ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ರಾಜೀನಾಮೆಯು “ಕುದುರೆ ಓಡಿಹೋದ ನಂತರ ಲಾಯದ ಬಾಗಿಲು ಮುಚ್ಚಿದಂತೆ” ಎಂದು ಕಾಂಗ್ರೆಸ್ ಭಾನುವಾರ ಹೇಳಿದ್ದು, ಜನಾಂಗೀಯ ಹಿಂಸಾಚಾರ ನಡೆದು 2 ವರ್ಷಗಳ ನಂತರ ತಡವಾಗಿ ರಾಜೀನಾಮೆ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. “ಬಿಜೆಪಿಯು 21 ತಿಂಗಳ ಕಾಲ ಮಣಿಪುರದಲ್ಲಿ ಬೆಂಕಿ ಹಚ್ಚಿ, ಜನರ ಕೈಬಿಟ್ಟಿತು ಎಂಬ ವಿಚಾರ ಬಹಳ ನೋವಿನ ಸಂಗತಿ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ತಿರಸ್ಕಾರ ಮತ್ತು ನಿರಾಸಕ್ತಿಯ ನಿಜವಾದ ಅಪರಾಧಿ ಎಂದು ಖರ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. “ಮಣಿಪುರ ಭಾರತದ ಒಂದು ಭಾಗ ಎಂಬುದನ್ನು ಅವರು ಮರೆತಿದ್ದಾರೆ. ಅವರು ತಮ್ಮ ನೆನಪನ್ನು ಮರುಸ್ಥಾಪಿಸಿಕೊಂಡು ಭಾರತದ ನಕ್ಷೆಯಲ್ಲಿ ಮಣಿಪುರ ರಾಜ್ಯವನ್ನು ಗುರುತಿಸುವ ಸಮಯ ಬಂದಿದೆ!” ಎಂದು ಹೇಳಿದ್ದಾರೆ. ಕುದುರೆ ಓಡಿಹೋದ ನಂತರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ ವಿಚಾರದಲ್ಲಿ ಮುಖ್ಯಮಂತ್ರಿಯು ಪಕ್ಷಪಾತದಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ ಮತ್ತು ಅವರು ಬಹುಮತೀಯತೆಯನ್ನು ಪ್ರಚೋದಿಸಿದ್ದಾರೆ ಎಂದು ಕುಕಿ-ಜೋಮಿ-ಹ್ಮರ್ ಗುಂಪುಗಳು ನಿರಂತರ ಆರೋಪಿಸುತ್ತಲೆ ಬರುತ್ತಿದ್ದು, ಈ ನಡುವೆ ಭಾನುವಾರ ಸಂಜೆ ಮುಖ್ಯಮಂತ್ರಿ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
The resignation of BJP’s Manipur CM is like ‘shutting the stable door after the horse has bolted’!
It is painful to say that for 21 months, the BJP ignited a fire in Manipur and left the people, across communities to fend for themselves.
Their rank incompetence and utter…
— Mallikarjun Kharge (@kharge) February 9, 2025
ಮೇ 2023 ರಿಂದ ಮೈತೇಯಿ ಮತ್ತು ಕುಕಿ-ಜೋಮಿ-ಹ್ಮರ್ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ ಕನಿಷ್ಠ 258 ಜನರು ಸಾವನ್ನಪ್ಪಿದ್ದು, 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿರೇನ್ ಸಿಂಗ್ ಅವರನ್ನು ದೂಷಿಸಿದ್ದು, “ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡ, ಸುಪ್ರೀಂ ಕೋರ್ಟ್ ತನಿಖೆ ಮತ್ತು ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯದ ಪರಿಣಾಮವಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು” ಎಂದು ಪ್ರತಿಪಾದಿಸಿದ್ದಾರೆ.
ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಆದ್ಯತೆಯಾಗಿರಬೇಕು ಎಂದು ಒತ್ತಿಹೇಳಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ, ಸಹಜಸ್ಥಿತಿ ಮರಳಿ ತರುವ ಯೋಜನೆಯನ್ನು ವಿವರಿಸುವಂತೆ ಪ್ರಧಾನಿಯನ್ನು ಕೇಳಿದ್ದಾರೆ.
ಸೋಮವಾರ ಮಣಿಪುರ ವಿಧಾನಸಭೆಯಲ್ಲಿ ತಮ್ಮ ಪಕ್ಷವು ಬಿರೇನ್ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಪ್ರಧಾನಿ ಸಂಘರ್ಷ ಪೀಡಿತ ರಾಜ್ಯಕ್ಕೆ ಭೇಟಿ ನೀಡಬೇಕು ಎಂಬ ವಿರೋಧ ಪಕ್ಷದ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.
