ಮೂರು ದಿನಗಳ ಕಾಲ ನಡೆಯುವ ‘ಜೀವಿತಪುತ್ರಿಕಾ’ ಹಬ್ಬದ ಆಚರಣೆಯಲ್ಲಿ ಬಿಹಾರದಾದ್ಯಂತ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವ ವೇಳೆ 37 ಮಕ್ಕಳು ಸೇರಿದಂತೆ 46 ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಮೃತಪಟ್ಟ 46 ಮಂದಿಯಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂದು ವರದಿಗಳು ಹೇಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2023ರಲ್ಲಿ ರಾಜ್ಯದಲ್ಲಿ ‘ಜೀವಿತಪುತ್ರಿಕ’ ಹಬ್ಬದ ಆಚರಣೆ ವೇಳೆ ಒಟ್ಟು 22 ಮಂದಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ. ಮೂರು ದಿನಗಳ ಈ ಉತ್ಸವವು ‘ನಹಯ್ ಖಯ್’ ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಭಕ್ತರು ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ಇದನ್ನೂ ಓದಿ: ‘ಬಿಜೆಪಿ ರಕ್ತದಲ್ಲಿ ಕೋಮುವಾದ ಸೇರಿಕೊಂಡಿರುವ ಹಾಗೆ ಅಂತರ್‌ಕಲಹವೂ ಇದೆ..’; ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬುಧವಾರ ಆಚರಿಸಲಾದ ಉತ್ಸವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಸಾವುಗಳು ವರದಿಯಾಗಿವೆ. ಇಲ್ಲಿಯವರೆಗೆ ಒಟ್ಟು 43 ಮೃತದೇಹಗಳು ಸಿಕ್ಕಿದ್ದು, ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಹಾರ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಔರಂಗಾಬಾದ್, ನಳಂದಾ, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‌ಪುರ, ಸಮಸ್ತಿಪುರ್, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಘಟನೆಗಳು ಸಂಭವಿಸಿವೆ.
ಔರಂಗಾಬಾದ್‌ನಲ್ಲಿ ಎಂಟು, ಕೈಮೂರ್‌ನಲ್ಲಿ ಏಳು, ಪಾಟ್ನಾ, ಸರನ್, ಪೂರ್ವ ಚಂಪಾರಣ್‌ನಲ್ಲಿ ತಲಾ ಐದು, ಪಶ್ಚಿಮ ಚಂಪಾರಣ್‌ನಲ್ಲಿ ಮೂರು, ರೋಹ್ತಾಸ್‌ನಲ್ಲಿ ಮೂವರು, ವೈಶಾಲಿ, ಸಮಸ್ತಿಪುರ್ ಮತ್ತು ಮುಜಾಫರ್‌ಪುರದಲ್ಲಿ ತಲಾ ಇಬ್ಬರು, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ ರೂ.4 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.
ವಿಡಿಯೊ ನೋಡಿ: ಮೀಸಲಾತಿ ಅವರಪ್ಪನ ಮನೆಯ ಸ್ವತ್ತಲ್ಲ: ಮಾವಳ್ಳಿ ಶಂಕರ್


