Homeಮುಖಪುಟಬಿಜೆಪಿ ಸರ್ಕಾರದ 3 ಕಾಯ್ದೆಗಳು ಮತ್ತು ನೂರೊಂದು ಸುಳ್ಳುಗಳು: ನಾಡಿನ ಜನರಿಗೆ ಸಿದ್ದರಾಮಯ್ಯ ಪತ್ರ

ಬಿಜೆಪಿ ಸರ್ಕಾರದ 3 ಕಾಯ್ದೆಗಳು ಮತ್ತು ನೂರೊಂದು ಸುಳ್ಳುಗಳು: ನಾಡಿನ ಜನರಿಗೆ ಸಿದ್ದರಾಮಯ್ಯ ಪತ್ರ

- Advertisement -
- Advertisement -

ದೇಶದಲ್ಲಿ ಕೊರೋನಾ ಸೋಂಕು ಭೀಕರವಾಗಿ ವ್ಯಾಪಿಸಿಕೊಂಡಿದ್ದಾಗ ಕೇಂದ್ರ ಮತ್ತು ರಾಜ್ಯಗಳಲ್ಲಿನ ಬಿ.ಜೆ.ಪಿ. ಸರ್ಕಾರಗಳು ಜನ ವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, “ಕೊರೊನಾ ಹೆಸರಿನಲ್ಲಿ ದೇಶ ವ್ಯಾಪಿ ಕರ್ಫ್ಯೂ ಹಾಕಿ ಜನತೆಗೆ ಬೀದಿಗೆ ಬರದಂತೆ ಮಾಡಿ ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಜನರನ್ನು ಶತ್ರುಗಳು ಎಂದು ಭಾವಿಸುವ ಸರ್ಕಾರಗಳು ಮಾತ್ರ ಇಂತಹ ಸಂದರ್ಭಗಳನ್ನು ಬಳಸಿಕೊಂಡು ಜನ ವಿರೋಧಿ ಕಾಯ್ದೆಗಳನ್ನು ತರಲು ಸಾಧ್ಯ” ಎಂದು ಹೇಳಿದ್ದಾರೆ.

“ಆದರ, ಸರ್ಕಾರಗಳು ವಿಧಿಸಿದ್ದ ನಿರ್ಬಂಧಗಳನ್ನೂ ಮೀರಿ ಜನ ಬೀದಿಗೆ ಬಂದರು. ರಾಜ್ಯದ ಹಲವಾರು ಸಂಘಟನೆಗಳ ನಾಯಕರು ಕೊರೊನಾಕ್ಕೆ ತುತ್ತಾದರು. ಜನ ನಿರಂತರವಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಸಹ ಈ ಜನ ವಿರೋಧಿ ಸರ್ಕಾರಗಳಿಗೆ ಕಣ್ಣು, ಕಿವಿ ಮುಂತಾದ ಪಂಚೇಂದ್ರಿಯಗಳೆಲ್ಲ ಸತ್ತು ಹೋಗಿವೆ. ಇಂತಹ ಫ್ಯಾಸಿಸ್ಟ್ ರಾಕ್ಷಸರ ಸರ್ಕಾರವನ್ನು ಕಿತ್ತೆಸೆಯುವುದೊಂದೇ ದಾರಿ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ರಾಜ್ಯದ ಬಫೂನ್‌ಗಳು: ಹೆಚ್‌. ವಿಶ್ವನಾಥ್‌‌ ವ್ಯಂಗ್ಯ

ಈ ಕಾರಣದಿಂದಾಗಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಎ.ಪಿ.ಎಂ.ಸಿ. ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳ ಕುರಿತು ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಸೇರಿದಂತೆ ನಾಡಿನ ಪ್ರತಿಯೊಬ್ಬರಿಗೂ ಸಿದ್ದರಾಮಯ್ಯ ಅವರು, “ಬಿ.ಜೆ.ಪಿ ಸರ್ಕಾರದ ಮೂರು ಕಾಯ್ದೆಗಳು ನೂರೊಂದು ಸುಳ್ಳುಗಳು” ಎಂಬ ವರದಿಯೊಂದನ್ನು ಸಿದ್ದಪಡಿಸಿ, ಬಿಜೆಪಿ ಹೇಳುತ್ತಿರುವ ಸುಳ್ಳುಗಳನ್ನು ಒರೆಗೆ ಹಚ್ಚಿದ್ದಾರೆ. ಅವುಗಳು ಕೆಳಗಿನಂತಿದೆ…

ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿರುವ ಸುಳ್ಳುಗಳು

ಕರ್ನಾಟಕ ಭೂ ಸುಧಾರಣಾ ಕಾಯ್ದೆ ಕುರಿತು ಬಿ.ಜೆ.ಪಿ. ಹೇಳುತ್ತಿರುವ ಸುಳ್ಳುಗಳು

ಜಾನುವಾರು ಹತ್ಯೆ ನಿಷೇಧ ಕಾಯ್ದೆ ಕುರಿತು ಬಿ.ಜೆ.ಪಿ. ಹೇಳುತ್ತಿರುವ ಸುಳ್ಳುಗಳು

ಇದನ್ನೂ ಓದಿ: ನಾನು ದನದ ಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ನನ್ನನ್ನು ಕೇಳೋಕೆ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Congress party 1984 sikar hatte
    1984 dce3randu rajiv ghandi haagu Arjuna singh bhopal gas aroopi martin underson farari agalu sahaya madidaru 15000 janar prana hodreu aropi escape sahakaridru siddaramaih mukya
    Mantri adaga 25 hindu karya karatar kole madisiaru

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...