Homeಮುಖಪುಟ'ಸನಾತನ ಚಿಂತನೆಯ ಮರುಸೃಷ್ಟಿ' ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

‘ಸನಾತನ ಚಿಂತನೆಯ ಮರುಸೃಷ್ಟಿ’ ಪತ್ರಿಕಾ ಜಾಹೀರಾತು: ಬಸವ ತತ್ವದ ಅನುಯಾಯಿಗಳಿಂದ ವ್ಯಾಪಕ ಖಂಡನೆ

"ಯಡಿಯೂರಪ್ಪ ಅವರೆ ನಿಮಗೆ ಅಕ್ಷರದ ಅರಿವಿದ್ದರೆ ವಚನಗಳನ್ನು ಓದಿ. ಅಜ್ಞಾನಿಯಾಗಿದ್ದರೆ ಜ್ಞಾನದ ಶಿಖರ ಮಾದಾರ ಚನ್ನಯ್ಯನ ಮನಯಂಗಳದಲ್ಲಿ ವಿದ್ಯಾರ್ಥಿಯಾಗಿ ಅರಿವು ಪಡೆಯಿರಿ. ಸನಾತನ ಮತ್ತು ಪ್ರಗತಿಪರ ಎಂಬುದು ವಿರುದ್ಧಾರ್ಥಕ ತತ್ವಗಳು"

- Advertisement -
- Advertisement -

ಬಸವಣ್ಣನನ್ನು ಹೈಜಾಕ್ ಮಾಡಲು ಹೊರಟಿರುವ ಮೋದಿ, ಯಡಿಯೂರಪ್ಪ ಮತ್ತು ಬಿಜೆಪಿ ಇಂದು (ಜನವರಿ 6) ಪತ್ರಿಕೆಗಳಿಗೆ ನೀಡಿರುವ ಜಾಹಿರಾತಿನಲ್ಲಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಬಸವ ತತ್ವದ ಪ್ರತಿಪಾದಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸನಾತನ ಮತ್ತು ವೈದಿಕತೆಯನ್ನು ಜೀವನ ಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಬಸವಾದಿ ಶರಣರು, ಇದನ್ನು ತಮ್ಮ ವಚನಗಳಲ್ಲಿಯೂ ವ್ಯಕ್ತಪಡಿಸಿದ್ದರು. ಬಹುಶಃ ಬುದ್ಧನ ನಂತರ ವೈದಿಕತೆಯನ್ನು ಶರಣರಷ್ಟು ಟೀಕಿಸಿದವರು ಮತ್ತೊಬ್ಬರಿಲ್ಲ. ಇಂತಹ ಬಸವಣ್ಣನವರನ್ನು ಅಂದೇ ಇದೇ ವೈದಿಕರು ಕೊಂದಿದ್ದರು. ಆದರೆ ಇಂದು ಬಸವಣ್ಣನವರನ್ನೇ ಹೈಜಾಕ್ ಮಾಡಿ, ಅವರ ಚಿಂತನೆಯೇ ಸನಾತನ ಪ್ರಗತಿಪರ ಚಿಂತನೆ ಎಂದು ಹೇಳುತ್ತಿರುವ ಬಿಜೆಪಿ ಮತ್ತು ಯಡಿಯೂರಪ್ಪನವರ ಧೋರಣೆಯ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ‘ಅನುಭವ ಮಂಟಪ’ದ ಭೂಮಿ ಪೂಜೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಇಂದು ಜಾಹೀರಾತು ನೀಡಿದ್ದು, ಅದರಲ್ಲಿ “ಸನಾನತ ಪ್ರಗತಿಪರ ಚಿಂತನೆಯ ಮರುಸೃಷ್ಟಿ” ಎಂದು ಬರೆಯಲಾಗಿದೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಜಾಮದಾರ್‌ ಮತ್ತು ಕಾರ್ಯದರ್ಶಿ ಜಿ.ಬಿ.ಪಾಟೀಲರು ಸೇರಿದಂತೆ ಹತ್ತಾರು ಚಿಂತಕರು ಈ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಬಸವಣ್ಣನ ಪ್ರತಿಮೆಗೆ ಹಾನಿ ಮಾಡಿದ ದುಷ್ಕರ್ಮಿಗಳು

