ಹಾವು ಸತ್ತು ಬಿದ್ದ ಬಿಸಿಯೂಟವನ್ನೆ ಶಾಲಾ ಮಕ್ಕಳಿಗೆ ನೀಡಿರುವ ಘಟನೆ ಬಿಹಾರದ ಶಾಲೆಯಲ್ಲಿ ನಡೆದಿದ್ದು, ಅದನ್ನು ಸೇವಿಸಿದ ಶಾಲೆಯ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆ ಗುರುವಾರ ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ಬಿಸಿಯೂಟ ಸೇವಿಸಿ
“ಅಡುಗೆಯವರು ಸತ್ತ ಹಾವನ್ನು ಅದರಿಂದ ಹೊರತೆಗೆದು ಮಕ್ಕಳಿಗೆ ಆಹಾರವನ್ನು ಬಡಿಸಿದ್ದಾರೆ ಎಂದು ವರದಿಯಾಗಿದೆ” ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾದ ಬಿಹಾರದ ಮೊಕಾಮಾ ನಗರದ ಸರ್ಕಾರಿ ಶಾಲೆಯಲ್ಲಿ ಕಳೆದ ವಾರ ಈ ಊಟವನ್ನು ಬಡಿಸಲಾಗಿತ್ತು ಎಂದು ಅದು ಹೇಳಿದೆ.
ಶಾಲೆಯ ಊಟವನ್ನು ತಿಂದ ನಂತರ “100 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದರು” ಎಂಬ ಮಾಧ್ಯಮ ವರದಿಗಳನ್ನು ತನಿಖೆ ಮಾಡಬೇಕೆಂದು ಆಯೋಗವು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರನ್ನು ಒತ್ತಾಯಿಸಿದೆ.
ಈ ಘಟನೆಯಿಂದ ಉದ್ರಿಕ್ತರಾದ ಮಕ್ಕಳ ಕುಟುಂಬಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. “ಮಧ್ಯಾಹ್ನದ ಊಟ ಸೇವಿಸಿದ ಕಾರಣ ಮಕ್ಕಳು ಅನಾರೋಗ್ಯಕ್ಕೆ ಒಳಗಾದ ಸುದ್ದಿಯ ನಂತರ ಪ್ರತಿಭಟನಾ ನಿರತ ಗ್ರಾಮಸ್ಥರು ರಸ್ತೆ ತಡೆ ಕೂಡಾ ಮಾಡಿದ್ದಾರೆ” ಎಂದು ಅದು ಹೇಳಿದೆ.
ಭಾರತದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳಿಗೆ ಉಚಿತ ಊಟವನ್ನು ನೀಡಲಾಗುತ್ತದೆ. ಇದನ್ನು ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವ ಒಂದು ಮಾರ್ಗವೆಂದು ಅಧಿಕಾರಿಗಳು ನೋಡುತ್ತಾರೆ.
“ಮಕ್ಕಳ ಆರೋಗ್ಯ ಸ್ಥಿತಿ”ಯನ್ನು ಒಳಗೊಂಡಂತೆ ಹಿರಿಯ ರಾಜ್ಯ ಅಧಿಕಾರಿಗಳು ಮತ್ತು ಪೊಲೀಸರಿಂದ “ವಿವರವಾದ ವರದಿ”ಯನ್ನು ಕೋರಿರುವುದಾಗಿ ಆಯೋಗ ಹೇಳಿದೆ. ವರದಿ ದೃಢಪಟ್ಟರೆ, “ವಿದ್ಯಾರ್ಥಿಗಳ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆ ಮುನ್ನಲೆಗೆ ಬರುತ್ತದೆ ಎಂದು ಅದು ಹೇಳಿದೆ.
2013 ರಲ್ಲಿ, ಬಿಹಾರದ ಸರನ್ ಜಿಲ್ಲೆಯಲ್ಲಿ ಕೀಟನಾಶಕಗಳನ್ನು ಬೆರೆಸಿದ ಊಟವನ್ನು ಸೇವಿಸಿದ ನಂತರ 23 ಶಾಲಾ ಮಕ್ಕಳು ಸಾವನ್ನಪ್ಪಿದ್ದರು. ಈ ವಿಪತ್ತು ಸರ್ಕಾರವು ಶಾಲೆಗಳಲ್ಲಿ ಆಹಾರ ಸುರಕ್ಷತೆಯನ್ನು ಸುಧಾರಿಸಲು ಪ್ರೇರೇಪಿಸಿತ್ತು. ಬಿಸಿಯೂಟ ಸೇವಿಸಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ನೈನಿತಾಲ್‌ನಲ್ಲಿ ಭುಗಿಲೆದ್ದ ಕೋಮು ಉದ್ವಿಗ್ನತೆ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ನೈನಿತಾಲ್‌ನಲ್ಲಿ ಭುಗಿಲೆದ್ದ ಕೋಮು ಉದ್ವಿಗ್ನತೆ

