ಶನಿವಾರ ನಿಧನರಾದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಆದರೆ, ಅಂತಿಮ ನಮನದ ವೇಳೆ ಪ್ರಧಾನಿ ಮೋದಿ ಸಮ್ಮುಖದಲ್ಲೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಇದೀಗ ವಿವಾದವೊಂದು ಎದ್ದಿದೆ. ಕಲ್ಯಾಣ್ ಸಿಂಗ್ ಅವರ ಪಾರ್ಥೀವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಹಾಕಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಹಲವಾರು ಜನರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದಾರೆ.
ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿ ಕೂಡಾ ಆಗಮಿಸಿದ್ದರು. ಈ ವೇಳೆಯೇ, ಅವರ ಎದುರಲ್ಲೇ ಕಲ್ಯಾಣ್ ಸಿಂಗ್ ಪಾರ್ಥಿವ ಶರೀರದ ಮೇಲೆ ಇದ್ದ ಭಾರತದ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಹೊದಿಸಲಾಗಿದೆ. ಇದರ ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ, ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಲವರು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ್ದರು. ಇದು ಭಾರತದ ತ್ರಿವರ್ಣ ಧ್ವಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ಕಲ್ಯಾಣ್‍ಸಿಂಗ್‍ಗೆ ಸಮನ್ಸ್ ನೀಡಲು ಸಿಬಿಐ ಸಿದ್ದತೆ
ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿರುವ ಡಾ. ಆಶಿಶ್ ದಿಕ್ಷಿತ್, “ದೇಶದ ಪ್ರಧಾನಿಯ ಮುಂದೆಯೆ ಬಿಜೆಪಿಯ ಧ್ವಜವನ್ನು ತ್ರಿವರ್ಣ ಧ್ವಜದ ಮೇಲೆ ಹಾಕಲಾಯಿತು. ಇದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನವಲ್ಲವೇ? ಬಿಜೆಪಿ ಕಾರ್ಯಕ್ರರ ಜೊತೆ ದೇಶಪ್ರೇಮಿ ಮತ್ತು ದೇಶದ್ರೋಹಿ ಸರ್ಟಿಫಿಕೇಟ್ ಹಂಚುವ ಲೈಸನ್ಸ್ ಹೊಂದಿದ್ದಾರೆ. ಅವರು ಈ ಬಗ್ಗೆ ಏನು ಹೇಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
देश के प्रधानमंत्री के सामने तिरंगे के ऊपर भारतीय जनता पार्टी के झंडे को रखा गया,,
क्या यह तिरंगे का अपमान नहीं है??
भाजपा के कार्यकर्ता जिनके पास देश प्रेमी और देशद्रोही सर्टिफिकेट बांटने का लाइसेंस है,
क्या वह इस पर कुछ बोलेंगे pic.twitter.com/1rSjiEdDro— Dr. Ashish Dixit (@dr_ashishINC) August 22, 2021
ಯೂತ್ ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್, “ಹೊಸ ಭಾರತದಲ್ಲಿ ಪಕ್ಷದ ಧ್ವಜವನ್ನು ಭಾರತದ ಧ್ವಜದ ಮೇಲೆ ಇಡುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ.
Is it ok to place party flag
over Indian flag in New India? pic.twitter.com/UTkfsTwUzz— Srinivas BV (@srinivasiyc) August 22, 2021
ಇದನ್ನೂ ಓದಿ: ಹೆಚ್ಚು ಪಡಿತರಕ್ಕಾಗಿ 20 ಮಕ್ಕಳನ್ನು ಹೆರಬಾರದೆ..? ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ತಿರತ್ ಸಿಂಗ್ ರಾವತ್
ಟ್ರೈಬಲ್ ಆರ್ಮಿ ಎಂಬ ಅಧೀಕೃತ ಟ್ವಿಟರ್ ಖಾತೆ, “ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಇರಿಸಿದರು. ಇದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ. ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ನಡ್ಡಾ ಕ್ಷಮೆ ಕೇಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದೆ.
BJP President @JPNadda places BJP party flag over the Tiranga. This is an insult to our national flag Tiranga. Shameful act Nadda should apologize. #BJPinsultedIndianFlag pic.twitter.com/Tkedpf6l2Y
— Tribal Army (@TribalArmy) August 22, 2021
ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಅವರು ರಾಷ್ಟ್ರಧ್ವಜದ ಧ್ವಜ ಸಂಹಿತೆ ಏನು ಹೇಳುತ್ತದೆ ಎಂದು ತಮ್ಮ ಟ್ವಿಟ್‌ನಲ್ಲಿ ತಿಳಿಸಿದ್ದಾರೆ. ಅವರ ಟ್ವೀಟ್‌ನಂತೆ, “ ಭಾರತದ ಧ್ವಜ ಸಂಹಿತೆಯ ಪ್ರಕಾರ, ‘ಇತರ ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರ ಅಥವಾ ರಾಷ್ಟ್ರಧ್ವಜಕ್ಕಿಂತ ಮೇಲೆ ಹಾಗೂ ರಾಷ್ಟ್ರಧ್ವಜಕ್ಕೆ ಸರಿಸಮಾನವಾರಿ ಇಡಬಾರದು’ ಎಂದು ಹೇಳುತ್ತದೆ. ಬಿಜೆಪಿಗೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
According to flag code of India:
“No other flag should be placed higher than or above or side by side with the National Flag.”
“किसी दूसरे ध्वज या पताका को राष्ट्रीय ध्वज से ऊँचा या ऊपर नहीं लगाया जाएगा, न ही बराबर में रखा जाएगा”
Shame on BJP pic.twitter.com/BO7556U614
— Shyam Meera Singh (@ShyamMeeraSingh) August 22, 2021
ಇದನ್ನೂ ಓದಿ: ಹೆಸರು ಬದಲಾವಣೆ ಮುಂದುವರೆಸಿದ ಬಿಜೆಪಿ: ಉತ್ತರ ಪ್ರದೇಶದ ಅಲಿಗಢ ಮರುನಾಮಕರಣಕ್ಕೆ ಪ್ರಸ್ತಾಪ
As one who had to fight a court case for four years merely for placing my hand on my heart during the singing of the National Anthem (rather than standing stiffly to attention),I think the nation should be told how the ruling party feels about this insult: https://t.co/F4nO2wKOOz
— Shashi Tharoor (@ShashiTharoor) August 22, 2021
ಚಿತ್ರವೊಂದನ್ನು ರೀಟ್ವಿಟ್ ಮಾಡಿರುವ ಮತ್ತೊಬ್ಬರು, “ಈ ಚಿತ್ರದ ಅರ್ಥ ಕಲ್ಯಾಣ್ ಸಿಂಗ್ ತಮ್ಮ ದೇಶಕ್ಕಿಂತ ಪಕ್ಷವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದರು ಎಂದಾಗಿದೆ. ನಿಮಗೆ ಸಂಶಯವಿದ್ದರೆ ಬಾಬರಿ ಮಸೀದಿ ಒಡೆದ ಘಟನೆಯನ್ನು ಒಮ್ಮೆ ನೋಡಿ” ಎಂದು ಟ್ವೀಟ್ ಮಾಡಿದ್ದಾರೆ.
Means, He was more commited to the party values than nations. If any doubt then remember babri masjid episode . https://t.co/Lew0xCqOga
— Anshuman Srivastava (@replyanshu) August 22, 2021
ಇದನ್ನೂ ಓದಿ: ಬಾಬರಿ ಮಸೀದಿ ಒಡೆದ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಯುಪಿ ಉಪಲೋಕಾಯುಕ್ತರಾಗಿ ನೇಮಕ