ಈ ಕುರಿತು ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಜಿ ಬಿ ಪಾಟೀಲರು, “#ಸನಾತನ #ಪ್ರಗತಿಪರ #ಚಿಂತನೆಯ #ಮರುಸೃಷ್ಠಿ. ಏನಿದರ ಅರ್ಥ? ಕ್ರಿ.ಶ 1150 ರ ಸುಮಾರಿಗೆ ಬಸವಾದಿ ಶರಣರು ಸನಾತನವನ್ನು ತೊರೆದು ಸಮ ಸಮಾಜದ ಸಿದ್ಧಾಂತದತ್ತ ಮುಖ ಮಾಡಿದರು. ಸನಾತನದಲ್ಲಿಯ ನ್ಯೂನ್ಯತೆಗಳನ್ನು ಚರ್ಚಿಸಲು ಸ್ಥಾಪಿತವಾಗಿದ್ದು ಅನುಭವ ಮಂಟಪ. ಮಾನವನ ಏಳ್ಗೆಗಾಗಿ ಧರ್ಮ ಇರಬೇಕು ಶೋಷಣೆಗಾಗಿ ಧರ್ಮವನ್ನು ಬಳಸುವದು ಬೇಡವೆಂದು ಬಸವಣ್ಣನವರು ಅಲ್ಲಮ ಪ್ರಭುಗಳೂ ಹಾಗು 770 ಶರಣರು ಮನುಕುಲದ ಎಳಿಗೆಗಾಗಿ ಹೊಸ ಸಿದ್ಧಾಂತಗಳೊಂದಿಗೆ ಲಿಂಗಾಯತ ಧರ್ಮ ಸ್ಥಾಪಿಸಿದರು. ಇಂದು ನಮಗೆ ಸನಾತನ ಅನುಭವ ಮಂಟಪದ ಅವಶ್ಯಕತೆ ಇಲ್ಲ. ನಮಗೆ ಇನ್ನೊಂದು ಸ್ಥಾವರದ ಅವಶ್ಯಕತೆಯೂ ಇಲ್ಲ. ನಮಗೆ ಬೇಕಿರುವದು ಜಂಗಮ (ಬಸವ ಚಿಂತನೆಗಳನ್ನು ಅಳವಡಿಸಲು, ಚರ್ಚಿಸಲು ಕಟ್ಟಡ ಬೇಕಾಗಿದೆ) ಬಸವ ಚಿಂತನೆಗಾಗಿ ಸ್ಥಳ ಬೇಕಿರುವದು. ಯಡಿಯೂರಪ್ಪನವರ ಸರಕಾರ ಬಸವ ಚಿಂತನೆಗೆ ಅವಕಾಶ ಮಾಡಿಕೊಡುತ್ತಿದೆಯಲ್ಲ ಎಂದು ಸಂತೋಷ ಪಟ್ಟಿದ್ದೆವು. ಅವರು ನಮಗೆ ಮತ್ತೊಂದು ಸ್ಥಾವರವನ್ನು ನೀಡುತ್ತಿದ್ದಾರೆಂದೂ ಅದರಲ್ಲಿಯೂ #ಬಿಕ್ಷೆ# ಎಂಬಂತೆ, ಸನಾತನ ಪ್ರಗತಿಪರ ಚಿಂತನೆಯ ಅಂದರೆ ಬಸವಣ್ಣನವರ ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ಅವರು ಸಿದ್ಧಾಂತಗಳು “ಸನಾತನ ಸಿದ್ಧಾಂತದ ಪ್ರಗತಿಪರ ಚಿಂತನೆ” ಎಂಬುದನ್ನು ನಾವು ಒಪ್ಪುವದಿಲ್ಲ. ಅದನ್ನು ಖಂಡಿಸುತ್ತೆವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ನೀಲಾ ಕೆ ಗುಲ್ಬರ್ಗ ಎಂಬುವವರು, “#ಧಿಕ್ಕಾರಯಡಿಯೂರಪ್ಪಮೋದಿಬಿಜೆಪಿ# “ವೇದಕ್ಕೆ ಒರೆಯ ಕಟ್ಟಿದರು, ಶಾಸ್ತ್ರಕ್ಕೆ ನಿಗಳವನಿಕ್ಕಿದರು. ತರ್ಕದ ಬೆನ್ನ ಬಾರನೆತ್ತಿದರು ನಮ್ಮ ಶರಣರು. ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸುಳ್ಳರ ಸಂತೆ, ತರ್ಕವೆಂಬುದು ತಗರ ಹೋರಟೆ” ಎಂದರು ನಮ್ಮ ಬಸವಣ್ಷ ಮತ್ತು ಎಲ್ಲ ಶರಣರು. ಅಂದರೆ ಸನಾತನಿ ತತ್ವವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದರ್ಥ. “ಮಾದಾರ ಚನ್ನಯ್ಯನ ಮನೆಯ ದಾಸಿಯ ಮಗ ಡೋಹಾರ ಕಕ್ಕಯ್ಯನ ಮನೆಯ ದಾಸಿಯ ಮಗಳು ಬೆರಣಿಗೆಂದು ಹೋಗಿ ಸಂಗವ ಮಾಡಿದಲ್ಲಿ ಅವರಿಗೆ ಹುಟ್ಟಿದ ಮಗ ತಾನು” ಎಂದು ಘೋಷಿಸುವ ಮೂಲಕ ಬ್ರಾಹ್ಮಣ್ಯದ ಚಾತುರ್ವರ್ಣ ವ್ಯವಸ್ಥೆಯ ಕ್ರೌರ್ಯವನ್ನು ಧಿಕ್ಕರಿಸಿ ಮನುಷ್ಯ ತತ್ವವನ್ನು ಸಮಾನತಾ ತತ್ವವನ್ನು ನಡೆ ನುಡಿಯಲ್ಲಿ ಜಾರಿಗೊಳಿಸಿದವರು ಬಸವಣ್ಣನವರು. ಯಡಿಯೂರಪ್ಪ ಅವರೆ ನಿಮಗೆ ಅಕ್ಷರದ ಅರಿವಿದ್ದರೆ ವಚನಗಳನ್ನು ಓದಿ. ಅಜ್ಞಾನಿಯಾಗಿದ್ದರೆ ಜ್ಞಾನದ ಶಿಖರ ಮಾದಾರ ಚನ್ನಯ್ಯನ ಮನಯಂಗಳದಲ್ಲಿ ವಿದ್ಯಾರ್ಥಿಯಾಗಿ ಅರಿವು ಪಡೆಯಿರಿ. ಸನಾತನ ಮತ್ತು ಪ್ರಗತಿಪರ ಎಂಬುದು ವಿರುದ್ಧಾರ್ಥಕ ತತ್ವಗಳು. ಅವುಗಳನ್ನು ಒಟ್ಟುಗೂಡಿಸುವ ನಿಮ್ಮ ಸಂಘಿ ವಿಚಾರಗಳು ಲಿಂಗಾಯತ ತತ್ವವನ್ನು ನಾಶ ಮಾಡುವ ಹುನ್ನಾರ ಹೊಂದಿವೆ. ವಚನಗಳೊಳಗೆ ಸನಾತನ ವಿಚಾರಗಳಿಗೆ ಪ್ರವೇಶ ಸಿಗದು ಎನ್ನುವ ಕಾರಣಕ್ಕೆ ಸ್ಥಾವರ ಕಟ್ಟಿ ಅದಕ್ಕೆ ಸನಾತನ ಚಿಂತನೆಗಳ ಪ್ರೋಕ್ಷಣೆ ಮಾಡಿ ಜನತೆಯನ್ನು ದಿಕ್ತಪ್ಪಿಸಲು ಹೊರಟಿರುವಿರಿ. ಬಸವಾದಿ ಪ್ರಥಮರ ತತ್ವ ಒಪ್ಪಿದವರೆಲ್ಲ ನಿಮ್ಮ ಈ ಷಡ್ಯಂತ್ರ ಅರಿಯುವರು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ನೆನಪಿಡಿ. ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಡಿ ಎಂಬ ಶರಣತತ್ವವಿರೋಧಿ ನಿಲುವಿಗೆ ಇದೋ ನಮ್ಮೆಲ್ಲರ ಧಿಕ್ಕಾರ” ಎಂದು ಯಡಿಯೂರಪ್ಪನವರ ನಿಲುವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರ ಈ ನಡೆಯನ್ನು ವಿರೋಧಿಸಿ ಹತ್ತಾರು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಇದನ್ನೂ ಓದಿ: ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಇದನ್ನೂ ಓದಿ: ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಇದನ್ನೂ ಓದಿ: ಶರಣ ಚಳವಳಿ ನುಡಿ ಬಳಕೆಯ ಪಾಠಗಳು ಮತ್ತು ಕನ್ನಡ ರಾಶ್ಟ್ರೀಯತೆ: ಡಾ.ರಂಗನಾಥ್ ಕಂಟನಕುಂಟೆ

ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರ ಮಾಡಿರುವ ಈ ಪ್ರಮಾದವನ್ನು ಒಂದು ಅವಮಾನ ಎಂದು ಜರಿಯುವುದಕ್ಕಿಂತ ಇದರ ಹಿಂದಿರುವ ಮತ್ತೊಂದು ದೊಡ್ಡ ಅಪಾಯವನ್ನು ನಾವೆಲ್ಲರೂ ಮನಗಾಣಬೇಕಿದೆ. ಇಲ್ಲದಿದ್ದರೆ ಈಗಾಗಲೇ ಬುದ್ದನನ್ನು ಹತ್ತನೇ ಅವತಾರ ಎಂದವರು ಬಸವಣ್ಣನವರೆಗೆ ಬರಲು ಹೇಸುವುದಿಲ್ಲ. ಹೀಗೆ ಬರುವುದರ ಮೊದಲ ಹೆಜ್ಜೆಯೇ ಈ ಜಾಹೀರಾತು. ಇದನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಿದೆ.


ಇದನ್ನೂ ಓದಿ: ಕಾಯಕ ಸಿದ್ಧಾಂತವೆಂಬ ಅಭಿವೃದ್ಧಿ ಪ್ರಣಾಳಿಕೆ : ಡಾ.ಟಿ.ಆರ್ ಚಂದ್ರಶೇಖರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...