Homeಮುಖಪುಟಬಿಜೆಪಿ ಆಗ ಬ್ರಿಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ: ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

ಬಿಜೆಪಿ ಆಗ ಬ್ರಿಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ: ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

ಬಿಜೆಪಿ ಪರಿವಾರದ ಒಂದು ನಾಯಿ ಕೂಡ ದೇಶಕ್ಕಾಗಿ ಹುತಾತ್ಮರಾದ ಚರಿತ್ರೆ ಇಲ್ಲ. ಈ ಪಾಪಪ್ರಜ್ಞೆಯಿಂದ ಹೊರಗೆ ಬರಲಾರದ ಆತ್ಮವಂಚನೆ ಅವರದು...

- Advertisement -
- Advertisement -

‘ಕಾಂಗ್ರೆಸ್ ಗುಲಾಮಗಿರಿ ಪಕ್ಷ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ಕಾಂಗ್ರೆಸ್ ವಕ್ತಾರ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದು, “ಬಿಜೆಪಿ ಆಗ ಬ್ರೀಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ” ಎಂದು ಕಿಡಿಕಾರಿದ್ದಾರೆ.

ಸೆಪ್ಟಂಬರ್ 27 ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ “ಬಿಜೆಪಿ ತಾಲಿಬಾನ್ ಇದ್ದ ಹಾಗೆ” ಎಂಬ ಮಾತಿಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಬೊಮ್ಮಾಯಿ, “ಕಾಂಗ್ರೆಸ್ ಗುಲಾಮಗಿರಿ ಪಕ್ಷ, ನಮ್ಮ ಬಿಜೆಪಿ ದೇಶಭಕ್ತ ಪಕ್ಷ” ಎಂದು ಹೇಳಿದ್ದರು. ಈ ಕುರಿತು ಚರ್ಚೆಗೆ ಬನ್ನಿ ಎಂದು ಪ್ರಕಾಶ್ ರಾಥೋಡ್ ಆಹ್ವಾನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಇತಿಹಾಸ ಇರುವ ಬಿಜೆಪಿ ಪರಿವಾರ ಬಳಿಕ ನಾಜಿಗಳ ಗುಲಾಮಗಿರಿ ಮಾಡಿ ಈಗ ವರ್ತಮಾನದಲ್ಲೂ ಅಂಬಾನಿ ಅದಾನಿ ಕಾರ್ಪೋರೇಟ್ ಶಾಹಿಯ ಗುಲಾಮಗಿರಿ ಮಾಡುತ್ತಿದೆ” ಎಂದಿದ್ದಾರೆ.

ಆತ್ಮವಂಚನೆಗೂ ಒಂದು ಮಿತಿ ಇರಬೇಕು ಮುಖ್ಯಮಂತ್ರಿಗಳೇ… ಸಂಘ ಪರಿವಾರ ವಿರೋಧಿ ಜನತಾ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದ ನೀವು ದೇಶಭಕ್ತಿಯ ಚರಿತ್ರೆ, ಇತಿಹಾಸವೇ ಇಲ್ಲದ ಬಿಜೆಪಿಯನ್ನು ದೇಶಭಕ್ತಿಯ ಪಕ್ಷ ಎಂದು ಕರೆಯುತ್ತಿರುವುದು ಆತ್ಮವಂಚನೆ ಅಲ್ಲವೇ ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ, ಕ್ವಿಟ್ ಚಳವಳಿಯಲ್ಲಿ ಭಾವಹಿಸಿದ ಸ್ವಾತಂತ್ರ್ಯ ವೀರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ಬಿಜೆಪಿ ನಾಯಕರ ಚರಿತ್ರೆಯನ್ನು ನೀವು ಮುಖ್ಯಮಂತ್ರಿ ಆದ ಎರಡು ತಿಂಗಳಲ್ಲೇ ಮರೆತುಬಿಟ್ಟಿರಾ ಎಂದು ರಾಥೋಡ್ ಪ್ರಶ್ನಿಸಿದ್ದಾರೆ.

