿಸಲ್ಪಟ್ಟಿರುವ ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಅವರು, “ನಾಯಕತ್ವದ ಬಗ್ಗೆ ನಾವು ಒಟ್ಟಿಗೆ ಕುಳಿತು ನಿರ್ಧರಿಸುತ್ತೇವೆ. ನಾವು ನಿರ್ಧಾರ ತೆಗೆದುಕೊಂಡ ನಂತರ ನಿಮಗೆ ತಿಳಿಸುತ್ತೇವೆ” ಎಂದು ಅಸ್ಪಷ್ಟ ರೀತಿಯಲ್ಲಿ ಇತ್ತಿಚೆಕಗೆ ಪ್ರತಿಕ್ರಿಯಿಸಿದ್ದರು. ಅವರ ಈ ಹೇಳಿಕೆ 2025 ರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಬಿಹಾರದಲ್ಲಿ ತಮ್ಮ ಮೈತ್ರಿಯ ನಾಯಕನನ್ನಾಗಿ ಬಿಂಬಿಸಲು ಬಿಜೆಪಿ ಮುಂದಾಗುತ್ತಿಲ್ಲ ಎಂಬ ವದಂತಿಗಳು ಹರಡಿತ್ತು.
ಈ ಗೊಂದಲಗಳನ್ನು ಹೋಗಲಾಡಿಸಿದ ಉಪ ಮುಖ್ಯಮಂತ್ರಿ ಚೌಧರಿ, “ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎನ್‌ಡಿಎ ಕೆಲಸ ಮಾಡುತ್ತಿದೆ. ನಾವು ಇಬ್ಬರೂ ನಾಯಕರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ” ಎಂದು ಹೇಳಿದ್ದಾರೆ. ಬಿಹಾರ ಚುನಾವಣೆಯನ್ನು
ಎನ್‌ಡಿಎ 2020 ರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತ್ತು ಮತ್ತು ಅವರನ್ನು ಬಿಹಾರದಲ್ಲಿ ಮೈತ್ರಿಕೂಟದ ನಾಯಕನಾಗಿ ನೋಡುತ್ತಿದೆ ಎಂದು ಅವರು ಹೇಳಿದ್ದಾರೆ. “ಭವಿಷ್ಯದಲ್ಲಿಯೂ ನಾವು ನಿತೀಶ್ ಕುಮಾರ್ ಮತ್ತು ಪ್ರಧಾನಿ ನೇತೃತ್ವದಲ್ಲಿ ಚುನಾವಣೆಗಳನ್ನು ಎದುರಿಸುತ್ತೇವೆ” ಎಂದು ಅವರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ, ಶಸ್ತ್ರಾಸ್ತ್ರ – ಬಿಹಾರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ
ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ, ಶಸ್ತ್ರಾಸ್ತ್ರ – ಬಿಹಾರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ


