Homeಕರ್ನಾಟಕಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ರಾಜ್ಯದ ಬಫೂನ್‌ಗಳು: ಹೆಚ್‌. ವಿಶ್ವನಾಥ್‌‌ ವ್ಯಂಗ್ಯ

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ರಾಜ್ಯದ ಬಫೂನ್‌ಗಳು: ಹೆಚ್‌. ವಿಶ್ವನಾಥ್‌‌ ವ್ಯಂಗ್ಯ

- Advertisement -
- Advertisement -

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಮುಖಂಡ ಹೆಚ್‌.ಡಿ.ಕುಮಾರಸ್ವಾಮಿಯನ್ನು ಕರ್ನಾಟಕದ ಜನರು ಬಫೂನ್‌ಗಳ ತರ ನೋಡುತ್ತಾರೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಹೆಚ್‌‌.ವಿಶ್ವಾನಾಥ್‌ ವ್ಯಂಗ್ಯವಾಡಿದ್ದಾರೆ.

ಪರಿಷತ್‌‌ನ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಧರ್ಮೇಗೌಡ ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಹೆಚ್​. ವಿಶ್ವನಾಥ್, “ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ಕರ್ನಾಟಕದ ಬಫೂನ್‌‌ಗಳಾಗಿದ್ದು, ಇವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂದು ಅಪಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: ನಾನು ದನದ ಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ನನ್ನನ್ನು ಕೇಳೋಕೆ: ಸಿದ್ದರಾಮಯ್ಯ

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರ ವಿರುದ್ಧವೂ ಕಿಡಿಕಾರಿದ ಹೆಚ್. ವಿಶ್ವನಾಥ್​, “ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ಜೆಡಿಎಸ್​ ಪಕ್ಷದಲ್ಲಿದ್ದ ಅವರನ್ನು ದೇವೇಗೌಡರು ಪಕ್ಷದಿಂದಲೇ ಹೊರ ಹಾಕಿದ್ದರು. ನಂತರ ಅವರು ಕಾಂಗ್ರೆಸ್​ಗೆ ಬಂದರು. ಅಲ್ಲೂ ಅವರೇನು ಹೋರಾಟ ಮಾಡಿಲ್ಲ. ನಾವು ಹೋರಾಟ ಮಾದ್ದೇವೆ, ಅವರು ಮುಖ್ಯಮಂತ್ರಿ ಆದರು. ಬೇಕಿದ್ದರೆ ನಾನೇ ಹೋರಾಟದ ಕುರಿತು ಸಿದ್ದರಾಮಯ್ಯ ಅವರಿಗೆ ಪಾಠ ಮಾಡಲು ಸಿದ್ದನಿದ್ದೇನೆ” ಎಂದು ಹೇಳಿದ್ದಾರೆ.

“ಕುಮಾರಸ್ವಾಮಿ ಧರ್ಮೇಗೌಡ ಅವರ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಅಸಲಿಗೆ ಈ ಇಬ್ಬರೂ ನಾಯಕರು ಯಾಕೆ ಮಾತನಾಡುತ್ತಾರೆ?. ಜನರೇ ಇವರನ್ನು ಬಫೂನ್​ ತರ ನೋಡುತ್ತಿರುವಾಗ ಇವರು ಯಾರಿಗಾಗಿ ಮಾತನಾಡುತ್ತಿದ್ದಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಜೊತೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ವಿಶ್ವನಾಥ್, “ಸಚಿವ ಸಂಪುಟದ ಬಗ್ಗೆ ಎಲ್ಲರೂ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನವಿಡೀ ಮಾತನಾಡುವುದು ಸರಿಯಲ್ಲ. ಹೈಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತೋ, ಅವಾಗ ಸಂಪುಟ ವಿಸ್ತರಣೆ ಆಗುತ್ತದೆ. ಪ್ರತಿ ದಿನ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಬದಲು ಅಭಿವೃದ್ಧಿಯ ಕುರಿತು ಮಾತನಾಡುವುದು ಉತ್ತಮ. ಹಿರಿಯನಾಗಿ ನನ್ನ ಅನುಭವದ ಆಧಾರದ ಮೇಲೆ‌ ಈ ಮಾತು ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ’ನಾ ಕಾವೂಂಗಾ, ನಾ ಕಾನೇ ದೂಂಗಾ’ ಎಂದ ಮೋದಿಗೆ ಯಡಿಯೂರಪ್ಪ ಮೇಲಿನ ಆರೋಪ ಕಣ್ಣಿಗೆ ಕಾಣುತ್ತಿಲ್ಲವೇ?: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...