ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ, “ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಹಿಳೆಯರ ಲೈಂಗಿಕ ಶೋಷಣೆಯಲ್ಲಿ ತೊಡಗಿದ್ದಾರೆ. 5 ಸ್ಟಾರ್ ಹೋಟೆಲ್‌ಗಳು ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲೂ ನೀಚ ಕೃತ್ಯವೆಸಗಿದ್ದಾರೆ ಎಂದು ಆರ್‌ಎಸ್‌ಎಸ್ ಸದಸ್ಯ ಶಾಂತನು ಸಿನ್ಹಾ ಆರೋಪಿಸಿದ್ದಾರೆ” ಎಂದು ತಿಳಿಸಿದ್ದಾರೆ.
It has come to light by members of the RSS who are on record — a gentleman by the name of Shantanu Sinha related to Rahul Sinha, an office bearer of the BJP in Bengal has alleged that Mr Amit Malviya, the head of BJP IT Cell has indulged in nefarious activities, he has indulged… pic.twitter.com/OX4x1QqJHi
— Congress (@INCIndia) June 10, 2024
“ನಾವು ಬಿಜೆಪಿಗೆ ಕೇಳುವ ಏಕೈಕ ವಿಷಯವೆಂದರೆ ಮಹಿಳೆಯರಿಗೆ ನ್ಯಾಯ. ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗೆ ಬಿಜೆಪಿಯ ಪ್ರಮುಖ ಪದಾಧಿಕಾರಿಯ ವಿರುದ್ಧ ಲೈಂಗಿಕ ಶೋಷಣೆಯ ಗಂಭೀರ ಆರೋಪ ಕೇಳಿ ಬಂದಿದೆ. ನಾವು ಅಮಿತ್ ಮಾಳವೀಯಾ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸುತ್ತಿದ್ದೇವೆ” ಎಂದು ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.
“ಇದು ಬಿಜೆಪಿಯ ಐಟಿ ಸೆಲ್ಲಾ..ಇಲ್ಲ ಅಪರಾಧಿಗಳ ಕೂಟವೇ? ಮಹಿಳೆಯರ ವಿರುದ್ಧದ ಯಾವುದೇ ಅಪರಾಧದಲ್ಲಿ ಬಿಜೆಪಿ ನಾಯಕರೇ ಯಾವಾಗಲೂ ಆರೋಪಿಯಾಗಿರುವುದು ಏಕೆ? ಬಿಜೆಪಿ ಪದಾಧಿಕಾರಿಯ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದರೂ, ಇಡೀ ಬಿಜೆಪಿ ಮೌನವಾಗಿರುವುದು ಏಕೆ? ಇಂತಹ ಆರೋಪಗಳ ಬಗ್ಗೆ ಮೌನವಹಿಸುವುದರ ಹಿಂದಿನ ಸತ್ಯವೇನು, ಈ ಪದಾಧಿಕಾರಿಯನ್ನು ಏಕೆ ಮತ್ತು ಯಾರ ಇಚ್ಛೆಯಂತೆ ರಕ್ಷಿಸಲಾಗುತ್ತಿದೆ? ಸದಾ ಆರೋಪಿಗಳಿಗೆ ರಕ್ಷಣೆ ನೀಡುವ ನರೇಂದ್ರ ಮೋದಿಯವರು ಮಹಿಳಾ ರಕ್ಷಣೆಯ ಬಗ್ಗೆ ಯಾವ ಬಾಯಲ್ಲಿ ಮಾತನಾಡುತ್ತಾರೆ? ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ.
हमारी मांग:
– RSS के एक वरिष्ठ पदाधिकारी के बयान पर BJP कार्रवाई करे
– इस गंभीर मामले में निष्पक्ष जांच हो, ताकि सच सामने आए
– जब तक जांच पूरी ना हो, सत्तारूढ़ दल से जुड़े पद पर यह व्यक्ति न बैठे, जिसपर यौन शोषण के आरोप हों
– इस गंभीर मामले पर महिला एवं बाल विकास मंत्रालय और… pic.twitter.com/RbBd3txxu5
— Congress (@INCIndia) June 10, 2024
ಮಾನನಷ್ಟ ಮೊಕದ್ದಮೆ ಹೂಡಿದ ಮಾಳವೀಯ
ಅಮಿತ್ ಮಾಳವೀಯಾ ಮಹಿಳೆಯರ ಲೈಂಗಿಕ ಶೋಷಣೆಯಲ್ಲಿ ತೊಡಗಿದ್ದಾರೆ ಎಂದು ಆರೆಸ್ಸೆಸ್ ಸದಸ್ಯ ಶಾಂತನು ಸಿನ್ಹಾ ಆರೋಪಿಸಿದ ಬೆನ್ನಲ್ಲೇ, ಮಾಳವೀಯ ಸೋಮವಾರ ಸಿನ್ಹಾ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ. ಲೀಗಲ್ ನೋಟಿಸ್‌ನಲ್ಲಿ, ಸಾಮಾಜಿಕ ಮಾಧ್ಯಮದಿಂದ ಸಿನ್ಹಾ ಅವರ “ಸುಳ್ಳು ಮತ್ತು ಅವಹೇಳನಕಾರಿ” ಪೋಸ್ಟ್ ಅನ್ನು ತೆಗೆದುಹಾಕುವಂತೆಯೂ ಮಾಳವಿಯಾ ಕೋರಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಬಿಭವ್ ಕುಮಾರ್ ವಿರುದ್ಧ ಹೆಚ್ಚುವರಿ ಸೆಕ್ಷನ್ ಸೇರಿಸಿದ ದೆಹಲಿ ಪೊಲೀಸರು


