ಬಿಜೆಪಿ ಹರಡುವ ನಿರುದ್ಯೋಗದ ರೋಗವು ಹರಿಯಾಣದ ಭದ್ರತೆ ಮತ್ತು ಯುವಕರ ಭವಿಷ್ಯವನ್ನು “ತೀವ್ರವಾಗಿ ಅಪಾಯ” ದಲ್ಲಿ ಸಿಲುಕಿಸಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಿಡಿದರೆ ಕಾಂಗ್ರೆಸ್ ಸರ್ಕಾರವು ಯುವಕರಿಗೆ ಉದ್ಯೋಗವನ್ನು ಹಿಂದಿರುಗಿಸುತ್ತದೆ ಎಂದು ಪ್ರತಿಪಾದಿಸಿದ ಅವರು, ಪ್ರತಿ ಕುಟುಂಬವು ರಾಜ್ಯದಲ್ಲಿ ಸಮೃದ್ಧವಾಗಲಿದೆ ಎಂದು ಹೇಳಿದ್ದಾರೆ.ಬಿಜೆಪಿ ಹರಿಯಾಣದಲ್ಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತಮ್ಮ ಇತ್ತೀಚಿನ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದ ಮಹಿಳೆಯರ ಗುಂಪಿನೊಂದಿಗೆ ನಡೆಸಿದ ಸಂವಾದದ ವೀಡಿಯೊವನ್ನು ಎಕ್ಸ್‌ನಲ್ಲಿ ರಾಹುಲ್ ಗಾಂಧಿಯವರು ಹಂಚಿಕೊಂಡಿದ್ದಾರೆ. ವೀಡಿಯೊ ಜೊತೆಗೆ ತಮ್ಮ ಪೋಸ್ಟ್‌ನಲ್ಲಿ, “ಬಿಜೆಪಿ ಹರಡುವ ನಿರುದ್ಯೋಗ ರೋಗವು ಹರಿಯಾಣದ ಬೇರುಗಳನ್ನು, ಯುವಕರ ಭವಿಷ್ಯ ಮತ್ತು ರಾಜ್ಯದ ಭದ್ರತೆಯನ್ನು ತೀವ್ರವಾಗಿ ಅಪಾಯದಲ್ಲಿ ಸಿಲುಕಿಸಿದೆ” ಎಂದು ಹೇಳಿದ್ದಾರೆ.
भाजपा की फैलाई बेरोज़गारी की बीमारी ने हरियाणा की जड़ों, युवाओं के भविष्य और प्रदेश की सुरक्षा को गहरे संकट में डाल दिया है।
हरियाणा की कुछ बहनों ने विजय संकल्प यात्रा के दौरान आश्रय दिया, बहुत प्यार से घर की रोटी खिलाई और साथ ही प्रदेश की जटिल समस्याएं समझाईं।
आज, भारत में… pic.twitter.com/A4V3EZGolB
— Rahul Gandhi (@RahulGandhi) October 4, 2024
“ಹರಿಯಾಣದ ಕೆಲವು ಸಹೋದರಿಯರು ವಿಜಯ್ ಸಂಕಲ್ಪ ಯಾತ್ರೆಯ ಸಮಯದಲ್ಲಿ ನಮಗೆ ಆಶ್ರಯ ನೀಡಿದರು. ಮನೆಯ ರೊಟ್ಟಿಗಳನ್ನು ಬಹಳ ಪ್ರೀತಿಯಿಂದ ತಿನ್ನಿಸಿದರು ಮತ್ತು ರಾಜ್ಯದ ಸಂಕೀರ್ಣ ಸಮಸ್ಯೆಗಳನ್ನು ವಿವರಿಸಿದರು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿರುವ ರಾಜ್ಯವಾಗಿ ಹರಿಯಾಣ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಒಳ ಮೀಸಲಾತಿ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
”ಕಳೆದ ಒಂದು ದಶಕದಲ್ಲಿ ರಾಜ್ಯದ ಯುವಕರಿಗೆ ಉದ್ಯೋಗ ನೀಡುವ ಪ್ರತಿಯೊಂದು ವ್ಯವಸ್ಥೆಯ ಬೆನ್ನೆಲುಬನ್ನು ಬಿಜೆಪಿ ಮುರಿದಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೋಷಪೂರಿತ ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ ಮೂಲಕ ಬಿಜೆಪಿ ಸಣ್ಣ ಉದ್ಯಮಗಳ ಬೆನ್ನು ಮುರಿದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಜೊತೆಗೆ ಅಗ್ನಿವೀರ್ ತಂದು ಸೇನೆಗೆ ತಯಾರಿ ನಡೆಸುತ್ತಿರುವ ಯುವಕರ ಉತ್ಸಾಹವನ್ನು ಕೂಡಾ ಬಿಜೆಪಿ ಮುರಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಹರಿಯಾಣದಲ್ಲಿ
ಕರಾಳ ಕಾನೂನುಗಳ ಮೂಲಕ ಕೃಷಿ ವ್ಯಾಪಾರ ಮಾಡುವವರ ಧೈರ್ಯವನ್ನು ಬಿಜೆಪಿ ಮುರಿದಿದೆ. ಬೆಂಬಲವನ್ನು ಕಸಿದುಕೊಳ್ಳುವ ಮೂಲಕ ಕ್ರೀಡಾಪಟುಗಳ ಕನಸುಗಳನ್ನು ಮುರಿದಿದೆ. ‘ಪರಿವಾರ ಪೆಹಚಾನ್ ಪತ್ರ’ದೊಂದಿಗೆ ಸರ್ಕಾರಿ ನೇಮಕಾತಿಯನ್ನು ನಿಲ್ಲಿಸುವ ಮೂಲಕ ಕುಟುಂಬಗಳನ್ನು ಒಡೆಯುವಂತೆ ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಬಿಜೆಪಿಯ ಕೃತ್ಯದ ಪರಿಣಾಮ, ಯುವ ಪ್ರತಿಭೆಗಳು ಮಾದಕ ದ್ರವ್ಯಗಳ ಹಿಡಿತದಲ್ಲಿ ವ್ಯರ್ಥವಾಗುತ್ತಿವೆ. ನಿರಾಶೆಗೊಂಡ ಯುವಕರು ಅಪರಾಧದ ಹಾದಿ ಹಿಡಿಯುತ್ತಿದ್ದಾರೆ. ಡಂಕಿಯಂತಹ ಅಪಾಯಗಳ ಪ್ರಯಾಣದಿಂದ ಕುಟುಂಬಗಳು ನಾಶವಾಗುತ್ತಿವೆ” ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರ 2 ಲಕ್ಷ ಖಾಯಂ ಉದ್ಯೋಗಗಳನ್ನು ನೇಮಕ ಮಾಡಿ ಹರಿಯಾಣವನ್ನು ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ವಿಡಿಯೊ ನೋಡಿ: ‘ಅಂಬೇಡ್ಕರ್ ರಚಿಸಲಿದ್ದ ಸಂವಿಧಾನವನ್ನು ಗುರಿಯಾಗಿಸಿಕೊಂಡಿದ್ದವರ ಮೊದಲ ಗುಂಡು ಬಿದ್ದಿದ್ದು ಗಾಂಧಿ ಎದೆಗೆ’: ಎ ನಾರಾಯಣ