ಬಸವರಾಜ್ ಬೊಮ್ಮಾಯಿಯವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಥೋಡ್‌ರವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. “ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಹುಟ್ಟಿಕೊಂಡ, ಸ್ವಾತಂತ್ರ್ಯ ಚಳವಳಿ ಮೂಲಕವೇ ದೇಶದ ಜನಮಾನಸದಲ್ಲಿ ಬೇರು ಬಿಟ್ಟ ಕಾಂಗ್ರೆಸ್ಸನ್ನು ಗುಲಾಮಗಿರಿ ಪಕ್ಷ ಎಂದು ಕರೆದಿದ್ದೀರಿ. ಬ್ರಿಟಿಷರ ವಿರುದ್ಧ ಹೋರಾಡಿ, ಹುತಾತ್ಮರಾಗಿ, ಜೈಲು ಸೇರಿ, ತಮ್ಮ ಆಸ್ತಿ ಪಾಸ್ತಿಯನ್ನೆಲ್ಲಾ ದೇಶಕ್ಕೆ ಬಿಟ್ಟುಕೊಟ್ಟ ಲಕ್ಷಾಂತರ ಮಂದಿ ಕಾಂಗ್ರೆಸ್ಸಿನವರು. ಈ ಚರಿತ್ರೆ ಬಿಜೆಪಿಗೆ ಇದೆಯೇ? ಬ್ರಿಟಿಷರ ಗುಲಾಮಗಿರಿ ಮಾಡಿಕೊಂಡಿದ್ದ ಬಿಜೆಪಿಯ ಚರಿತ್ರೆ ನಿಮಗೆ ಮುಖ್ಯಮಂತ್ರಿ ಕುರ್ಚಿ ಸಿಕ್ಕ ತಕ್ಷಣ ಅಳಿಸಿ ಹೋಗುತ್ತದೆಯೇ” ಎಂದಿದ್ದಾರೆ.

