ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯ ಮಾಡಿರುವ ಭ್ರಷ್ಟಾಚಾರ ಆರೋಪದ ವಿಚಾರದಲ್ಲಿ, ಬಿಜೆಪಿ ಮತ್ತು ಅದರ ಅಂಧಭಕ್ತರು ಯಾಕೆ ಅದಾನಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಗ್ ಖರ್ಗೆ ಶುಕ್ರವಾರ ಕೇಳಿದ್ದಾರೆ. ಅದಾನಿ ವಿರುದ್ಧದ ಭ್ರಷ್ಟಾಚಾರ ಆರೋಪದಲ್ಲಿ ಬಿಜೆಪಿಯ ನಡೆಯ ಬಗ್ಗೆ ಸಚಿವ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ & ಅಂಧಭಕ್ತರು
ಈ ಬಗ್ಗೆ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ಅದಾನಿ ವಿರುದ್ಧ ಅಮೇರಿಕಾ ನ್ಯಾಯಾಲಯ ಮಾಡಿರುವ ಭ್ರಷ್ಟಾಚಾರದ ಆರೋಪದ ವಿಚಾರದಲ್ಲಿ ಬಿಜೆಪಿ ಮತ್ತು ಅಂಧಭಕ್ತರು ಯಾಕೆ ಸಂವೇಶದನಾಶೀಲರಂತೆ ವರ್ತಿಸುತ್ತಿದ್ದಾರೆ. ಯಾಕೆ ಅದಾನಿ ಗ್ರೂಪ್‌ಅನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ & ಅಂಧಭಕ್ತರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, “ಅದಾನಿಗೂ ಬಿಜೆಪಿಗೂ ಏನು ಸಂಬಂಧ. ಭ್ರಷ್ಟಾಚಾರ ಪ್ರಕರಣದಲ್ಲಿ ಅದಾನಿಯನ್ನು ಅರೆಸ್ಟ್ ಮಾಡಲು ಅಮೆರಿಕ ನ್ಯಾಯಾಲಯ ಹೇಳಿದೆ. ಆದರೆ, ಅದಾನಿಯನ್ನು ಬಿಜೆಪಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದಾನಿ ವಿಚಾರದಲ್ಲಿ ಅಮೆರಿಕದ ಉದ್ಯಮಿಗೆ ಬಿಜೆಪಿಗರು ಯಾಕೆ ಉತ್ತರಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅದಾನಿಗೆ ಗುಂಡಾ ಗುತ್ತಿಗೆ ಕೊಡುತ್ತಿರುವುದರಿಂದಲೇ ಅದಾನಿ ಆ ಮಟ್ಟಿಗೆ ಬೆಳೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ನವೆಂಬರ್ 20 ರಂದು ಅಮೆರಿಕದ ನ್ಯೂಯಾರ್ಕ್ ಪೂರ್ವ ಜಿಲ್ಲೆಯ ನ್ಯಾಯಾಲಯದಲ್ಲಿ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿ ಏಳು ಮಂದಿ ವಿರುದ್ಧ ಅಂಚ ಮತ್ತು ವಂಚನೆ ಪ್ರಕರಣ ದಾಖಲಾಗಿದೆ. ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರ ಷರತ್ತುಗಳನ್ನು ವಿಧಿಸಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಅದಾನಿ 2,019 ಕೋಟಿ ರೂ. ಲಂಚ ನೀಡಿದ್ದಾರೆ.
ಈ ಹಣವನ್ನು ಅಮೆರಿಕದ ಹೂಡಿಕೆದಾರರಿಗೆ ಸುಳ್ಳು ಹೇಳಿ ಸಂಗ್ರಹಿಸಿದ್ದಾರೆ. ಸುಳ್ಳು ಹೇಳುವ ಮೂಲಕ ಅಮೆರಿಕ ಉದ್ಯಮಿಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂದಿನ 20 ವರ್ಷಗಳಲ್ಲಿ ಸುಮಾರು 17,000 ಕೋಟಿ ರೂ. ಲಾಭ ದೊರೆಯುವ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಅದಾನಿ ಲಂಚ ನೀಡಿದ್ದಾರೆ ಎಂದು ಅಮೆರಿಕ ಅರೋಪಿಸಿದೆ.
ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ ಜಂಟಿ ಸಮಿತಿ; ಅಧಿಕಾರಾವಧಿ ವಿಸ್ತರಣೆಗೆ ವಿಪಕ್ಷ ಸದಸ್ಯರ ಒತ್ತಾಯ
ವಕ್ಫ್ ತಿದ್ದುಪಡಿ ಮಸೂದೆ ಜಂಟಿ ಸಮಿತಿ; ಅಧಿಕಾರಾವಧಿ ವಿಸ್ತರಣೆಗೆ ವಿಪಕ್ಷ ಸದಸ್ಯರ ಒತ್ತಾಯ


