ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ತೊರೆಯುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಯು ಪಕ್ಷದ ಹಿರಿಯ ಸದಸ್ಯ ಕೆ.ಸಿ. ತ್ಯಾಗಿ ತುರ್ತು ಪರಿಸ್ಥಿತಿಯನ್ನು ಅಖಿಲೇಶ್ ಅವರಿಗೆ ನೆನಪಿಸಿ ಕಾಂಗ್ರೆಸ್‌ನೊಂದಿಗೆ ಮೈತ್ರಿಯನ್ನು ನೀವೆ ಕೊನೆಗೊಳಿಸಿ ಎಂದು ಹೇಳಿದ್ದಾರೆ. ಬಿಜೆಪಿ ಮೈತ್ರಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಷ್ಟ್ರೀಯ ನಾಯಕ ಜೈ ಪ್ರಕಾಶ್ ನಾರಾಯಣ್ ಅವರ 122 ನೇ ಜನ್ಮ ವಾರ್ಷಿಕೋತ್ಸವದಂದು ಅವರ ಸ್ಮಾರಕಕ್ಕೆ ಭೇಟಿ ನೀಡುವುದನ್ನು ಉತ್ತರ ಪ್ರದೇಶ ಪೊಲೀಸರು ತಡೆದ ನಂತರ ಲಕ್ನೋದಲ್ಲಿನ ತಮ್ಮ ನಿವಾಸದ ಹೊರಗೆ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಯಾದವ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮೈತ್ರಿ
ಇದನ್ನೂಓದಿ: ಫೈರಿಂಗ್ ಅಭ್ಯಾಸದ ವೇಳೆ ಫೀಲ್ಡ್ ಗನ್ ಶೆಲ್ ಸ್ಫೋಟ; ನಾಸಿಕ್‌ನಲ್ಲಿ ಇಬ್ಬರು ಅಗ್ನಿವೀರ್‌ಗಳ ಸಾವು
“ಜೈ ಪ್ರಕಾಶ್ ನಾರಾಯಣ್ ನೇತೃತ್ವದ ಚಳವಳಿಯು ಕಾಂಗ್ರೆಸ್‌ನ ಸರ್ವಾಧಿಕಾರದ ವಿರುದ್ಧವಾಗಿತ್ತು. ಜೂನ್ 25 (1975) ರಂದು ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಅಖಿಲೇಶ್ ಯಾದವ್ ಅವರ ಹೇಳಿಕೆಯು ಅನುಚಿತವಾಗಿದೆ…” ಎಂದು ಕೆಸಿ ತ್ಯಾಗಿ ಹೇಳಿದ್ದಾರೆ.
“ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ತಂದೆ (ಮುಲಾಯಂ ಸಿಂಗ್ ಯಾದವ್) ಮತ್ತು ನಿತೀಶ್ ಕುಮಾರ್ ಇಬ್ಬರೂ ಜೈಲು ಪಾಲಾಗಿದ್ದರು ಎಂದು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ. ಜನರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ ಮತ್ತು ಎಲ್ಲಾ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಉಲ್ಲಂಘಿಸುವ ಪಕ್ಷದೊಂದಿಗೆ ಅವರು ತಮ್ಮ ಪಾಲುದಾರಿಕೆಯನ್ನು ಕೊನೆಗೊಳಿಸಬೇಕು” ಎಂದು ತ್ಯಾಗಿ ಹೇಳಿದ್ದಾರೆ.
ವಿರೋಧ ಪಕ್ಷದ ಇಂಡಿಯಾ ಒಕ್ಕೂಟವನ್ನು ಕಾಂಗ್ರೆಸ್ ಮುನ್ನಡೆಸುತ್ತಿದ್ದು, ಸಮಾಜವಾದಿ ಪಕ್ಷವು ಅದರ ಸದಸ್ಯ ಪಕ್ಷವಾಗಿದೆ. ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಉಭಯ ಪಕ್ಷಗಳು ಸೇರಿ 43 (ಸಮಾಜವಾಗಿ ಪಕ್ಷ-37, ಕಾಂಗ್ರೆಸ್-6) ಕ್ಷೇತ್ರಗಳನ್ನು ಗೆದ್ದಿವೆ. ಮೈತ್ರಿಯು ಬಿಜೆಪಿಯನ್ನು 33 ಕ್ಷೇತ್ರಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. 2019ರಲ್ಲಿ ಬಿಜೆಪಿ 62 ಲೋಕಸಭೆ ಕ್ಷೇತ್ರವನ್ನು ಗೆದ್ದುಕೊಂಡಿತ್ತು, 2014 ರಲ್ಲಿ 71 ಕ್ಷೇತ್ರಗಳು ಬಿಜೆಪಿಯ ವಶದಲ್ಲಿತ್ತು.
ವಿಡಿಯೊ ನೋಡಿ: ಮಂಗಳೂರು ಪೊಲೀಸರೆಂದರೆ ಲಂಚ ಲಂಚ ಲಂಚ. ನನ್ನ ಬಳಿ ಸಾಕ್ಷ್ಯ ಇದೆ.- ಎಡಿಜಿಪಿ ಅಲೋಕ್ ಕುಮಾರ್ ಎದುರು ಮಹಿಳೆಯ ದೂರು.