ಗೋಡ್ಸೆಯಿಂದ ಕೊಲೆಯಾದ ಮಹಾತ್ಮಗಾಂಧಿ, ಅಖಂಡ ಭಾರತಕ್ಕಾಗಿ ಖಲಿಸ್ತಾನ ಉಗ್ರರನ್ನು ಸದೆ ಬಡಿದು ಅವರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಇಂದಿರಾಗಾಂಧಿ, LTTEಗೆ ಹುತಾತ್ಮರಾದ ರಾಜೀವ್ ಗಾಂಧಿ ಯಾರಿಗಾಗಿ ಹುತಾತ್ಮರಾದರು? ಅಂಬಾನಿ- ಅದಾನಿಯ ಗುಲಾಮಗಿರಿ ಮಾಡಿಕೊಂಡಿರುವ ನಿಮ್ಮ ಪರಿವಾರದ ನಾಯಕರಿಗೆ ಕೇಳಿ ಹೇಳಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಪರಿವಾರದ ಒಂದು ನಾಯಿ ಕೂಡ ದೇಶಕ್ಕಾಗಿ ಹುತಾತ್ಮರಾದ ಚರಿತ್ರೆ ಇಲ್ಲ. ಈ ಪಾಪಪ್ರಜ್ಞೆಯಿಂದ ಹೊರಗೆ ಬರಲಾರದ ಆತ್ಮವಂಚನೆ ಮತ್ತು ದೇಶದ್ರೋಹವನ್ನೇ ಆಚರಿಸುತ್ತಿರುವ ಬಿಜೆಪಿ ಪರಿವಾರ ಸ್ವಾತಂತ್ರ್ಯ ಬಂದ ನಂತರವಾದರೂ ದೇಶಭಕ್ತಿ ರೂಢಿಸಿಕೊಂಡ, ದೇಶಭಕ್ತಿ ಆಚರಿಸಿದ ಉದಾಹರಣೆ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದ್ದರೂ ನಿಮ್ಮ ಸಂಘ ಪರಿವಾರದ ಕಚೇರಿ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದೂ ದೇಶದ ತ್ರಿವರ್ಣ ಬಾವುಟ ಹಾರಿಸುವುದಿಲ್ಲ. ಇದಕ್ಕಿಂತ ದೇಶದ್ರೋಹ ಬೇರೆ ಇದೆಯೇ ? ನೀವೇಕೆ ಭಾರತದ ಧ್ವಜ ಹಾರಿಸದೆ ಏಕಿನ್ನೂ ಬ್ರಿಟಿಷರ ಗುಲಾಮಗಿರಿ ಮನಸ್ಥಿಯಿಂದ ಹೊರಗೆ ಬಂದಿಲ್ಲ ಎಂದು ನಿಮ್ಮ ಪರಿವಾರದ ನಾಯಕರನ್ನು ಪ್ರಶ್ನಿಸಿದ್ದೀರಾ? ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಕಾಲದಲ್ಲಿ ಕಟ್ಟಿದ ವಿಮಾನ-ರೈಲು ನಿಲ್ದಾಣಗಳು, ಬಂದರುಗಳು, ಟೆಲಿಕಾಂ, ಹೆದ್ದಾರಿಗಳು, ಕೃಷಿ ಮಾರುಕಟ್ಟೆಗಳನ್ನು ಖಾಸಗಿ ಕಾರ್ಪೋರೇಟ್ ಗಳಿಗೆ ಮಾರಾಟ ಮಾಡುವುದೇ ದೇಶಭಕ್ತಿ ಎಂದು ನಿಮಗೆ ಹೇಳಿಕೊಟ್ಟಿದ್ದು ನಿಮ್ಮ ಪರಿವಾರದ ನಾಯಕರೇ? ಅಂಬಾನಿ, ಅದಾನಿ ಹಾಗೂ ನಿಮ್ಮ ನಾಲ್ಕೈದು ಮಂದಿ ಕಾರ್ಪೋರೇಟ್ ಸ್ನೇಹಿತರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡುವುದು ದೇಶಭಕ್ತಿಯೇ? ಮೋದಿ ಅವರು ಪ್ರಧಾನಿ ಆಗುವ ಮೊದಲು ಭಾರತದ ಸಾಲ ಇದ್ದದ್ದು 53.11 ಲಕ್ಷ ಕೋಟಿ. ಮೋದಿ ದರ್ಬಾರಿನ 7 ವರ್ಷಗಳಲ್ಲಿ ದೇಶದ ಸಾಲ 135 ಲಕ್ಷ ಕೋಟಿಗೆ ಏರಿಸಿದ್ದೀರಿ. ದೇಶದ ಪ್ರತಿಯೊಬ್ಬ ಪ್ರಜೆ ತಾನು ದುಡಿದ 100 ರೂಪಾಯಿಯಲ್ಲಿ 35-45 ರೂಪಾಯಿಯನ್ನು ಪ್ರತ್ಯಕ್ಷ- ಪರೋಕ್ಷ ತೆರಿಗೆ ಕಟ್ಟುತ್ತಿದ್ದಾನೆ. ಪ್ರತಿಯೊಬ್ಬ ಭಾರತೀಯನನ್ನು ಇಂಚಿಂಚಾಗಿ ಸುಲಿಯುತ್ತಾ ರಕ್ತ ಹೀರುತ್ತಿರುವುದು ದೇಶಭಕ್ತಿಯೇ ಎಂದು ಪ್ರಶ್ನಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದು ಕೊಟ್ಟು/ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಬ್ರಿಟಿಷರ ಗುಲಾಮರಾದಿರಿ. ನಿಮ್ಮ ಪರಿವಾರದ ಸಿದ್ದಾಂತ ಜರ್ಮನಿಯ ನಾಜಿಗಳದ್ದು. ಸೈದ್ಧಾಂತಿಕವಾಗಿಯೂ ನೀವು ನಾಜಿ ಗುಲಾಮರು. ಸ್ವಾತಂತ್ರ್ಯಾ ನಂತರದಲ್ಲಿ ಅಂಬಾನಿ ಮತ್ತು ಅದಾನಿ ಗ್ಯಾಂಗಿನ ಗುಲಾಮಗಿರಿ ಮಾಡುತ್ತಿರುವವರು ನೀವು ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: ಮೈಸೂರು ದೇವಾಲಯ ಧ್ವಂಸ – ತಹಶೀಲ್ದಾರ್‌ ತಲೆದಂಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...