ಬಿಹಾರದಲ್ಲಿ ಚುನಾವಣಾ ಕಾವು ಮತ್ತು ಬೇಸಿಗೆಯ ಬಿಸಿ ಏರುತ್ತಿರುವ ಹೊತ್ತಿನಲ್ಲೆ ರಾಜ್ಯದ ಬಿಜೆಪಿ ಸಚಿವರೊಬ್ಬರು ಜನರಿಗೆ ಕಂಬಳಿ ವಿತರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಡಿದ್ದಾರೆ. ಸಚಿವರ ಈ ನಡೆಯನ್ನು ವಿಪಕ್ಷ ಆರ್‌ಜೆಡಿ ‘ವಿಲಕ್ಷಣ ವರ್ತನೆ’ ಎಂದು ಕರೆದಿದೆ. ಕಾರ್ಯಕ್ರಮವೂ ಕ್ಷೇತ್ರದ ಜನರಿಗೆ ಕೃತಜ್ಞತೆ ಮತ್ತು ಗೌರವದ ಸಂಕೇತವೆಂದು ಸಚಿವರು ಕಂಬಳಿಗಳನ್ನು ವಿತರಿಸುವ ವೇಳೆ ಬಣ್ಣಿಸಿದ್ದಾರೆ ಎಂದು ವರದಿಯಾಗಿದೆ. ಬಿಹಾರದ 40°C ಬೇಸಿಗೆಯ
ಬಿಹಾರದ ಕ್ರೀಡಾ ಸಚಿವ ಸುರೇಂದ್ರ ಕುಮಾರ್ ಮೆಹ್ತಾ ಅವರು ರಾಜ್ಯವು 40 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಲುಪಿದಾಗ ಜನರಿಗೆ ಕಂಬಳಿ ವಿತರಿಸುವ ವೀಡಿಯೊವನ್ನು ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಬಿಜೆಪಿಯ ಸಂಸ್ಥಾಪನಾ ದಿನದ ಅಂಗವಾಗಿ ಬೇಗುಸರಾಯ್ ಜಿಲ್ಲೆಯ ಮನ್ಸುರ್ಚಕ್ ಬ್ಲಾಕ್‌ನ ಅಹಿಯಾಪುರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸುಮಾರು 700 ಜನರಿಗೆ ಸಾಂಪ್ರದಾಯಿಕ ಬಟ್ಟೆ ಮತ್ತು ಕಂಬಳಿಗಳನ್ನು ವಿತರಿಸಿದ್ದಾರೆ.
ಏಪ್ರಿಲ್ 6 ರಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸಚಿವರು ಜನರಿಗೆ ‘ಆಂಗ್ ವಸ್ತ್ರ’ ಹಸ್ತಾಂತರಿಸುವ ಮೂಲಕ ಗೌರವಿಸಿದರು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. “ಫಲಾನುಭವಿಗಳಿಗೆ ಬಟ್ಟೆಗಳು ಬೇಕಾಗಿದ್ದವು. ಅವರಿಗೆ ಸಾಂಪ್ರದಾಯಿಕ ‘ಆಂಗ್ ವಸ್ತ್ರ’ವನ್ನು ಒದಗಿಸಲು ನಾವು ಈ ಸಂದರ್ಭವನ್ನು ಆರಿಸಿಕೊಂಡೆವು. ಅದರ ಜೊತೆಗೆ ಜನರಿಗೆ ಕಂಬಳಿಗಳನ್ನು ಸಹ ಹಸ್ತಾಂತರಿಸಲಾಯಿತು” ಎಂದು ಸಚಿವರ ಆಪ್ತರೊಬ್ಬರು ಹೇಳಿದ್ದಾಗಿ TNIE ವರದಿ ಮಾಡಿದೆ.
ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾಕಿದ್ದ ಈ ವಿಡಿಯೊವನ್ನು ವಿವಾದದ ನಂತರ ಸಚಿವ ಮೆಹ್ತಾ ಅವರು ಅಳಿಸಿದ್ದಾರೆ. ಅಳಿಸಲ್ಪಟ್ಟ ಈ ಪೋಸ್ಟ್‌ನಲ್ಲಿ, “ಬಡವರ ಉನ್ನತಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾಗಿರುವ ವಿಶ್ವದ ಅತಿದೊಡ್ಡ ಪಕ್ಷದ 45 ನೇ ಸಂಸ್ಥಾಪನಾ ದಿನದಂದು, ನಾವು ಅಹಿಯಾಪುರದಲ್ಲಿ ಜನರಿಗೆ ‘ಅಂಗ್ ವಸ್ತ್ರ’ ನೀಡುವ ಮೂಲಕ ಗೌರವಿಸಿದ್ದೇವೆ” ಎಂದು ಬರೆದಿದ್ದಾರೆ.
बिहार में गर्मी की बढ़ती यातना 🌞 के बीच खेल मंत्री ने कंबल बांटकर मानसिक यातना का विश्व रिकॉर्ड बना दिया!
अब लगता है केवल मुख्यमंत्री ही नहीं, उनके सारे मंत्री भी नरभसा गए हैं!खेल मंत्री सुरेंद्र महतों ने बेगूसराय जिले के मंसूरचक प्रखंड के अहियापुर में तामझाम के साथ समारोह… pic.twitter.com/l9PfUcat6H
— Rashtriya Janata Dal (@RJDforIndia) April 8, 2025
“ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅನಿಯಮಿತ ವರ್ತನೆಯು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಆದರೆ ಅವರ ಸಚಿವ ಸಹೋದ್ಯೋಗಿ ಮೆಹ್ತಾ ಅವರ ಈ ಕ್ರಮವು ರಾಜಕೀಯ ವಲಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ” ಎಂದು ಪಾಟ್ನಾದ ಮರೌರ್ಹಿ ನಿವಾಸಿ ಆರ್‌ಜೆಡಿ ನಾಯಕ ನಿರಂಜನ್ ಯಾದವ್ ಹೇಳಿದ್ದಾರೆ.
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಡವರನ್ನು ಓಲೈಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದಾಗ್ಯೂ, ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಜೆಡಿ(ಯು) ಸಚಿವರನ್ನು ಸಮರ್ಥಿಸಿಕೊಂಡಿದ್ದು, ವೈರಲ್ ವೀಡಿಯೊದಲ್ಲಿ ತೋರಿಸಿರುವಂತೆ ಜನರಿಗೆ ಕಂಬಳಿಗಳನ್ನು ಅಲ್ಲ, ಬದಲಾಗಿ ‘ಚಾದರ್‌ಗಳನ್ನು’ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ. ಬಿಹಾರದ 40°C ಬೇಸಿಗೆಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಬಂಗಾಳವನ್ನು ಒಡೆದು ಆಳುವುದಕ್ಕೆ ಸಾಧ್ಯವಿಲ್ಲ..’; ವಕ್ಫ್ ಕಾಯ್ದೆ ಜಾರಿಗೆ ತರುವುದಿಲ್ಲ ಎಂದ ಮಮತಾ ಬ್ಯಾನರ್ಜಿ
‘ಬಂಗಾಳವನ್ನು ಒಡೆದು ಆಳುವುದಕ್ಕೆ ಸಾಧ್ಯವಿಲ್ಲ..’; ವಕ್ಫ್ ಕಾಯ್ದೆ ಜಾರಿಗೆ ತರುವುದಿಲ್ಲ ಎಂದ ಮಮತಾ ಬ್ಯಾನರ್ಜಿ