For nearly two years, BJP's CM Biren Singh instigated division in Manipur. PM Modi allowed him to continue despite the violence, loss of life, and the destruction of the idea of India in Manipur.
The resignation of CM Biren Singh shows that mounting public pressure, the SC…
— Rahul Gandhi (@RahulGandhi) February 9, 2025
“ಮುಖ್ಯಮಂತ್ರಿಯ ರಾಜೀನಾಮೆ ತಡವಾಗಿ ಆಗಿದೆ” ಎಂದು ಹೇಳಿರುವ ಜೈರಾಮ್ ರಮೇಶ್, “ಮಣಿಪುರದ ಜನರು ಈಗ ಫ್ರಾನ್ಸ್ ಮತ್ತು ಅಮೆರಿಕಾಗೆ ತೆರಳಿರುವ ಹಾರುವ ಪ್ರಧಾನಿಯ ಭೇಟಿಗಾಗಿ ಕಾಯುತ್ತಿದ್ದಾರೆ. ಕಳೆದ ಇಪ್ಪತ್ತು ತಿಂಗಳುಗಳಿಂದ ಮಣಿಪುರಕ್ಕೆ ಹೋಗಲು ಅವರಿಗೆ ಸಮಯ ಅಥವಾ ಒಲವು ಸಿಗುತ್ತಿಲ್ಲ.” ಎಂದು ಹೇಳಿದ್ದಾರೆ.
21 ತಿಂಗಳ ಹಿಂದೆ ಹಿಂಸಾಚಾರ ಪ್ರಾರಂಭವಾದಾಗಿನಿಂದ, ಕುಕಿ-ಜೋಮಿ-ಹ್ಮರ್ ಗುಂಪುಗಳು ಸಂಘರ್ಷಕ್ಕೆ ಬಿರೇನ್ ಸಿಂಗ್ ಅವರ ಪಕ್ಷಪಾತದ ವರ್ತನೆ ಮತ್ತು ಬಹುಸಂಖ್ಯಾತ ನೀತಿಗಳೆ ಕಾರಣ ಎಂದು ಹೇಳಿದ್ದು, ಸಮುದಾಯವು ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ.
ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ನಡೆಸಲು ಬಿರೇನ್ ಸಿಂಗ್ ಅವರನ್ನು ಸಂಪರ್ಕಿಸಲಾಗಿತ್ತು ಎಂದು ಹೇಳಲಾದ ಆಡಿಯೋ ತುಣುಕುಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಫೆಬ್ರವರಿ 3 ರಂದು ಸುಪ್ರೀಂ ಕೋರ್ಟ್ ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಆದೇಶಿಸಿದೆ. ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್‌ನ ಅರ್ಜಿಯ ಮೇರೆಗೆ ಈ ಆದೇಶವನ್ನು ಕೋರ್ಟ್ ನೀಡಿತ್ತು.
“ಸಂಘರ್ಷ ಹೇಗೆ ಮತ್ತು ಏಕೆ ಪ್ರಾರಂಭವಾಯಿತು” ಎಂಬುದಕ್ಕೆ ಮುಖ್ಯಮಂತ್ರಿಯೇ ಕಾರಣ ಎಂದು ಹೇಳುವ ಆಡಿಯೋ ರೆಕಾರ್ಡಿಂಗ್‌ಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಸಂಘಟನೆ ಕೋರಿತ್ತು.
ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ಪ್ರಶಾಂತ್ ಭೂಷಣ್, ಸ್ವತಂತ್ರ ವಿಧಿವಿಜ್ಞಾನ ಪ್ರಯೋಗಾಲಯ ಟೇಪ್‌ಗಳನ್ನು ಪರಿಶೀಲಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಧ್ವನಿಮುದ್ರಣಗಳಲ್ಲಿ ಕೇಳಿಬಂದ ಧ್ವನಿ ಮುಖ್ಯಮಂತ್ರಿಯವರದು ಎಂದು ಪ್ರಯೋಗಾಲಯವು 93% ಖಚಿತತೆಯೊಂದಿಗೆ ದೃಢಪಡಿಸಿದೆ ಎಂದು ಭೂಷಣ್ ಹೇಳಿದ್ದಾರೆ.
ಇದನ್ನೂಓದಿ: ಪಂಜಾಬ್ ಎಎಪಿ ವಿಭಜನೆಯಾಗಲಿದೆ, 30 ಶಾಸಕರು ಸಂಪರ್ಕದಲ್ಲಿದ್ದಾರೆ : ಕಾಂಗ್ರೆಸ್
ಪಂಜಾಬ್ ಎಎಪಿ ವಿಭಜನೆಯಾಗಲಿದೆ, 30 ಶಾಸಕರು ಸಂಪರ್ಕದಲ್ಲಿದ್ದಾರೆ : ಕಾಂಗ್ರೆಸ್


